1ಶಿಕ್ಷಣವನ್ನು ಪ್ರೀತಿಸುವವನು ತಿಳುವಳಿಕೆಯನ್ನು ಪ್ರೀತಿಸುವವನಾಗಿದ್ದಾನೆ; ಗದರಿಕೆ ಯನ್ನು ಹಗೆಮಾಡುವವನು ಪಶುಪ್ರಾಯನು.Whoso loveth instruction loveth knowledge: but he that hateth reproof is brutish.
2ಒಳ್ಳೆ ಯವನು ಕರ್ತನ ದಯೆಯನ್ನು ಹೊಂದುತ್ತಾನೆ; ಕುಯುಕ್ತಿ ಮಾಡುವವನನ್ನು ಆತನು ದುಷ್ಟನೆಂದು ಖಂಡಿಸುತ್ತಾನೆ.A good man obtaineth favour of the LORD: but a man of wicked devices will he condemn.
3ಯಾವನೂ ದುಷ್ಟತನದಿಂದ ಸ್ಥಿರವಾಗುವದಿಲ್ಲ; ನೀತಿವಂತರ ಬೇರು ಕದಲುವದಿಲ್ಲ.A man shall not be established by wickedness: but the root of the righteous shall not be moved.
4ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ನಾಚಿಕೆಪಡಿಸುವವಳು ಅವನ ಎಲುಬುಗಳಿಗೆ ಕೊಳೆ ಯುವಿಕೆಯಂತೆ ಇರುವಳು.A virtuous woman is a crown to her husband: but she that maketh ashamed is as rottenness in his bones.
5ನೀತಿವಂತರ ಆಲೋ ಚನೆಗಳು ನ್ಯಾಯವಾಗಿವೆ; ದುಷ್ಟರ ಆಲೋಚನೆಗಳು ಮೋಸ.The thoughts of the righteous are right: but the counsels of the wicked are deceit.
6ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.The words of the wicked are to lie in wait for blood: but the mouth of the upright shall deliver them.
7ದುಷ್ಟರು ಕೆಡವಲ್ಪಟ್ಟು ಇಲ್ಲದೇ ಹೋಗುವರು; ನೀತಿವಂತರ ಮನೆಯು ನಿಲ್ಲುವದು.The wicked are overthrown, and are not: but the house of the righteous shall stand.
8ತನ್ನ ಜ್ಞಾನಕ್ಕನುಸಾರವಾಗಿ ಒಬ್ಬ ಮನುಷ್ಯನು ಹೊಗ ಳಲ್ಪಡುವನು; ವಕ್ರಹೃದಯವುಳ್ಳವನು ತಿರಸ್ಕರಿಸಲ್ಪಡು ವನು.A man shall be commended according to his wisdom: but he that is of a perverse heart shall be despised.
9ರೊಟ್ಟಿಯ ಕೊರತೆ ಇದ್ದು ತನ್ನನ್ನು ತಾನೇ ಘನಪಡಿಸಿಕೊಳ್ಳುವವನಿಗಿಂತಲೂ ಸೇವಕನುಳ್ಳವನಾಗಿ ತಿರಸ್ಕರಿಸಲ್ಪಡುವವನೇ ಲೇಸು.He that is despised, and hath a servant, is better than he that honoureth himself, and lacketh bread.
10ನೀತಿವಂತನು ತನ್ನ ಪಶುವಿನ ಪ್ರಾಣವನ್ನು ರಕ್ಷಿಸುತ್ತಾನೆ. ಆದರೆ ದುಷ್ಟರ ಅಂತಃಕರುಣೆಯು ಕ್ರೂರತನವೇ.A righteous man regardeth the life of his beast: but the tender mercies of the wicked are cruel.
11ತನ್ನ ಹೊಲವನ್ನು ವ್ಯವಸಾಯ ಮಾಡುವವನು ರೊಟ್ಟಿಯಿಂದ ತೃಪ್ತಿ ಹೊಂದುವನು; ನಿಷ್ಪ್ರಯೋಜಕರನ್ನು ಹಿಂಬಾಲಿಸುವ ವನು ವಿವೇಕ ಶೂನ್ಯನು.He that tilleth his land shall be satisfied with bread: but he that followeth vain persons is void of understanding.
12ದುಷ್ಟರು ಕೆಟ್ಟವರ ಬಲೆಯನ್ನು ಅಪೇಕ್ಷಿಸುತ್ತಾರೆ; ನೀತಿವಂತರ ಬೇರು ಫಲವನ್ನು ಕೊಡುತ್ತದೆ.The wicked desireth the net of evil men: but the root of the righteous yieldeth fruit.
13ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು.The wicked is snared by the transgression of his lips: but the just shall come out of trouble.
14ತನ್ನ ಬಾಯಿಯ ಫಲದ ಮುಖಾಂತರ ಒಬ್ಬ ಮನುಷ್ಯನು ಒಳ್ಳೆಯದ ರಿಂದ ತೃಪ್ತನಾಗುವನು; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.A man shall be satisfied with good by the fruit of his mouth: and the recompence of a man's hands shall be rendered unto him.
15ಅವಿವೇಕಿಯ ಮಾರ್ಗ ವು ತನ್ನ ಕಣ್ಣುಗಳಿಗೆ ನೆಟ್ಟಗಾಗಿದೆ; ಆಲೋಚನೆಗೆ ಕಿವಿಗೊಡುವವನು ಜ್ಞಾನಿಯಾಗಿದ್ದಾನೆ.The way of a fool is right in his own eyes: but he that hearkeneth unto counsel is wise.
16ಅವಿವೇ ಕಿಯ ಕೋಪವು ತಟ್ಟನೆ ರಟ್ಟಾಗುವದು; ಜಾಣನು ಅವಮಾನವನ್ನು ಮರೆಮಾಡುತ್ತಾನೆ.A fool's wrath is presently known: but a prudent man covereth shame.
17ಸತ್ಯವನ್ನಾ ಡುವವನು ನ್ಯಾಯವನ್ನೂ ಸುಳ್ಳುಸಾಕ್ಷಿಯು ಮೋಸ ವನ್ನೂ ತೋರ್ಪಡಿಸುತ್ತಾನೆ.He that speaketh truth sheweth forth righteousness: but a false witness deceit.
18ಕತ್ತಿಯ ಇರಿತದ ಹಾಗೆ ಮಾತನಾಡುವದು ಉಂಟು. ಜ್ಞಾನವಂತರ ನಾಲಿಗೆಯು ಆರೋಗ್ಯ.There is that speaketh like the piercings of a sword: but the tongue of the wise is health.
19ಸತ್ಯದ ತುಟಿಯು ಸದಾ ಸ್ಥಿರಗೊಳ್ಳು ವದು; ಸುಳ್ಳಾಡುವ ನಾಲಿಗೆಯು ಕ್ಷಣಿಕ.The lip of truth shall be established for ever: but a lying tongue is but for a moment.
20ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.Deceit is in the heart of them that imagine evil: but to the counsellors of peace is joy.
21ನೀತಿವಂತನಿಗೆ ಯಾವ ಕೇಡೂ ಸಂಭವಿಸದು; ದುಷ್ಟರಾದರೋ ಕೇಡಿನಿಂದ ತುಂಬಿಕೊಳ್ಳುವರು.There shall no evil happen to the just: but the wicked shall be filled with mischief.
22ಸುಳ್ಳಾ ಡುವ ತುಟಿಗಳು ಕರ್ತನಿಗೆ ಅಸಹ್ಯವಾಗಿವೆ. ಸತ್ಯದಿಂದ ನಡೆದುಕೊಳ್ಳುವವರು ಆತನ ಆನಂದವಾಗಿದ್ದಾರೆ.Lying lips are abomination to the LORD: but they that deal truly are his delight.
23ಜಾಣನು ತಿಳಿದದ್ದನ್ನು ಗುಪ್ತಪಡಿಸುತ್ತಾನೆ. ಅವಿವೇಕಿ ಗಳ ಹೃದಯವು ಅವಿವೇಕತ್ವವನ್ನು ಪ್ರಕಟಿಸುತ್ತದೆ.A prudent man concealeth knowledge: but the heart of fools proclaimeth foolishness.
24ಚುರುಕು ಕೈಯುಳ್ಳವನು ಆಳುವನು, ಸೋಮಾರಿ ಗಳು ಕಪ್ಪಕೊಡುವವರಾಗುವರು.The hand of the diligent shall bear rule: but the slothful shall be under tribute.
25ಮನುಷ್ಯನ ಹೃದ ಯದಲ್ಲಿರುವ ಭಾರವು ಅದನ್ನು ಕುಗ್ಗಿಸುವದು; ಒಳ್ಳೆಯ ಮಾತು ಅದನ್ನು ಹಿಗ್ಗುವಂತೆ ಮಾಡುವದು.Heaviness in the heart of man maketh it stoop: but a good word maketh it glad.
26ನೀತಿ ವಂತನು ತನ್ನ ನೆರೆಯವನಿಗಿಂತ ಶ್ರೇಷ್ಠನಾಗಿದ್ದಾನೆ; ದುಷ್ಟರ ಮಾರ್ಗವು ಅವರನ್ನು ತಪ್ಪು ದಾರಿಗೆ ಎಳೆ ಯುತ್ತದೆ.The righteous is more excellent than his neighbour: but the way of the wicked seduceth them.
27ಸೋಮಾರಿಯು ಬೇಟೆಯಾಡಿದ್ದನ್ನು ಬೇಯಿಸುವದಿಲ್ಲ; ಆದರೆ ಶ್ರದ್ಧೆಯುಳ್ಳವನ ಆಸ್ತಿಯು ಅಮೂಲ್ಯವಾಗಿದೆ.The slothful man roasteth not that which he took in hunting: but the substance of a diligent man is precious.
28ನೀತಿಯ ಮಾರ್ಗದಲ್ಲಿ ಜೀವ ವಿದೆ; ಅದರ ದಾರಿಯಲ್ಲಿ ಮರಣವೇ ಇಲ್ಲ.In the way of righteousness is life: and in the pathway thereof there is no death.