11 ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ.Now these are the judgments which thou shalt set before them.
2ನೀನು ಇಬ್ರಿಯ ದಾಸನನ್ನು ಕೊಂಡುಕೊಂಡರೆ ಅವನು ಆರು ವರುಷ ನಿನಗೆ ಸೇವೆಮಾಡಬೇಕು; ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಅವನು ಹೋಗಲಿ.If thou buy an Hebrew servant, six years he shall serve: and in the seventh he shall go out free for nothing.
3ಅವನು ಒಬ್ಬನಾಗಿ ಬಂದಿದ್ದರೆ ಒಬ್ಬನಾಗಿಯೇ ಹೋಗ ಬೇಕು. ಅವನು ಮದುವೆಯಾದವನಾಗಿದ್ದರೆ ಅವನ ಹೆಂಡತಿಯು ಅವನ ಸಂಗಡ ಹೋಗಬೇಕು.If he came in by himself, he shall go out by himself: if he were married, then his wife shall go out with him.
4ಅವನ ಯಜಮಾನನು ಅವನಿಗೆ ಕೊಟ್ಟ ಹೆಂಡತಿಯು ಅವನಿಗೆ ಕುಮಾರರನ್ನೂ ಕುಮಾರ್ತೆಯರನ್ನೂ ಹೆತ್ತಿದ್ದರೆ ಹೆಂಡತಿಯೂ ಅವಳ ಮಕ್ಕಳೂ ಯಜಮಾನನವ ರಾಗಿರಬೇಕು. ಅವನು ಒಬ್ಬನಾಗಿಯೇ ಹೋಗಬೇಕು.If his master have given him a wife, and she have born him sons or daughters; the wife and her children shall be her master's, and he shall go out by himself.
5ಆದರೆ ದಾಸನು--ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿಯನ್ನೂ ನನ್ನ ಮಕ್ಕಳನ್ನೂ ಪ್ರೀತಿ ಮಾಡು ತ್ತೇನೆ. ಆದದರಿಂದ ನಾನು ಬಿಡುಗಡೆಯಾಗಿ ಹೋಗು ವದಕ್ಕೆ ಮನಸ್ಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆAnd if the servant shall plainly say, I love my master, my wife, and my children; I will not go out free:
6ಅವನ ಯಜಮಾನನು ಅವನನ್ನು ನ್ಯಾಯಾಧೀಶರ ಬಳಿಗೆ ಕರಕೊಂಡು ಬಂದು ಬಾಗಲಿನ ಬಳಿಗಾದರೂ ಅದರ ಕಂಬದ ಬಳಿಗಾದರೂ ಬರಮಾಡಿ ಅವನ ಯಜಮಾ ನನು ಅವನ ಕಿವಿಯನ್ನು ಸಲಾಕಿಯಿಂದ ಚುಚ್ಚಬೇಕು. ಆಗ ಅವನು ಸದಾಕಾಲಕ್ಕೂ ಅವನ ಸೇವೆಮಾಡಬೇಕು.Then his master shall bring him unto the judges; he shall also bring him to the door, or unto the door post; and his master shall bore his ear through with an awl; and he shall serve him for ever.
7ಒಬ್ಬನು ತನ್ನ ಮಗಳನ್ನು ದಾಸಿಯನ್ನಾಗಿ ಮಾರಿದರೆ ದಾಸರು ಹೋಗುವಂತೆ ಆಕೆಯು ಹೋಗಬಾರದು.And if a man sell his daughter to be a maidservant, she shall not go out as the menservants do.
8ಅವಳನ್ನು ನಿಶ್ಚಯ ಮಾಡಿಕೊಂಡ ಯಜಮಾನನಿಗೆ ಒಂದು ವೇಳೆ ಅವಳು ಮೆಚ್ಚಿಕೆಯಾಗದೆ ಹೋದರೆ ಅವಳು ಬಿಡುಗಡೆಯಾಗುವಂತೆ ಮಾಡಲಿ; ಅವನು ಅವಳನ್ನು ವಂಚಿಸಿದ್ದರಿಂದ ಅನ್ಯರಿಗೆ ಅವಳನ್ನು ಮಾರು ವದಕ್ಕೆ ಅವನಿಗೆ ಅಧಿಕಾರವಿಲ್ಲ.If she please not her master, who hath betrothed her to himself, then shall he let her be redeemed: to sell her unto a strange nation he shall have no power, seeing he hath dealt deceitfully with her.
9ಒಂದು ವೇಳೆ ಅವನು ತನ್ನ ಮಗನಿಗೆ ಅವಳನ್ನು ನಿಶ್ಚಯಮಾಡಿದರೆ ಹೆಣ್ಣು ಮಕ್ಕಳ ನ್ಯಾಯದ ಪ್ರಕಾರ ಅವಳಿಗೆ ಮಾಡಬೇಕು.And if he have betrothed her unto his son, he shall deal with her after the manner of daughters.
10ಒಂದು ವೇಳೆ ಅವನು ತನಗೆ ಇನ್ನೊಬ್ಬ ಹೆಂಡತಿ ಯನ್ನು ತಕ್ಕೊಂಡರೆ ಅವಳ ಅನ್ನ ವಸ್ತ್ರ ಸಹವಾಸಗಳನ್ನು ಕಡಿಮೆಮಾಡಬಾರದು.If he take him another wife; her food, her raiment, and her duty of marriage, shall he not diminish.
11ಈ ಮೂರನ್ನು ಅವಳಿಗೆ ಮಾಡದೆ ಹೋದರೆ ಅವಳು ಹಣಕೊಡದೆ ಸ್ವತಂತ್ರ ಳಾಗಿ ಹೋಗಬಹುದು.And if he do not these three unto her, then shall she go out free without money.
12ಮನುಷ್ಯನನ್ನು ಸಾಯುವಂತೆ ಹೊಡೆದವನು ಖಂಡಿತವಾಗಿ ಸಾಯಬೇಕು.He that smiteth a man, so that he die, shall be surely put to death.
13ಆದರೆ ಅವನು ಹೊಂಚಿ ನೋಡದೆ ಇದ್ದು ದೇವರು ಅವನ ಕೈಗೆ ಅವನನ್ನು ಒಪ್ಪಿಸಿದ್ದಾಗಿದ್ದರೆ ಅವನು ಓಡಿಹೋಗುವಂತೆ ಅವನಿಗೆ ಒಂದು ಸ್ಥಳವನ್ನು ನಿನಗೆ ನಾನು ನೇಮಿಸುವೆನು.And if a man lie not in wait, but God deliver him into his hand; then I will appoint thee a place whither he shall flee.
14ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.But if a man come presumptuously upon his neighbor, to slay him with guile; thou shalt take him from mine altar, that he may die.
15ತಂದೆ ತಾಯಿಗಳನ್ನು ಹೊಡೆಯುವವನು ಖಂಡಿತವಾಗಿ ಸಾಯಬೇಕು.And he that smiteth his father, or his mother, shall be surely put to death.
16ಮನುಷ್ಯನನ್ನು ಕದ್ದವನಿಗೆ ಅವನನ್ನು ಮಾರಿದರೂ ತನ್ನಲ್ಲಿಯೇ ಇಟ್ಟುಕೊಂಡರೂ ಅವನು ಖಂಡಿತವಾಗಿ ಸಾಯಬೇಕು.And he that stealeth a man, and selleth him, or if he be found in his hand, he shall surely be put to death.
17ತಂದೆಗಾದರೂ ತಾಯಿಗಾದರೂ ಶಾಪಕೊಟ್ಟ ವನು ಖಂಡಿತವಾಗಿ ಸಾಯಬೇಕು.And he that curseth his father, or his mother, shall surely be put to death.
18ಇಬ್ಬರು ಜಗಳವಾಡುವಾಗ ಒಬ್ಬನು ಮತ್ತೊಬ್ಬ ನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದ ದ್ದರಿಂದ ಅವನು ಸಾಯದೆ ಹಾಸಿಗೆಯಲ್ಲಿ ಬಿದ್ದರೆAnd if men strive together, and one smite another with a stone, or with his fist, and he die not, but keepeth his bed:
19ಅವನು ಎದ್ದು ಕೋಲೂರಿಕೊಂಡು ತಿರುಗಾಡು ವಾಗ ಅವನಿಗೆ ಹೊಡೆದವನು ಅಪರಾಧವಿಲ್ಲದೆ ಹೋಗಬೇಕು. ಅವನ ನಷ್ಟವಾದ ಸಮಯಕ್ಕಾಗಿ ಮಾತ್ರ ಅವನಿಗೆ ಹಣ ಕೊಡಬೇಕು. ಅವನನ್ನು ಪೂರ್ಣ ಸ್ವಸ್ಥಮಾಡಿಸಬೇಕು.If he rise again, and walk abroad upon his staff, then shall he that smote him be quit: only he shall pay for the loss of his time, and shall cause him to be thoroughly healed.
20ಒಬ್ಬನು ದಾಸನನ್ನಾಗಲಿ ದಾಸಿಯನ್ನಾಗಲಿ ಸಾಯು ವಂತೆ ತನ್ನ ಕೋಲಿನಿಂದ ಹೊಡೆದರೆ ಅವನಿಗೆ ಖಂಡಿತವಾಗಿ ಶಿಕ್ಷೆಯಾಗಬೇಕು.And if a man smite his servant, or his maid, with a rod, and he die under his hand; he shall be surely punished.
21ಆದರೂ ಅವನು ಒಂದೆರೆಡು ದಿನಗಳು ಉಳಿದರೆ ಶಿಕ್ಷೆಯಾಗಬಾರದು. ಅವನು ಅವನ ಸೊತ್ತು.Notwithstanding, if he continue a day or two, he shall not be punished: for he is his money.
22ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿ ಯಾದ ಸ್ತ್ರೀಗೆ ಏಟು ತಗಲಿದದರಿಂದ ಅವಳಿಗೆ ಗರ್ಭ ಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಸ್ತ್ರೀಯ ಗಂಡನು ನ್ಯಾಯಾಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತು ಮಾಡು ತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು.If men strive, and hurt a woman with child, so that her fruit depart from her, and yet no mischief follow: he shall be surely punished, according as the woman's husband will lay upon him; and he shall pay as the judges determine.
23ನಷ್ಟ ವಾದ ಪಕ್ಷದಲ್ಲಿ ಪ್ರಾಣಕ್ಕೆ ಪ್ರಾಣವನ್ನೂAnd if any mischief follow, then thou shalt give life for life,
24ಕಣ್ಣಿಗೆ ಕಣ್ಣನ್ನೂ ಹಲ್ಲಿಗೆ ಹಲ್ಲನ್ನೂ ಕೈಗೆ ಕೈಯನ್ನೂ ಕಾಲಿಗೆ ಕಾಲನ್ನೂEye for eye, tooth for tooth, hand for hand, foot for foot,
25ಬರೆಗೆ ಬರೆ, ಗಾಯಕ್ಕೆ ಗಾಯ, ಏಟಿಗೆ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.Burning for burning, wound for wound, stripe for stripe.
26ಇದಲ್ಲದೆ ಒಬ್ಬನು ದಾಸನ ಕಣ್ಣನ್ನು ಇಲ್ಲವೆ ದಾಸಿಯ ಕಣ್ಣನ್ನು ಹೊಡೆದು ನಷ್ಟಪಡಿಸಿದರೆ ಆ ಕಣ್ಣಿಗೋಸ್ಕರ ಅವನನ್ನು ಬಿಡುಗಡೆಮಾಡಿ ಅವನು ಕಳುಹಿಸಲಿ.And if a man smite the eye of his servant, or the eye of his maid, that it perish; he shall let him go free for his eye's sake.
27ಒಬ್ಬನು ದಾಸನ ಹಲ್ಲನ್ನು ಇಲ್ಲವೆ ದಾಸಿಯ ಹಲ್ಲನ್ನು ಉದುರಿಸಿದರೆ ಹಲ್ಲಿಗೋಸ್ಕರ ಅವನನ್ನು ಬಿಡುಗಡೆಮಾಡಿ ಕಳುಹಿಸಲಿ.And if he smite out his manservant's tooth, or his maidservant's tooth; he shall let him go free for his tooth's sake.
28ಇದಲ್ಲದೆ ಯಾವದಾದರೂ ಒಂದು ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಹಾದು ಕೊಂದರೆ ಆ ಎತ್ತನ್ನು ಖಂಡಿತವಾಗಿ ಕಲ್ಲೆಸೆದು ಕೊಲ್ಲಬೇಕು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಯಜಮಾನನು ನಿರಪರಾಧಿಯಾಗಿರಬೇಕು.If an ox gore a man or a woman, that they die: then the ox shall be surely stoned, and his flesh shall not be eaten; but the owner of the ox shall be quit.
29ಆದರೆ ಆ ಎತ್ತು ಮೊದಲಿನಿಂದ ಹಾಯುವಂಥದ್ದೆಂದು ಯಜಮಾನನಿಗೆ ತಿಳಿದಿದ್ದರೂ ಅವನು ಅದನ್ನು ಭದ್ರಮಾಡದೆ ಇದ್ದದರಿಂದ ಅದು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದುಹಾಕಿದರೆ ಎತ್ತನ್ನು ಕಲ್ಲೆಸೆದು ಕೊಲ್ಲಬೇಕು; ಅದರ ಯಜಮಾನನೂ ಸಾಯಬೇಕು.But if the ox were wont to push with his horn in time past, and it hath been testified to his owner, and he hath not kept him in, but that he hath killed a man or a woman; the ox shall be stoned, and his owner also shall be put to death.
30ಒಂದು ವೇಳೆ ಅವನಿಗೆ ಪ್ರಾಯಶ್ಚಿತ್ತವನ್ನು ನೇಮಿ ಸಿದರೆ ಅವನು ತನಗೆ ನೇಮಿಸಿದ್ದನ್ನು ತನ್ನ ಪ್ರಾಣ ವಿಮೋಚನೆಗಾಗಿ ಕೊಡಲಿ.If there be laid on him a sum of money, then he shall give for the ransom of his life whatsoever is laid upon him.
31ಅದು ಮಗನನ್ನಾಗಲಿ ಮಗಳನ್ನಾಗಲಿ ತಿವಿದರೂ ಈ ನ್ಯಾಯತೀರ್ಪಿನ ಪ್ರಕಾರ ಅದರ ಯಜಮಾನನಿಗೆ ಮಾಡಬೇಕು.Whether he have gored a son, or have gored a daughter, according to this judgment shall it be done unto him.
32ದಾಸನನ್ನಾದರೂ ದಾಸಿಯನ್ನಾದರೂ ಎತ್ತು ತಿವಿ ದರೆ ಅವರ ಯಜಮಾನನಿಗೆ ಮೂವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಎತ್ತನ್ನು ಕಲ್ಲೆಸೆದು ಕೊಲ್ಲಬೇಕು.If the ox shall push a manservant or a maidservant; he shall give unto their master thirty shekels of silver, and the ox shall be stoned.
33ಇದಲ್ಲದೆ ಗುಂಡಿಯನ್ನು ಅಗೆದವನು ಅದನ್ನು ಮುಚ್ಚದೆ ಇದ್ದದ್ದರಿಂದ ಎತ್ತಾದರೂ ಕತ್ತೆಯಾದರೂ ಗುಂಡಿಯಲ್ಲಿ ಬಿದ್ದರೆAnd if a man shall open a pit, or if a man shall dig a pit, and not cover it, and an ox or an ass fall therein;
34ಗುಂಡಿಯನ್ನು ಅಗೆದವನು ಕ್ರಯ ಕೊಡಬೇಕು. ಅವುಗಳ ಯಜಮಾನನಿಗೆ ಹಣ ತೀರಿಸಬೇಕು. ಆದರೆ ಸತ್ತ ಪಶುವು ಅವನದಾಗಬೇಕು.The owner of the pit shall make it good, and give money unto the owner of them; and the dead beast shall be his.
35ಇದಲ್ಲದೆ ಒಬ್ಬನ ಎತ್ತು ಮತ್ತೊಬ್ಬನ ಎತ್ತನ್ನು ಹಾಯ್ದುಕೊಂದರೆ ಜೀವದಿಂದಿರುವ ಎತ್ತನ್ನು ಮಾರಿ ಅದರ ಕ್ರಯವನ್ನು ಪಾಲು ಹಂಚಬೇಕು. ಸತ್ತ ಎತ್ತನ್ನು ಸಹ ಪಾಲು ಹಂಚಬೇಕು.And if one man's ox hurt another's, that he die; then they shall sell the live ox, and divide the money of it; and the dead ox also they shall divide.
36ಇಲ್ಲವೆ ಆ ಎತ್ತು ಮೊದಲಿನಿಂದಲೂ ಹಾಯುವಂಥದ್ದೇ ಎಂದು ತಿಳಿದಿ ದ್ದರೂ ಅದರ ಯಜಮಾನನು ಅದನ್ನು ಭದ್ರಮಾಡದೆ ಹೋಗಿದ್ದರೆ ಎತ್ತಿಗೆ ಎತ್ತನ್ನು ಖಂಡಿತವಾಗಿ ಬದಲು ಕೊಡಬೇಕು. ಆದರೆ ಸತ್ತ ಪಶುವು ಅವನದಾಗಬೇಕು.Or if it be known that the ox hath used to push in time past, and his owner hath not kept him in; he shall surely pay ox for ox; and the dead shall be his own.