Romans 4 - BBE (Kannada)
1 What, then, may we say that Abraham, our father after the flesh, has got?ಹಾಗಾದರೆ ನಮ್ಮ ಮೂಲಪಿತೃವಾಗಿರುವ ಅಬ್ರಹಾಮನು ಶರೀರಸಂಬಂಧವಾಗಿ ಏನು ಪಡೆದುಕೊಂಡನೆಂದು ಹೇಳಬೇಕು?
2 For if Abraham got righteousness by works, he has reason for pride; but not before God.ಅಬ್ರಹಾ ಮನು ಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಅಸ್ಪದವಿರುವದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ.
3 But what does it say in the holy Writings? And Abraham had faith in God, and it was put to his account as righteousness.ಹಾಗಾದರೆ ಬರಹವು ಹೇಳುವ ದೇನು? ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು.
4 Now, the reward is credited to him who does works, not as of grace but as a debt.ಕೆಲಸ ಮಾಡಿದವನಿಗೆ ಬರುವ ಸಂಬಳವು ಕೃಪೆಯಿಂದ ದೊರಕುವಂಥದ್ದೆಂದು ಎಣಿಕೆ ಯಾಗುವದಿಲ್ಲ; ಅದು ಸಲ್ಲತಕ್ಕದ್ದೇ.
5 But to him who without working has faith in him who gives righteousness to the evil-doer, his faith is put to his account as righteousness.ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆ ಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು.
6 As David says that there is a blessing on the man to whose account God puts righteousness without works, saying,ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ.
7 Happy are those who have forgiveness for their wrongdoing, and whose sins are covered.ಹೇಗಂ ದರೆ--ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಪಾಪಗಳು ಮುಚ್ಚಿವೆಯೋ ಅವರೇ ಧನ್ಯರು;
8 Happy is the man against whom no sin is recorded by the Lord.ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವ ದಿಲ್ಲವೋ ಆ ಮನುಷ್ಯನೇ ಧನ್ಯನು ಎಂಬದು.
9 Is this blessing, then, for the circumcision only, or in the same way for those who have not circumcision? for we say that the faith of Abraham was put to his account as righteousness.ಈ ಧನ್ಯತೆಯು ಸುನ್ನತಿಯಿದ್ದವರಿಗೆ ಮಾತ್ರವೋ? ಇಲ್ಲವೆ ಸುನ್ನತಿಯಿಲ್ಲದವರಿಗೂ ಆಗುತ್ತದೋ? ಯಾಕಂದರೆ ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತೆಂಬದಾಗಿ ನಾವು ಹೇಳುತ್ತೇವಲ್ಲಾ.
10 How, then, was it judged? when he had circumcision, or when he had it not? Not when he had it, but when he did not have it:ಹಾಗಾದರೆ ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗು ವದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವದಕ್ಕೆ ಮೊದಲೇ ಎಣಿಸಲ್ಪಟ್ಟಿತು.
11 And he was given the sign of circumcision as a witness of the faith which he had before he underwent circumcision: so that he might be the father of all those who have faith, though they have not circumcision, and so that righteousness might be put to their account;ಆಮೇಲೆ ನೀತಿಗೆ ಮುದ್ರೆಯಾಗಿ ಸುನ್ನತಿಯನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾಯಿತು. ಹೀಗೆ ಅವನು ನಂಬುವವರೆಲ್ಲರಿಗೆ ಅಂದರೆ ಅವರು ಸುನ್ನತಿ ಯಿಲ್ಲದವರಾದಾಗ್ಯೂ ಅವರಿಗೆ ತಂದೆಯಾದನು; ಹೀಗೆ ಅವರೂ ನೀತಿವಂತರೆಂದು ಎಣಿಸಲ್ಪಡುವರು.
12 And the father of circumcision to those who not only are of the circumcision, but who keep to the way of that faith which our father Abraham had before he underwent circumcision.ಇದಲ್ಲದೆ ಸುನ್ನತಿಯಿದ್ದವರಿಗೆ ತಂದೆಯಾದವನು ಸುನ್ನತಿಯವರಿಗೆ ಮಾತ್ರವಲ್ಲ, ಆದರೆ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವದಕ್ಕೆ ಮುಂಚೆ ನಡೆದ ನಂಬಿಕೆಯ ಹೆಜ್ಜೆಜಾಡಿನಲ್ಲಿ ನಡೆಯುತ್ತಿರುವ ಸುನ್ನತಿ ಯಿಲ್ಲದವರಿಗೂ ತಂದೆಯಾಗಿದ್ದಾನೆ.
13 For God's word, that the earth would be his heritage, was given to Abraham, not through the law, but through the righteousness of faith.ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು.
14 For if they who are of the law are the people who get the heritage, then faith is made of no use, and the word of God has no power;ನ್ಯಾಯ ಪ್ರಮಾಣವನ್ನನುಸರಿಸುವವರು ಬಾಧ್ಯರಾಗಿದ್ದರೆ ನಂಬಿ ಕೆಯು ವ್ಯರ್ಥವಾಯಿತು, ವಾಗ್ದಾನವೂ ನಿರರ್ಥಕ ವಾಯಿತು.
15 For the outcome of the law is wrath; but where there is no law it will not be broken.ನ್ಯಾಯಪ್ರಮಾಣವು ದೇವರ ಕೋಪಕ್ಕೆ ಗುರಿಮಾಡುವಂಥದ್ದು. ನ್ಯಾಯಪ್ರಮಾಣವಿಲ್ಲದ ಪಕ್ಷ ದಲ್ಲಿ ಆಜ್ಞಾತಿಕ್ರಮಣವೂ ಇಲ್ಲ;
16 For this reason it is of faith, so that it may be through grace; and so that the word of God may be certain to all the seed; not only to that which is of the law, but to that which is of the faith of Abraham, who is the father of us all,ಆದಕಾರಣ ಕೃಪೆ ಯಿಂದಲೇ ದೊರೆಯುವ ಆ ಬಾಧ್ಯತೆಯು ನಂಬಿಕೆಯ ಮುಖಾಂತರ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾ ಮನ ಸಂತತಿಯವರೆಲ್ಲರಿಗೂ ಅಂದರೆ ನ್ಯಾಯ ಪ್ರಮಾಣವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರ ವಲ್ಲದೆ ನಮ್ಮೆಲ್ಲರಿಗೆ ತಂದೆಯಾಗಿರುವ ಅಬ್ರಹಾಮ ನಲ್ಲಿದ್ದಂಥ ನಂಬಿಕೆ
17 (As it is said in the holy Writings, I have made you a father of a number of nations) before him in whom he had faith, that is, God, who gives life to the dead, and to whom the things which are not are as if they were.(ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆ ಯಾಗಿ ನೇಮಿಸಿದ್ದೇನೆ ಎಂದು ಬರೆದಿರುವ ಪ್ರಕಾರ) ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲ ದ್ದನ್ನು ಇರುವದಾಗಿ ಕರೆಯುವವನಾಗಿಯೂ ಆಗಿದ್ದಾ ನೆಂದು ದೇವರ ಮುಂದೆ ಅಬ್ರಹಾಮನು ನಂಬಿದನು.
18 Who without reason for hope, in faith went on hoping, so that he became the father of a number of nations, as it had been said, So will your seed be.ಅವನು ತಾನು ಅನೇಕ ಜನಾಂಗಗಳಿಗೆ ತಂದೆಯಾಗಿ ರುವನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ--ನಿನ್ನ ಸಂತಾನವು ಹೀಗಾಗುವದು ಎಂದು ಹೇಳಲ್ಪಟ್ಟಂತೆ ನಿರೀಕ್ಷಿಸಿ ನಂಬಿದನು.
19 And not being feeble in faith though his body seemed to him little better than dead (he being about a hundred years old) and Sarah was no longer able to have children:ಅವನು ಹೆಚ್ಚು ಕಡಿಮೆ ನೂರುವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದನು; ಆದಾಗ್ಯೂ ಅವನು ಅಪನಂಬಿಕೆಯಿಂದ ಚಂಚಲನಾಗಲಿಲ್ಲ.
20 Still, he did not give up faith in the undertaking of God, but was made strong by faith, giving glory to God,ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು.
21 And being certain that God was able to keep his word.ಆತನು ತನ್ನ ವಾಗ್ದಾನವನ್ನು ನೆರವೇರಿ ಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು.
22 For which reason it was put to his account as righteousness.ಆದದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಯೆಂದು ಎಣಿಸಲ್ಪಟ್ಟಿತು.
23 Now, it was not because of him only that this was said,ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟದ್ದು ಅವನಿಗೋಸ್ಕರ ಮಾತ್ರವಲ್ಲದೆ
24 But for us in addition, to whose account it will be put, if we have faith in him who made Jesus our Lord come back again from the dead,ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನನ್ನು ನಂಬುವ ನಾವು ನಂಬಿಕೆಯಿಂದ ನೀತಿವಂತರೆಂದು ಎಣಿಸಲ್ಪಡುವಂತೆ ನಮಗೋಸ್ಕರವೂ ಬರೆಯಲ್ಪಟ್ಟಿದೆ.
25 Who was put to death for our evil-doing, and came to life again so that we might have righteousness.ನಮ್ಮ ಅಪ ರಾಧಗಳ ನಿಮಿತ್ತ ದೇವರು ಆತನನ್ನು ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವ ಹಾಗೆ ಆತನನ್ನು ಜೀವದಿಂದ ಎಬ್ಬಿಸಿದನು.
Kannada Bible