Proverbs 31 - DBY (Kannada)
1 The words of king Lemuel, the prophecy that his mother taught him:ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ಪ್ರವಾದನೆಯು.
2 What, my son? and what, O son of my womb? and what, O son of my vows?ನನ್ನ ಮಗನೇ ಏನು? ನನ್ನ ಗರ್ಭಪುತ್ರನೇ ಏನು? ನನ್ನ ಪ್ರತಿಜ್ಞೆಯ ಮಗನೇ ಏನು?
3 Give not thy strength unto women, nor thy ways to them that destroy kings.ನಿನ್ನ ತ್ರಾಣವನ್ನು ಸ್ತ್ರೀಯರಲ್ಲಿ ಒಪ್ಪಿಸದಿರು, ಇಲ್ಲವೆ ಅರಸರನ್ನು ನಾಶಪಡಿಸುವ ದಾರಿಗಳಿಗೆ ತಿರುಗಬೇಡ.
4 It is not for kings, Lemuel, it is not for kings to drink wine, nor for rulers [to say], Where is the strong drink?ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ;
5 -- lest they drink and forget the law, and pervert the judgment of any of the children of affliction.ಕುಡಿದರೆ ಅವರು ಕಟ್ಟಿಳೆಯನ್ನು ಮರೆತು ಬಾಧಿತರಲ್ಲಿ ಯಾವನಿಗಾದರೂ ನ್ಯಾಯತೀರ್ಪನ್ನು ವ್ಯತ್ಯಾಸಮಾಡುತ್ತಾರೆ.
6 Give strong drink unto him that is ready to perish, and wine unto the bitter of soul:ನಾಶ ವಾಗುವದಕ್ಕೆ ಸಿದ್ಧವಾಗಿರುವವನಿಗೆ ಮದ್ಯವನ್ನೂ ಮನೋವ್ಯಥೆಪಡುವವರಿಗೆ ದ್ರಾಕ್ಷಾರಸವನ್ನೂ ಕೊಡು.
7 let him drink, and forget his poverty, and remember his misery no more.ಅವನು ಕುಡಿದು ತನ್ನ ಬಡತನವನ್ನು ಮರೆತುಬಿಡಲಿ; ತನ್ನ ಶ್ರೆಮೆಯನ್ನು ಇನ್ನು ಜ್ಞಾಪಕಕ್ಕೆ ತಾರದಿರಲಿ;
8 Open thy mouth for the dumb, for the cause of all those that are left desolate.ಮೂಕರಿಗಾಗಿಯೂ ನಾಶವಾಗುವದಕ್ಕೆ ನೇಮಿಸಲ್ಪಟ್ಟ ವರೆಲ್ಲರಿಗಾಗಿಯೂ ನಿನ್ನ ಬಾಯನ್ನು ತೆರೆ.
9 Open thy mouth, judge righteously, and minister justice to the afflicted and needy.ನಿನ್ನ ಬಾಯಿ ತೆರೆದು ನೀತಿಯಿಂದ ನ್ಯಾಯತೀರಿಸು; ದರಿದ್ರ ರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ವ್ಯಾಜ್ಯಮಾಡು.
10 Who can find a woman of worth? for her price is far above rubies.ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ.
11 The heart of her husband confideth in her, and he shall have no lack of spoil.ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ.
12 She doeth him good, and not evil, all the days of her life.ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೇದನ್ನೇ ಮಾಡುವಳು.
13 She seeketh wool and flax, and worketh willingly with her hands.ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ.
14 She is like the merchants' ships: she bringeth her food from afar;ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ.
15 And she riseth while it is yet night, and giveth meat to her household, and the day's work to her maidens.ಆಕೆಯು ಇನ್ನೂ ಕತ್ತಲಿರುವಾಗಲೇ ಎದ್ದು ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು ತನ್ನ ದಾಸಿಯರಿಗೆ ಭತ್ಯವನ್ನು ಹಂಚುತ್ತಾಳೆ.
16 She considereth a field, and acquireth it; of the fruit of her hands she planteth a vineyard.ಆಕೆಯು ಯೋಚಿಸಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ತನ್ನ ಕೈಕೆಲಸದ ಫಲದಿಂದ ಆಕೆಯು ದ್ರಾಕ್ಷಾಲತೆಗಳನ್ನು ನೆಡುತ್ತಾಳೆ.
17 She girdeth her loins with strength, and maketh strong her arms.ಆಕೆಯು ತನ್ನ ಬಲದಿಂದ ನಡುವನ್ನು ಕಟ್ಟಿಕೊಂಡು ತನ್ನ ತೋಳುಗಳನ್ನು ಶಕ್ತಿಗೊಳಿಸುತ್ತಾಳೆ.
18 She perceiveth that her earning is good; her lamp goeth not out by night.ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ; ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
19 She putteth her hands to the distaff, and her hands hold the spindle.ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ.
20 She stretcheth out her hand to the afflicted, and she reacheth forth her hands to the needy.ಆಕೆಯು ಬಡವರಿಗಾಗಿ ಕೈ ಬಿಚ್ಚುತ್ತಾಳೆ; ಹೌದು, ದಿಕ್ಕಿಲ್ಲದವರಿಗೆ ಆಕೆಯು ಕೈ ನೀಡುತ್ತಾಳೆ.
21 She is not afraid of the snow for her household; for all her household are clothed with scarlet.ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ.
22 She maketh herself coverlets; her clothing is byssus and purple.ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ.
23 Her husband is known in the gates, when he sitteth among the elders of the land.ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು.
24 She maketh body linen and selleth it, and delivereth girdles unto the merchant.ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ.
25 Strength and dignity are her clothing, and she laugheth [at] the coming day.ಆಕೆಯ ಉಡುಪು ಬಲವೂ ಘನತೆಯೂ ಆಗಿವೆ; ಭವಿಷ್ಯತ್ತಿ ನಲ್ಲಿ ಆಕೆಯು ಸಂತೋಷಿಸುವಳು.
26 She openeth her mouth with wisdom; and upon her tongue is the law of kindness.ಆಕೆಯು ಜ್ಞಾನದಿಂದ ತನ್ನ ಬಾಯಿ ತೆರೆಯುತ್ತಾಳೆ; ತನ್ನ ನಾಲಿಗೆಯಲ್ಲಿ ದಯೆಯ ಉಪದೇಶವಿರುವದು.
27 She surveyeth the ways of her household, and eateth not the bread of idleness.ಆಕೆಯು ತನ್ನ ಗೃಹಕೃತ್ಯಗಳ ನ್ನೆಲ್ಲಾ ಚೆನ್ನಾಗಿ ನೋಡಿಕೊಂಡವಳಾಗಿ ಸೋಮಾರಿ ತನದ ರೊಟ್ಟಿಯನ್ನು ತಿನ್ನುವದಿಲ್ಲ.
28 Her children rise up and call her blessed; her husband [also], and he praiseth her:ಆಕೆಯ ಮಕ್ಕಳು ಎದ್ದು ಆಕೆಯನ್ನು ಧನ್ಯಳೆಂದು ಕರೆಯುತ್ತಾರೆ; ಆಕೆಯ ಪತಿಯು ಸಹ ಹೊಗಳುತ್ತಾನೆ.
29 Many daughters have done worthily, but thou excellest them all.ಅವನು--ಬಹು ಮಂದಿ ಕುಮಾರ್ತೆಯರು ಗುಣವತಿಯಾಗಿ ನಡೆದಿ ದ್ದಾರೆ; ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು ಎಂದು ತನ್ನ ಪತಿಯು ಹೊಗಳುತ್ತಾನೆ.
30 Gracefulness is deceitful and beauty is vain; a woman [that] feareth Jehovah, she shall be praised.ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು.
31 Give her of the fruit of her hands, and let her own works praise her in the gates.ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ.
Kannada Bible