Proverbs 15 - YLT (Kannada)
1 A soft answer turneth back fury, And a grievous word raiseth up anger.ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತು ಗಳು ಕೋಪವನ್ನು ಎಬ್ಬಿಸುತ್ತವೆ.
2 The tongue of the wise maketh knowledge good, And the mouth of fools uttereth folly.ಜ್ಞಾನಿಯ ನಾಲಿ ಗೆಯು ತಿಳುವಳಿಕೆಯನ್ನು ಸರಿಯಾಗಿ ಉಪಯೋಗಿ ಸುತ್ತದೆ. ಬುದ್ಧಿಹೀನರ ಬಾಯಿಯು ಬುದ್ಧಿಹೀನತೆಯನ್ನು ಹೊರಗೆಡುವುತ್ತದೆ.
3 In every place are the eyes of Jehovah, Watching the evil and the good.ಕೆಟ್ಟವರನ್ನು ಒಳ್ಳೆಯವರನ್ನು ನೋಡುತ್ತಾ ಕರ್ತನ ಕಣ್ಣುಗಳು ಪ್ರತಿಯೊಂದು ಸ್ಥಳ ದಲ್ಲಿವೆ.
4 A healed tongue `is' a tree of life, And perverseness in it -- a breach in the spirit.ಹಿತವಾದ ನಾಲಿಗೆಯು ಜೀವವೃಕ್ಷ; ಅದರಲ್ಲಿ ಮೂರ್ಖತ್ವವು ಆತ್ಮಕ್ಕೆ ಒಡಕು.
5 A fool despiseth the instruction of his father, And whoso is regarding reproof is prudent.ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು;
6 `In' the house of the righteous `is' abundant strength, And in the increase of the wicked -- trouble.ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು; ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು.
7 The lips of the wise scatter knowledge, And the heart of fools `is' not right.ಜ್ಞಾನಿಗಳ ತುಟಿಗಳು ತಿಳುವ ಳಿಕೆಯನ್ನು ಚೆಲ್ಲುತ್ತವೆ; ಬುದ್ಧಿಹೀನರ ಹೃದಯವು ಹಾಗೆ ಮಾಡುವದೇ ಇಲ್ಲ.
8 The sacrifice of the wicked `is' an abomination to Jehovah, And the prayer of the upright `is' His delight.ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
9 An abomination to Jehovah `is' the way of the wicked, And whoso is pursuing righteousness He loveth.ದುಷ್ಟರ ಮಾರ್ಗವು ಕರ್ತನಿಗೆ ಅಸಹ್ಯ; ನೀತಿಯನ್ನು ಹಿಂಬಾಲಿಸುವವನನ್ನು ಆತನು ಪ್ರೀತಿಸು ತ್ತಾನೆ.
10 Chastisement `is' grievous to him who is forsaking the path, Whoso is hating reproof dieth.ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ; ಗದರಿಕೆಯನ್ನು ಹಗೆಮಾಡುವವನು ಸಾಯುವನು.
11 Sheol and destruction `are' before Jehovah, Surely also the hearts of the sons of men.ಪಾತಾಳವೂ ನಾಶನವೂ ಕರ್ತನ ಎದುರಿನಲ್ಲಿವೆ; ಹಾಗಾದರೆ ಮನುಷ್ಯರ ಹೃದಯಗಳು ಇನ್ನೂ ಎಷ್ಟೋ ಹೆಚ್ಚಾಗಿ ಆತನ ಮುಂದೆ ಇವೆಯಲ್ಲವೇ.
12 A scorner loveth not his reprover, Unto the wise he goeth not.ತನ್ನನ್ನು ಗದರಿಸುವವನು ಪರಿಹಾಸ್ಯಕರನನ್ನು ಪ್ರೀತಿ ಮಾಡುವದಿಲ್ಲ, ಇಲ್ಲವೆ ಅವನು ಜ್ಞಾನಿಗಳ ಕಡೆಗೆ ಹೋಗುವದು ಇಲ್ಲ.
13 A joyful heart maketh glad the face, And by grief of heart is the spirit smitten.ಸಂತೋಷಪಡುವ ಹೃದ ಯವು ಕಾಂತಿಯುಳ್ಳ ಮುಖಭಾವ ತೋರುವದು; ಹೃದಯ ವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.
14 The heart of the intelligent seeketh knowledge, And the mouth of fools enjoyeth folly.ವಿವೇಕವುಳ್ಳವನ ಹೃದಯವು ತಿಳುವಳಿಕೆಯನ್ನು ಹುಡುಕುತ್ತದೆ; ಬುದ್ಧಿಹೀನರ ಬಾಯಿಯು ಬುದ್ಧಿಹೀನತೆ ಯನ್ನೇ ತಿನ್ನುತ್ತದೆ.
15 All the days of the afflicted `are' evil, And gladness of heart `is' a perpetual banquet.ಬಾಧಿತರ ದಿನಗಳೆಲ್ಲವೂ ಕೆಟ್ಟ ವುಗಳೇ. ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.
16 Better `is' a little with the fear of Jehovah, Than much treasure, and tumult with it.ಕಳವಳದಿಂದ ಕೂಡಿದ ದೊಡ್ಡ ಸಂಪತ್ತಿ ಗಿಂತ ಕರ್ತನ ಭಯದಿಂದ ಕೂಡಿದ ಸ್ವಲ್ಪವೇ ಉತ್ತಮ ವಾಗಿದೆ.
17 Better `is' an allowance of green herbs and love there, Than a fatted ox, and hatred with it.ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸ ಕ್ಕಿಂತ ಪ್ರೀತಿ ಇರುವಲ್ಲಿ ಸಸ್ಯಹಾರವು ಉತ್ತಮ.
18 A man of fury stirreth up contention, And the slow to anger appeaseth strife.ಕೋಪಿಷ್ಠನು ವಿವಾದವನ್ನು ಎಬ್ಬಿಸುವನು; ದೀರ್ಘ ಶಾಂತನು ವಿವಾದವನ್ನು ಶಮನಪಡಿಸುತ್ತಾನೆ.
19 The way of the slothful `is' as a hedge of briers, And the path of the upright is raised up.ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ; ನೀತಿವಂತನ ಮಾರ್ಗವು ಸರಾಗವಾಗಿದೆ.
20 A wise son rejoiceth a father. And a foolish man is despising his mother.ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸ ಗೊಳಿಸುತ್ತಾನೆ; ಬುದ್ಧಿಹೀನನಾದರೋ ತನ್ನ ತಾಯಿ ಯನ್ನು ತಿರಸ್ಕರಿಸುತ್ತಾನೆ.
21 Folly is joy to one lacking heart, And a man of intelligence directeth `his' going.ಜ್ಞಾನಹೀನನಿಗೆ ಮೂರ್ಖ ತನವು ಆನಂದವಾಗಿದೆ; ವಿವೇಕಿಯಾದರೋ ಯಥಾ ರ್ಥವಾಗಿ ನಡೆಯುತ್ತಾನೆ.
22 Without counsel `is' the making void of purposes, And in a multitude of counsellors it is established.ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವದಿಲ್ಲ; ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸ್ಥಿರಗೊಳ್ಳುತ್ತವೆ.
23 Joy `is' to a man in the answer of his mouth, And a word in its season -- how good!ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು!
24 A path of life `is' on high for the wise, To turn aside from Sheol beneath.ಕೆಳಗಿನ ಪಾತಾಳವನ್ನು ತಪ್ಪಿಸಿಕೊಳ್ಳುವ ದಕ್ಕಾಗಿ ಜ್ಞಾನಿಗಳಿಗೆ ಜೀವದ ಮಾರ್ಗವು ಎತ್ತರದಲ್ಲಿದೆ.
25 The house of the proud Jehovah pulleth down, And He setteth up the border of the widow.ಕರ್ತನು ಗರ್ವಿಷ್ಟರ ಮನೆಯನ್ನು ಹಾಳುಮಾಡು ವನು; ವಿಧವೆಯರ ಮೇರೆಯನ್ನು ಆತನು ನೆಲೆಗೊಳಿಸು ವನು.
26 An abomination to Jehovah `are' thoughts of wickedness, And pure `are' sayings of pleasantness.ದುಷ್ಟರ ಆಲೋಚನೆಯು ಕರ್ತನಿಗೆ ಅಸಹ್ಯವಾಗಿದೆ; ಶುದ್ಧನ ಮಾತುಗಳು ಸಂತೋಷಕರ ವಾದ ಮಾತುಗಳೇ.
27 A dishonest gainer is troubling his house, And whoso is hating gifts liveth.ದುರ್ಲಾಭಾಪೇಕ್ಷಕನು ತನ್ನ ಮನೆಯನ್ನು ಬಾಧಿಸುತ್ತಾನೆ; ಲಂಚವನ್ನು ಹಗೆಮಾಡುವ ವನು ಬದುಕುವನು.
28 The heart of the righteous meditateth to answer, And the mouth of the wicked uttereth evil things.ನೀತಿವಂತರ ಹೃದಯವು ಉತ್ತರಕೊಡುವದಕ್ಕೆ ಅಭ್ಯಾಸಿಸುತ್ತದೆ; ದುಷ್ಟರ ಬಾಯಿ ಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
29 Far `is' Jehovah from the wicked, And the prayer of the righteous He heareth.ಕರ್ತನು ದುಷ್ಟರಿಗೆ ದೂರ; ನೀತಿವಂತರ ಪ್ರಾರ್ಥನೆಯನ್ನು ಆತನು ಕೇಳುತ್ತಾನೆ.
30 The light of the eyes rejoiceth the heart, A good report maketh fat the bone.ಕಣ್ಣುಗಳ ಬೆಳಕು ಹೃದಯವನ್ನು ಸಂತೋಷಪಡಿಸುತ್ತದೆ; ಒಳ್ಳೆಯ ವಾರ್ತೆಯು ಎಲುಬು ಗಳನ್ನು ಪುಷ್ಟಿಮಾಡುತ್ತದೆ.
31 An ear that is hearing the reproof of life Doth lodge among the wise.ಜೀವದ ಗದರಿಕೆಗೆ ಕಿವಿ ಗೊಡುವವನು ಜ್ಞಾನಿಗಳ ನಡುವೆ ವಾಸವಾಗಿದ್ದಾನೆ.
32 Whoso is refusing instruction is despising his soul, And whoso is hearing reproof Is getting understanding.ಶಿಕ್ಷಣವನ್ನು ನಿರಾಕರಿಸುವವನು ತನ್ನ ಪ್ರಾಣವನ್ನೇ ತಿರಸ್ಕರಿಸುತ್ತಾನೆ; ಗದರಿಕೆಗೆ ಕಿವಿಗೊಡುವವನು ವಿವೇಕ ವನ್ನು ಪಡೆಯುತ್ತಾನೆ.
33 The fear of Jehovah `is' the instruction of wisdom, And before honour `is' humility!ಕರ್ತನ ಭಯವು ಜ್ಞಾನೋ ಪದೇಶ; ಗೌರವಕ್ಕೆ ಮೊದಲು ವಿನಯ.
Kannada Bible