Proverbs 15 - WEB (Kannada)
1 A gentle answer turns away wrath, But a harsh word stirs up anger.ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತು ಗಳು ಕೋಪವನ್ನು ಎಬ್ಬಿಸುತ್ತವೆ.
2 The tongue of the wise commends knowledge, But the mouth of fools gush out folly.ಜ್ಞಾನಿಯ ನಾಲಿ ಗೆಯು ತಿಳುವಳಿಕೆಯನ್ನು ಸರಿಯಾಗಿ ಉಪಯೋಗಿ ಸುತ್ತದೆ. ಬುದ್ಧಿಹೀನರ ಬಾಯಿಯು ಬುದ್ಧಿಹೀನತೆಯನ್ನು ಹೊರಗೆಡುವುತ್ತದೆ.
3 Yahweh's eyes are everywhere, Keeping watch on the evil and the good.ಕೆಟ್ಟವರನ್ನು ಒಳ್ಳೆಯವರನ್ನು ನೋಡುತ್ತಾ ಕರ್ತನ ಕಣ್ಣುಗಳು ಪ್ರತಿಯೊಂದು ಸ್ಥಳ ದಲ್ಲಿವೆ.
4 A gentle tongue is a tree of life, But deceit in it crushes the spirit.ಹಿತವಾದ ನಾಲಿಗೆಯು ಜೀವವೃಕ್ಷ; ಅದರಲ್ಲಿ ಮೂರ್ಖತ್ವವು ಆತ್ಮಕ್ಕೆ ಒಡಕು.
5 A fool despises his father's correction, But he who heeds reproof shows prudence.ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು;
6 In the house of the righteous is much treasure, But the income of the wicked brings trouble.ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು; ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು.
7 The lips of the wise spread knowledge; Not so with the heart of fools.ಜ್ಞಾನಿಗಳ ತುಟಿಗಳು ತಿಳುವ ಳಿಕೆಯನ್ನು ಚೆಲ್ಲುತ್ತವೆ; ಬುದ್ಧಿಹೀನರ ಹೃದಯವು ಹಾಗೆ ಮಾಡುವದೇ ಇಲ್ಲ.
8 The sacrifice made by the wicked is an abomination to Yahweh, But the prayer of the upright is his delight.ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
9 The way of the wicked is an abomination to Yahweh, But he loves him who follows after righteousness.ದುಷ್ಟರ ಮಾರ್ಗವು ಕರ್ತನಿಗೆ ಅಸಹ್ಯ; ನೀತಿಯನ್ನು ಹಿಂಬಾಲಿಸುವವನನ್ನು ಆತನು ಪ್ರೀತಿಸು ತ್ತಾನೆ.
10 There is stern discipline for one who forsakes the way: Whoever hates reproof shall die.ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ; ಗದರಿಕೆಯನ್ನು ಹಗೆಮಾಡುವವನು ಸಾಯುವನು.
11 Sheol and Abaddon are before Yahweh-- How much more then the hearts of the children of men!ಪಾತಾಳವೂ ನಾಶನವೂ ಕರ್ತನ ಎದುರಿನಲ್ಲಿವೆ; ಹಾಗಾದರೆ ಮನುಷ್ಯರ ಹೃದಯಗಳು ಇನ್ನೂ ಎಷ್ಟೋ ಹೆಚ್ಚಾಗಿ ಆತನ ಮುಂದೆ ಇವೆಯಲ್ಲವೇ.
12 A scoffer doesn't love to be reproved; He will not go to the wise.ತನ್ನನ್ನು ಗದರಿಸುವವನು ಪರಿಹಾಸ್ಯಕರನನ್ನು ಪ್ರೀತಿ ಮಾಡುವದಿಲ್ಲ, ಇಲ್ಲವೆ ಅವನು ಜ್ಞಾನಿಗಳ ಕಡೆಗೆ ಹೋಗುವದು ಇಲ್ಲ.
13 A glad heart makes a cheerful face; But an aching heart breaks the spirit.ಸಂತೋಷಪಡುವ ಹೃದ ಯವು ಕಾಂತಿಯುಳ್ಳ ಮುಖಭಾವ ತೋರುವದು; ಹೃದಯ ವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.
14 The heart of one who has understanding seeks knowledge, But the mouths of fools feed on folly.ವಿವೇಕವುಳ್ಳವನ ಹೃದಯವು ತಿಳುವಳಿಕೆಯನ್ನು ಹುಡುಕುತ್ತದೆ; ಬುದ್ಧಿಹೀನರ ಬಾಯಿಯು ಬುದ್ಧಿಹೀನತೆ ಯನ್ನೇ ತಿನ್ನುತ್ತದೆ.
15 All the days of the afflicted are wretched, But one who has a cheerful heart enjoys a continual feast.ಬಾಧಿತರ ದಿನಗಳೆಲ್ಲವೂ ಕೆಟ್ಟ ವುಗಳೇ. ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.
16 Better is little, with the fear of Yahweh, Than great treasure with trouble.ಕಳವಳದಿಂದ ಕೂಡಿದ ದೊಡ್ಡ ಸಂಪತ್ತಿ ಗಿಂತ ಕರ್ತನ ಭಯದಿಂದ ಕೂಡಿದ ಸ್ವಲ್ಪವೇ ಉತ್ತಮ ವಾಗಿದೆ.
17 Better is a dinner of herbs, where love is, Than a fattened calf with hatred.ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸ ಕ್ಕಿಂತ ಪ್ರೀತಿ ಇರುವಲ್ಲಿ ಸಸ್ಯಹಾರವು ಉತ್ತಮ.
18 A wrathful man stirs up contention, But one who is slow to anger appeases strife.ಕೋಪಿಷ್ಠನು ವಿವಾದವನ್ನು ಎಬ್ಬಿಸುವನು; ದೀರ್ಘ ಶಾಂತನು ವಿವಾದವನ್ನು ಶಮನಪಡಿಸುತ್ತಾನೆ.
19 The way of the sluggard is like a thorn patch, But the path of the upright is a highway.ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ; ನೀತಿವಂತನ ಮಾರ್ಗವು ಸರಾಗವಾಗಿದೆ.
20 A wise son makes a father glad, But a foolish man despises his mother.ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸ ಗೊಳಿಸುತ್ತಾನೆ; ಬುದ್ಧಿಹೀನನಾದರೋ ತನ್ನ ತಾಯಿ ಯನ್ನು ತಿರಸ್ಕರಿಸುತ್ತಾನೆ.
21 Folly is joy to one who is void of wisdom, But a man of understanding keeps his way straight.ಜ್ಞಾನಹೀನನಿಗೆ ಮೂರ್ಖ ತನವು ಆನಂದವಾಗಿದೆ; ವಿವೇಕಿಯಾದರೋ ಯಥಾ ರ್ಥವಾಗಿ ನಡೆಯುತ್ತಾನೆ.
22 Where there is no counsel, plans fail; But in a multitude of counselors they are established.ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವದಿಲ್ಲ; ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸ್ಥಿರಗೊಳ್ಳುತ್ತವೆ.
23 Joy comes to a man with the reply of his mouth. How good is a word at the right time!ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು!
24 The path of life leads upward for the wise, To keep him from going downward to Sheol.ಕೆಳಗಿನ ಪಾತಾಳವನ್ನು ತಪ್ಪಿಸಿಕೊಳ್ಳುವ ದಕ್ಕಾಗಿ ಜ್ಞಾನಿಗಳಿಗೆ ಜೀವದ ಮಾರ್ಗವು ಎತ್ತರದಲ್ಲಿದೆ.
25 Yahweh will uproot the house of the proud, But he will keep the widow's borders intact.ಕರ್ತನು ಗರ್ವಿಷ್ಟರ ಮನೆಯನ್ನು ಹಾಳುಮಾಡು ವನು; ವಿಧವೆಯರ ಮೇರೆಯನ್ನು ಆತನು ನೆಲೆಗೊಳಿಸು ವನು.
26 Yahweh detests the thoughts of the wicked, But the thoughts of the pure are pleasing.ದುಷ್ಟರ ಆಲೋಚನೆಯು ಕರ್ತನಿಗೆ ಅಸಹ್ಯವಾಗಿದೆ; ಶುದ್ಧನ ಮಾತುಗಳು ಸಂತೋಷಕರ ವಾದ ಮಾತುಗಳೇ.
27 He who is greedy for gain troubles his own house, But he who hates bribes will live.ದುರ್ಲಾಭಾಪೇಕ್ಷಕನು ತನ್ನ ಮನೆಯನ್ನು ಬಾಧಿಸುತ್ತಾನೆ; ಲಂಚವನ್ನು ಹಗೆಮಾಡುವ ವನು ಬದುಕುವನು.
28 The heart of the righteous weighs answers, But the mouth of the wicked gushes out evil.ನೀತಿವಂತರ ಹೃದಯವು ಉತ್ತರಕೊಡುವದಕ್ಕೆ ಅಭ್ಯಾಸಿಸುತ್ತದೆ; ದುಷ್ಟರ ಬಾಯಿ ಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
29 Yahweh is far from the wicked, But he hears the prayer of the righteous.ಕರ್ತನು ದುಷ್ಟರಿಗೆ ದೂರ; ನೀತಿವಂತರ ಪ್ರಾರ್ಥನೆಯನ್ನು ಆತನು ಕೇಳುತ್ತಾನೆ.
30 The light of the eyes rejoices the heart. Good news gives health to the bones.ಕಣ್ಣುಗಳ ಬೆಳಕು ಹೃದಯವನ್ನು ಸಂತೋಷಪಡಿಸುತ್ತದೆ; ಒಳ್ಳೆಯ ವಾರ್ತೆಯು ಎಲುಬು ಗಳನ್ನು ಪುಷ್ಟಿಮಾಡುತ್ತದೆ.
31 The ear that listens to reproof lives, And will be at home among the wise.ಜೀವದ ಗದರಿಕೆಗೆ ಕಿವಿ ಗೊಡುವವನು ಜ್ಞಾನಿಗಳ ನಡುವೆ ವಾಸವಾಗಿದ್ದಾನೆ.
32 He who refuses correction despises his own soul, But he who listens to reproof gets understanding.ಶಿಕ್ಷಣವನ್ನು ನಿರಾಕರಿಸುವವನು ತನ್ನ ಪ್ರಾಣವನ್ನೇ ತಿರಸ್ಕರಿಸುತ್ತಾನೆ; ಗದರಿಕೆಗೆ ಕಿವಿಗೊಡುವವನು ವಿವೇಕ ವನ್ನು ಪಡೆಯುತ್ತಾನೆ.
33 The fear of Yahweh teaches wisdom. Before honor is humility.ಕರ್ತನ ಭಯವು ಜ್ಞಾನೋ ಪದೇಶ; ಗೌರವಕ್ಕೆ ಮೊದಲು ವಿನಯ.
Kannada Bible