Proverbs 10 - YLT (Kannada)
1 Proverbs of Solomon. A wise son causeth a father to rejoice, And a foolish son `is' an affliction to his mother.ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನುಂಟು ಮಾಡುತ್ತಾನೆ; ಆಜ್ಞಾನಿ ಯಾದ ಮಗನಾದರೋ ತನ್ನ ತಾಯಿಗೆ ಭಾರವಾಗಿ ದ್ದಾನೆ.
2 Treasures of wickedness profit not, And righteousness delivereth from death.ಕೆಟ್ಟತನದ ಸಂಪತ್ತುಗಳು ಪ್ರಯೋಜನವಿಲ್ಲ; ನೀತಿಯು ಮರಣದಿಂದ ಬಿಡಿಸುತ್ತದೆ.
3 Jehovah causeth not the soul of the righteous to hunger, And the desire of the wicked He thrusteth away.ನೀತಿವಂತನ ಪ್ರಾಣವನ್ನು ಕರ್ತನು ಹಸಿವೆಗೊಳಿಸನು; ದುಷ್ಟರ ಆಸ್ತಿಯನ್ನು ಆತನು ತಳ್ಳಿಹಾಕುತ್ತಾನೆ.
4 Poor `is' he who is working -- a slothful hand, And the hand of the diligent maketh rich.ಬಿಗಿ ಇಲ್ಲದ ಕೈಯಿಂದ ವ್ಯಾಪಾರ ಮಾಡುವವನು ದರಿದ್ರನಾಗು ವನು; ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.
5 Whoso is gathering in summer `is' a wise son, Whoso is sleeping in harvest `is' a son causing shame.ಬೇಸಿಗೆಯಲ್ಲಿ ಕೂಡಿಸುವವನು ಬುದ್ಧಿ ವಂತನಾದ ಮಗನು ಸುಗ್ಗಿಯಲ್ಲಿ ನಿದ್ರೆಮಾಡುವವನು ನಾಚಿಕೆಪಡಿಸುವ ಮಗನು.
6 Blessings `are' for the head of the righteous, And the mouth of the wicked cover doth violence.ನೀತಿವಂತರ ತಲೆಯ ಮೇಲೆ ಆಶೀರ್ವಾದಗಳು ಇವೆ; ಆದರೆ ದುಷ್ಟನ ಬಾಯಿಯನ್ನು ಬಲಾತ್ಕಾರವು ಮುಚ್ಚುತ್ತದೆ.
7 The remembrance of the righteous `is' for a blessing, And the name of the wicked doth rot.ನೀತಿ ವಂತರ ಸ್ಮರಣೆಯು ಧನ್ಯಕರವಾಗಿದೆ; ದುಷ್ಟರ ಹೆಸರು ಕೊಳೆಯುತ್ತದೆ.
8 The wise in heart accepteth commands, And a talkative fool kicketh.ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು. ಹರಟೆಯ ಮೂರ್ಖನು ಬೀಳುವನು.
9 Whoso is walking in integrity walketh confidently, And whoso is perverting his ways is known.ಯಥಾರ್ಥವಾಗಿ ನಡೆಯುತ್ತಿರುವವನು ದೃಢವಾಗಿ ನಡೆಯುತ್ತಾನೆ; ತನ್ನ ಮಾರ್ಗಗಳನ್ನು ಡೊಂಕು ಮಾಡು ತ್ತಿರುವವನು ಬಯಲಿಗೆ ಬರುವನು.
10 Whoso is winking the eye giveth grief, And a talkative fool kicketh.ಕಣ್ಣು ಮಿಟಕಿ ಸುವವನು ದುಃಖವನ್ನುಂಟುಮಾಡುತ್ತಾನೆ; ಹರಟೆಯ ಮೂರ್ಖನು ಬೀಳುವನು.
11 A fountain of life `is' the mouth of the righteous, And the mouth of the wicked cover doth violence.ನೀತಿವಂತನ ಬಾಯಿ ಯು ಜೀವಕರವಾದ ಬಾವಿ; ದುಷ್ಟನ ಬಾಯನ್ನು ಬಲಾತ್ಕಾರವು ಮುಚ್ಚುತ್ತದೆ.
12 Hatred awaketh contentions, And over all transgressions love covereth.ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ; ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚು ತ್ತದೆ.
13 In the lips of the intelligent is wisdom found, And a rod `is' for the back of him who is lacking understanding.ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕು ತ್ತದೆ; ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.
14 The wise lay up knowledge, and the mouth of a fool `is' near ruin.ಜ್ಞಾನಿ ಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ನಾಶನಕ್ಕೆ ಸವಿಾಪವಾಗಿದೆ.
15 The wealth of the rich `is' his strong city, The ruin of the poor `is' their poverty.ಐಶ್ವರ್ಯವಂತನ ಸಂಪತ್ತು ಅವನ ಬಲವಾದ ಪಟ್ಟಣ; ಬಡವರ ನಾಶನವು ಅವರ ಬಡತನವೇ.
16 The wage of the righteous `is' for life, The increase of the wicked for sin.ನೀತಿವಂತರ ಪ್ರಯಾಸವು ಜೀವಕ್ಕಾಗಿಯೂ ದುಷ್ಟರ ಫಲವು ಪಾಪಕ್ಕಾಗಿಯೂ ಇವೆ.
17 A traveller to life `is' he who is keeping instruction, And whoso is forsaking rebuke is erring.ಶಿಕ್ಷಣವನ್ನು ಕೈಕೊಳ್ಳುವವನು ಜೀವನದ ಮಾರ್ಗದಲ್ಲಿ ಇದ್ದಾನೆ; ಗದರಿಕೆಯನ್ನು ತಿರಸ್ಕರಿಸುವವನು ತಪ್ಪುಮಾಡುತ್ತಾನೆ.
18 Whoso is covering hatred with lying lips, And whoso is bringing out an evil report is a fool.ಸುಳ್ಳಾಡುವ ತುಟಿಗಳಿಂದ ಹಗೆಯನ್ನಿಟ್ಟುಕೊಂಡ ವನೂ ಚಾಡಿಹೇಳುವವನೂ ಮೂರ್ಖನು.
19 In the abundance of words transgression ceaseth not, And whoso is restraining his lips `is' wise.ಹೆಚ್ಚು ಮಾತುಗಳಿಂದ ಪಾಪಕ್ಕೆ ಕೊರತೆ ಇರುವದಿಲ್ಲ. ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು.
20 The tongue of the righteous `is' chosen silver, The heart of the wicked -- as a little thing.ನೀತಿ ವಂತರ ನಾಲಿಗೆಯು ಚೊಕ್ಕ ಬೆಳ್ಳಿಯಂತಿದೆ; ದುಷ್ಟರ ಹೃದಯವು ಅಲ್ಪವಾದದ್ದು.
21 The lips of the righteous delight many, And fools for lack of heart die.ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ. ಜ್ಞಾನದ ಕೊರತೆಯಿಂದ ಅವಿವೇಕಿಗಳು ಸಾಯುತ್ತಾರೆ.
22 The blessing of Jehovah -- it maketh rich, And He addeth no grief with it.ಕರ್ತನ ಆರ್ಶೀ ವಾದವು ಐಶ್ವರ್ಯವನ್ನುಂಟು ಮಾಡುವದು. ಅದ ರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವ ದಿಲ್ಲ.
23 To execute inventions `is' as play to a fool, And wisdom to a man of understanding.ಬುದ್ಧಿಹೀನನಿಗೆ ಕೇಡು ಮಾಡುವದು ಹಾಸ್ಯಾ ಸ್ಪದವಾಗಿದೆ; ಆದರೆ ಗ್ರಹಿಸುವವನಿಗೆ ಜ್ಞಾನವಿದೆ.
24 The feared thing of the wicked it meeteth him, And the desire of the righteous is given.ದುಷ್ಟನ ಭಯವು ಅವನ ಮೇಲೆ ಬರುವದು; ನೀತಿವಂತರ ಇಷ್ಟವು ಸಫಲವಾಗುವದು.
25 As the passing by of a hurricane, So the wicked is not, And the righteous is a foundation age-during.ಹೇಗೆ ಬಿರುಗಾಳಿಯು ಬೀಸುವದೋ ಹಾಗೆಯೇ ದುಷ್ಟರು ಇಲ್ಲವಾಗುವರು. ನೀತಿವಂತನು ಶಾಶ್ವತವಾದ ಅಸ್ತಿವಾರ ವಾಗಿದ್ದಾನೆ.
26 As vinegar to the teeth, And as smoke to the eyes, So `is' the slothful to those sending him.ಹಲ್ಲುಗಳಿಗೆ ಹುಳಿಯೂ ಕಣ್ಣುಗಳಿಗೆ ಹೊಗೆಯೂ ಹೇಗೋ ಹಾಗೆಯೇ ತನ್ನನ್ನು ಕಳುಹಿಸು ವವರಿಗೆ ಸೋಮಾರಿಯೂ ಇರುವನು.
27 The fear of Jehovah addeth days, And the years of the wicked are shortened.ಕರ್ತನ ಭಯವು ದಿನಗಳನ್ನು ಹೆಚ್ಚಿಸುತ್ತದೆ; ದುಷ್ಟರ ವರುಷ ಗಳು ಕಡಿಮೆ ಮಾಡಲ್ಪಡುವವು.
28 The hope of the righteous `is' joyful, And the expectation of the wicked perisheth.ನೀತಿವಂತರ ನಿರೀ ಕ್ಷೆಯು ಆನಂದಕರವಾಗಿರುವದು; ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವದು.
29 The way of Jehovah `is' strength to the perfect, And ruin to workers of iniquity.ಯಥಾರ್ಥವಂತರಿಗೆ ಕರ್ತನ ಮಾರ್ಗವು ಬಲವಾಗಿದೆ; ಅಕ್ರಮ ಮಾಡುವ ವರಿಗೆ ಅದು ನಾಶನವಾಗಿರುವದು.
30 The righteous to the age is not moved, And the wicked inhabit not the earth.ನೀತಿವಂತರು ಎಂದಿಗೂ ಕದಲುವದೇ ಇಲ್ಲ; ದುಷ್ಟರು ಭೂಮಿಯಲ್ಲಿ ವಾಸಮಾಡುವದಿಲ್ಲ.
31 The mouth of the righteous uttereth wisdom, And the tongue of frowardness is cut out.ನೀತಿವಂತರ ಬಾಯಿಯು ಜ್ಞಾನವನ್ನು ಫಲಿಸುತ್ತದೆ; ಮೂರ್ಖನ ನಾಲಿಗೆಯು ಕತ್ತರಿಸಲ್ಪಡುವದು.
32 The lips of the righteous know a pleasing thing, And the mouth of the wicked perverseness!ಯಾವದು ಅಂಗೀಕರಿಸ ತಕ್ಕದ್ದೋ ಅದು ನೀತಿವಂತರ ತುಟಿಗಳಿಗೆ ತಿಳಿಯು ವದು; ದುಷ್ಟರ ಬಾಯಿಯು ಮೂರ್ಖತನವನ್ನು ಹೊರಗೆಡುವುತ್ತದೆ.
Kannada Bible