Numbers 13 - WEB (Kannada)

1 Yahweh spoke to Moses, saying,ಕರ್ತನು ಮೋಶೆಯ ಸಂಗಡ ಮಾತನಾಡಿ

2 Send you men, that they may spy out the land of Canaan, which I give to the children of Israel: of every tribe of their fathers shall you send a man, everyone a prince among them.ನಾನು ಇಸ್ರಾಯೇಲ್‌ ಮಕ್ಕಳಿಗೆ ಕೊಡುವ ಕಾನಾನ್‌ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು.

3 Moses sent them from the wilderness of Paran according to the commandment of Yahweh: all of them men who were heads of the children of Israel.ಆಗ ಮೋಶೆಯು ಕರ್ತನ ಆಜ್ಞೆಯಂತೆ ಪಾರಾನ್‌ ಅರಣ್ಯ ದಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾ ಯೇಲ್‌ ಮಕ್ಕಳ ಮುಖ್ಯಸ್ಥರಾಗಿದ್ದರು.

4 These were their names: Of the tribe of Reuben, Shammua the son of Zaccur.ಅವರ ಹೆಸರುಗಳು ಯಾವವಂದರೆ: ರೂಬೇನ್‌ ಗೋತ್ರದ ಜಕ್ಕೂರನ ಮಗನಾದ ಶಮ್ಮೂವನು,

5 Of the tribe of Simeon, Shaphat the son of Hori.ಸಿಮೆಯೋನ್‌ ಗೋತ್ರದ ಹೋರಿಯ ಮಗನಾದ ಶಾಫಾಟನು,

6 Of the tribe of Judah, Caleb the son of Jephunneh.ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು,

7 Of the tribe of Issachar, Igal the son of Joseph.ಇಸ್ಸಾಕಾರ್‌ ಗೋತ್ರದ ಯೋಸೇಫನ ಮಗನಾದ ಇಗಾಲನು,

8 Of the tribe of Ephraim, Hoshea the son of Nun.ಎಫ್ರಾಯಾಮ್‌ ಗೋತ್ರದ ನೂನನ ಮಗನಾದ ಹೋಶೇಯನು,

9 Of the tribe of Benjamin, Palti the son of Raphu.ಬೆನ್ಯಾವಿಾನ್‌ ಗೋತ್ರದ ರಾಫೂವನ ಮಗನಾದ ಪಲ್ಟೀಯು,

10 Of the tribe of Zebulun, Gaddiel the son of Sodi.ಜೆಬುಲೂನ್‌ ಗೋತ್ರದ ಸೋದೀಯ ಮಗನಾದ ಗದ್ದೀಯೇಲ್‌,

11 Of the tribe of Joseph, [namely], of the tribe of Manasseh, Gaddi the son of Susi.ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗನಾದ ಗದ್ದೀ,

12 Of the tribe of Dan, Ammiel the son of Gemalli.ದಾನ್‌ ಗೋತ್ರದ ಗೆಮಲ್ಲೀಯನ ಮಗನಾದ ಅವ್ಮೆಾಯೇಲನು,

13 Of the tribe of Asher, Sethur the son of Michael.ಆಶೇರ್‌ ಗೋತ್ರದ ವಿಾಕಾ ಯೇಲನ ಮಗನಾದ ಸೆತೂರ್‌,

14 Of the tribe of Naphtali, Nahbi the son of Vophsi.ನಫ್ತಾಲಿ ಗೋತ್ರದ ವಾಪೆಸೀಯನ ಮಗನಾದ ನಹಬೀ,

15 Of the tribe of Gad, Geuel the son of Machi.ಗಾದನ ಗೋತ್ರದ ಮಾಕೀಯನ ಮಗನಾದ ಗೆಯೂವೇಲ್‌.

16 These are the names of the men who Moses sent to spy out the land. Moses called Hoshea the son of Nun Joshua.ಮೋಶೆಯು ದೇಶವನ್ನು ಪಾಳತಿ ನೋಡುವದಕ್ಕಾಗಿ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶು ವನೆಂದು ಹೆಸರಿಟ್ಟನು.

17 Moses sent them to spy out the land of Canaan, and said to them, Go up this way by the South, and go up into the hill-country:ಮೋಶೆ ಕಾನಾನ್‌ ದೇಶವನ್ನು ಪಾಳತಿ ನೋಡು ವದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ--ಈ ದಕ್ಷಿಣ ಕಡೆಯಲ್ಲಿ ಹೋಗಿ ಬೆಟ್ಟವನ್ನೇರಿ

18 and see the land, what it is; and the people who dwell therein, whether they are strong or weak, whether they are few or many;ಆ ದೇಶವು ಎಂಥದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳ ವರೋ ಇಲ್ಲವೆ ಬಲಹೀನರೋ, ಸ್ವಲ್ಪ ಜನರೋ ಇಲ್ಲವೆ ಬಹಳ ಜನರೋ ಎಂದೂ

19 and what the land is that they dwell in, whether it is good or bad; and what cities they are that they dwell in, whether in camps, or in strongholds;ಅವರು ವಾಸಿ ಸುವ ದೇಶವು ಎಂಥದ್ದೋ ಅದು ಒಳ್ಳೆಯದಾಗಿ ದೆಯೋ ಕೆಟ್ಟದ್ದಾಗಿದೆಯೋ ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ ಅವರು ವಾಸಿಸುವದು ಡೇರೆಗಳಲ್ಲಿಯೋ ಬಲವಾದ ಕೋಟೆಗಳಲ್ಲಿಯೋ ಎಂದೂ

20 and what the land is, whether it is fat or lean, whether there is wood therein, or not. Be of good courage, and bring of the fruit of the land. Now the time was the time of the first-ripe grapes.ಆ ಭೂಮಿಯು ಎಂಥದ್ದೋ ಸಾರವಾ ದದ್ದೋ? ನಿಸ್ಸಾರವಾದದ್ದೋ ಮರಗಳುಳ್ಳದ್ದೋ? ಇಲ್ಲದಿರುವದೋ ಎಂದೂ ನೋಡಿರಿ. ನೀವು ಧೈರ್ಯ ವುಳ್ಳವರಾಗಿದ್ದು ಆ ಭೂಮಿಯ ಫಲವನ್ನು ತೆಗೆದು ಕೊಳ್ಳಿರಿ ಅಂದನು. ಆಗ ಪ್ರಥಮ ದ್ರಾಕ್ಷೇಹಣ್ಣುಗಳ ಕಾಲವಾಗಿತ್ತು.

21 So they went up, and spied out the land from the wilderness of Zin to Rehob, to the entrance of Hamath.ಆಗ ಅವರು ಏರಿಹೋಗಿ ಜಿನ್‌ ಎಂಬ ಅರಣ್ಯ ದಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನ ವರೆಗೂ ದೇಶವನ್ನು ಪಾಳತಿ ನೋಡಿದರು.

22 They went up by the South, and came to Hebron; and Ahiman, Sheshai, and Talmai, the children of Anak, were there. (Now Hebron was built seven years before Zoan in Egypt.)ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು.

23 They came to the valley of Eshcol, and cut down from there a branch with one cluster of grapes, and they bore it on a staff between two; [they brought] also of the pomegranates, and of the figs.ಅವರು ಎಷ್ಕೋಲ ಹಳ್ಳದ ವರೆಗೂ ಬಂದು ಅಲ್ಲಿ ದ್ರಾಕ್ಷೇಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು ಅದನ್ನು ಅಡ್ಡಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು; ಇದಲ್ಲದೆ ದಾಳಿಂಬರ ಅಂಜೂರ ಹಣ್ಣುಗಳನ್ನು ತಕ್ಕೊಂಡು ಹೋದರು.

24 That place was called the valley of Eshcol, because of the cluster which the children of Israel cut down from there.ಇಸ್ರಾಯೇಲ್‌ ಮಕ್ಕಳು ಅಲ್ಲಿ ದ್ರಾಕ್ಷೇಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್‌ ಹಳ್ಳವೆಂದು ಹೆಸರಿಟ್ಟರು.

25 They returned from spying out the land at the end of forty days.ಅವರು ದೇಶವನ್ನು ಪಾಳತಿ ನೋಡಿ ನಾಲ್ವತ್ತು ದಿವಸಗಳಾದ ಮೇಲೆ ತಿರಿಗಿ ಬಂದರು.

26 They went and came to Moses, and to Aaron, and to all the congregation of the children of Israel, to the wilderness of Paran, to Kadesh; and brought back word to them, and to all the congregation, and shown them the fruit of the land.ಅವರು ಹೋಗಿ ಮೋಶೆ ಆರೋನರ ಬಳಿಗೂ ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಯ ಬಳಿಗೂ ಪಾರಾನ್‌ ಅರಣ್ಯದಲ್ಲಿರುವ ಕಾದೇಶಿಗೂ ಬಂದು ಅವರಿಗೂ ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.

27 They told him, and said, We came to the land where you sent us; and surely it flows with milk and honey; and this is the fruit of it.ಅವರು ಅವ ನಿಗೆ--ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ; ಅದರ ಫಲವು ಇದೇ.

28 However the people who dwell in the land are strong, and the cities are fortified, [and] very great: and moreover we saw the children of Anak there.ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು; ಪಟ್ಟಣ ಗಳು ಭದ್ರವಾಗಿಯೂ ಬಹಳ ದೊಡ್ಡವುಗಳಾಗಿಯೂ ಅವೆ. ಮತ್ತು ಅನಾಕನ ಮಕ್ಕಳನ್ನು ಅಲ್ಲಿ ನಾವು ಕಂಡೆವು.

29 Amalek dwells in the land of the South: and the Hittite, and the Jebusite, and the Amorite, dwell in the hill-country; and the Canaanite dwells by the sea, and along by the side of the Jordan.ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.

30 Caleb stilled the people before Moses, and said, Let us go up at once, and possess it; for we are well able to overcome it.ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು.

31 But the men who went up with him said, We aren't able to go up against the people; for they are stronger than we.ಅದರೆ ಅವನ ಸಂಗಡ ಹೋದ ಮನುಷ್ಯರುಆ ಜನರ ಬಳಿಗೆ ಹೋಗಲು ನಮ್ಮಿಂದಾಗುವದಿಲ್ಲ; ಅವರು ನಮಗಿಂತ ಬಲಿಷ್ಠರಾಗಿದ್ದಾರೆ ಎಂದು ಹೇಳಿ ದರು.

32 They brought up an evil report of the land which they had spied out to the children of Israel, saying, The land, through which we have gone to spy it out, is a land that eats up the inhabitants of it; and all the people who we saw in it are men of great stature.ಅವರು ಪಾಳತಿ ನೋಡಿದ ದೇಶದ ವಿಷಯ ಕೆಟ್ಟಸುದ್ಧಿಯನ್ನು ತಂದು--ನಾವು ಪಾಳತಿ ನೋಡುವ ದಕ್ಕೆ ಹಾದುಹೋದ ದೇಶವು ತನ್ನಲ್ಲಿ ವಾಸವಾಗಿರು ವವರನ್ನು ತಿಂದುಬಿಡುವ ದೇಶವಾಗಿದೆ; ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾಶರೀರದ ಮನುಷ್ಯರು.

33 There we saw the Nephilim, the sons of Anak, who come of the Nephilim: and we were in our own sight as grasshoppers, and so we were in their sight.ಅಲ್ಲಿ ಅಮಾನುಷ್ಯರನ್ನೂ ಅಮಾನುಷ್ಯ ಸಂತಾನ ವಾದ ಅನಾಕನ ಮಕ್ಕಳನ್ನೂ ಕಂಡೆವು; ನಮ್ಮ ದೃಷ್ಟಿಗೆ ನಾವು ಮಿಡತೆಗಳ ಹಾಗೆ ಇದ್ದೆವು, ಅದೇ ಪ್ರಕಾರ ಅವರ ದೃಷ್ಟಿಗೂ ಇದ್ದೆವು.

Kannada Bible