Matthew 28 - WEB (Kannada)
1 Now after the Sabbath, as it began to dawn on the first day of the week, Mary Magdalene and the other Mary came to see the tomb.ಸಬ್ಬತ್ತಿನ ಕೊನೆಯಲ್ಲಿ ವಾರದ ಮೊದಲ ನೆಯ ದಿನವು ಉದಯವಾಗುತ್ತಿದ್ದಾಗಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
2 Behold, there was a great earthquake, for an angel of the Lord descended from the sky, and came and rolled away the stone from the door, and sat on it.ಮತ್ತು ಇಗೋ, ಅಲ್ಲಿ ಮಹಾಭೂಕಂಪ ಉಂಟಾಯಿತು; ಯಾಕಂದರೆ ಕರ್ತನ ದೂತನು ಪರಲೋಕದಿಂದ ಇಳಿದು ಬಂದು ಬಾಗಲಿನಿಂದ ಕಲ್ಲನ್ನು ಉರುಳಿಸಿ ಅದರ ಮೇಲೆ ಕೂತುಕೊಂಡನು.
3 His appearance was like lightning, and his clothing white as snow.ಅವನ ಮುಖವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು.
4 For fear of him, the guards shook, and became like dead men.ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತವರ ಹಾಗಾದರು.
5 The angel answered the women, "Don't be afraid, for I know that you seek Jesus, who has been crucified.ಆ ದೂತನು ಸ್ತ್ರೀಯರಿಗೆ-- ನೀವು ಭಯಪಡಬೇಡಿರಿ; ಯಾಕಂದರೆ ಶಿಲುಬೆಗೆ ಹಾಕಲ್ಪಟ್ಟವನಾದ ಯೇಸುವನ್ನು ನೀವು ಹುಡುಕುತ್ತೀರೆಂದು ನಾನು ಬಲ್ಲೆನು.
6 He is not here, for he has risen, just like he said. Come, see the place where the Lord was lying.ಆತನು ಇಲ್ಲಿ ಇಲ್ಲ; ಯಾಕಂದರೆ ಆತನು ಹೇಳಿರುವ ಪ್ರಕಾರ ಆತನು ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ.
7 Go quickly and tell his disciples, 'He has risen from the dead, and behold, he goes before you into Galilee; there you will see him.' Behold, I have told you."ಬೇಗನೆ ಹೋಗಿ ಆತನು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಆತನ ಶಿಷ್ಯರಿಗೆ ಹೇಳಿರಿ; ಮತ್ತು ಇಗೋ, ನಿಮಗೆ ಮುಂದಾಗಿ ಆತನು ಗಲಿಲಾಯಕ್ಕೆ ಹೋಗುತ್ತಾನೆ. ನೀವು ಆತನನ್ನು ಅಲ್ಲಿ ಕಾಣುವಿರಿ; ಇಗೋ, ನಾನು ನಿಮಗೆ ಹೇಳಿದ್ದೇನೆ ಅಂದನು.
8 They departed quickly from the tomb with fear and great joy, and ran to bring his disciples word.ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು ಆತನ ಶಿಷ್ಯರಿಗೆ ತಿಳಿಸುವದಕ್ಕಾಗಿ ಓಡಿಹೋದರು.
9 As they went to tell his disciples, behold, Jesus met them, saying, "Rejoice!" They came and took hold of his feet, and worshiped him.ಅವರು ಆತನ ಶಿಷ್ಯರಿಗೆ ತಿಳಿಸು ವದಕ್ಕೆ ಹೋಗುತ್ತಿದ್ದಾಗ ಇಗೋ, ಯೇಸು ಅವರನ್ನು ಸಂಧಿಸಿ--ಶುಭವಾಗಲಿ ಅಂದನು. ಆಗ ಅವರು ಬಂದು ಆತನ ಪಾದಗಳನ್ನು ಹಿಡಿದು ಆತನನ್ನು ಆರಾಧಿಸಿದರು.
10 Then Jesus said to them, "Don't be afraid. Go tell my brothers{The word for "brothers" here may be also correctly translated "brothers and sisters" or "siblings."} that they should go into Galilee, and there they will see me."ಆಗ ಯೇಸು ಅವರಿಗೆ-- ಭಯ ಪಡಬೇಡಿರಿ; ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವ ರೆಂದೂ ಹೋಗಿ ಅವರಿಗೆ ಹೇಳಿರಿ ಅಂದನು.
11 Now while they were going, behold, some of the guards came into the city, and told the chief priests all the things that had happened.ಅವರು ಹೋಗುತ್ತಿರುವಾಗ ಇಗೋ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಪ್ರಧಾನ ಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು.
12 When they were assembled with the elders, and had taken counsel, they gave a large amount of silver to the soldiers,ಮತ್ತು ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು --
13 saying, "Say that his disciples came by night, and stole him away while we slept.ನಾವು ನಿದ್ರೆ ಮಾಡುತ್ತಿರುವಾಗ ಆತನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದು ಕೊಂಡುಹೋದ ರೆಂದು ನೀವು ಹೇಳಿರಿ;
14 If this comes to the governor's ears, we will persuade him and make you free of worry."ಇದನ್ನು ಅಧಿಪತಿಯು ಕೇಳಿಸಿಕೊಂಡರೆ ನಿಮ್ಮನ್ನು ತಪ್ಪಿಸುವ ಹಾಗೆ ನಾವು ಅವನನ್ನು ಒಡಂಬಡಿಸುವೆವು ಅಂದರು.
15 So they took the money and did as they were told. This saying was spread abroad among the Jews, and continues until this day.ಹೀಗೆ ಅವರು ಆ ಹಣವನ್ನು ತಕ್ಕೊಂಡು ತಮಗೆ ಕಲಿಸಿದ ಹಾಗೆ ಮಾಡಿದರು. ಈ ಮಾತು ಸಾಧಾರಣವಾಗಿ ಈ ದಿನದ ವರೆಗೂ ಯೆಹೂದ್ಯರ ಮಧ್ಯದಲ್ಲಿ ಹರಡಿ ಕೊಂಡಿದೆ.
16 But the eleven disciples went into Galilee, to the mountain where Jesus had sent them.ಆಗ ಯೇಸು ತಮಗೆ ನೇಮಿಸಿದ ಗಲಿಲಾಯ ದಲ್ಲಿರುವ ಬೆಟ್ಟಕ್ಕೆ ಹನ್ನೊಂದು ಮಂದಿ ಶಿಷ್ಯರು ಹೋದರು.
17 When they saw him, they bowed down to him, but some doubted.ಅವರು ಆತನನ್ನು ನೋಡಿ ಆತನನ್ನು ಆರಾಧಿಸಿದರು; ಆದರೆ ಕೆಲವರು ಸಂದೇಹ ಪಟ್ಟರು.
18 Jesus came to them and spoke to them, saying, "All authority has been given to me in heaven and on earth.ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;
19 Therefore go, and make disciples of all nations, baptizing them in the name of the Father and of the Son and of the Holy Spirit,ಆದದರಿಂದ ನೀವು ಹೋಗಿ ಎಲ್ಲಾ ಜನಾಂಗಗಳಿಗೆ ಬೋಧಿಸಿ ತಂದೆಯ, ಮಗನ, ಪರಿಶುದ್ಧಾತ್ಮನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿರಿ;
20 teaching them to observe all things that I commanded you. Behold, I am with you always, even to the end of the age." Amen.ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
Kannada Bible