Mark 5 - YLT (Kannada)
1 And they came to the other side of the sea, to the region of the Gadarenes,ತರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು.
2 and he having come forth out of the boat, immediately there met him out of the tombs a man with an unclean spirit,ಆತನು ದೋಣಿಯಿಂದ ಹೊರಗೆ ಬಂದಾಗ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನು ಕೂಡಲೆ ಸಮಾಧಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು.
3 who had his dwelling in the tombs, and not even with chains was any one able to bind him,ಇವನು ಸಮಾಧಿ ಗಳಲ್ಲಿ ವಾಸಿಸುತ್ತಿದ್ದನು. ಇವನನ್ನು ಯಾವ ಮನುಷ್ಯನೂ ಸಂಕೋಲೆಗಳಿಂದಲಾದರೂ ಕಟ್ಟಲಾರದೆ ಹೋದನು.
4 because that he many times with fetters and chains had been bound, and pulled in pieces by him had been the chains, and the fetters broken in pieces, and none was able to tame him,ಯಾಕಂದರೆ ಅನೇಕ ಸಾರಿ ಅವನನ್ನು ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿ ಗಳನ್ನು ಕಿತ್ತುಹಾಕಿ ಬೇಡಿಗಳನ್ನು ಮುರಿದು ತುಂಡು ಮಾಡುತ್ತಿದ್ದದ್ದರಿಂದ ಯಾವ ಮನುಷ್ಯನೂ ಅವನನ್ನು ಹತೋಟಿಗೆ ತರಲಾರದೆ ಇದ್ದನು.
5 and always, night and day, in the mountains, and in the tombs he was, crying and cutting himself with stones.ಅವನು ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದನು.
6 And, having seen Jesus from afar, he ran and bowed before him,ಆದರೆ ಅವನು ದೂರದಿಂದ ಯೇಸುವನ್ನು ನೋಡಿದಾಗ ಓಡಿಬಂದು ಆತನನ್ನು ಆರಾಧಿಸಿ --
7 and having called with a loud voice, he said, `What -- to me and to thee, Jesus, Son of God the Most High? I adjure thee by God, mayest thou not afflict me!'ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.
8 (for he said to him, `Come forth, spirit unclean, out of the man,')ಯಾಕಂದರೆ ಆತನು ಅವ ನಿಗೆ--ಅಶುದ್ಧಾತ್ಮವೇ, ಆ ಮನುಷ್ಯನೊಳಗಿನಿಂದ ಹೊರಗೆ ಬಾ ಎಂದು ಹೇಳಿದ್ದನು.
9 and he was questioning him, `What `is' thy name?' and he answered, saying, `Legion `is' my name, because we are many;'ಆತನು ಅವನಿಗೆ--ನಿನ್ನ ಹೇಸರೇನು ಎಂದು ಕೇಳಲು ಅವನು ಪ್ರತ್ಯುತ್ತರವಾಗಿ--ನನ್ನ ಹೆಸರು ಲೀಜೆನ್ (ದಂಡು); ಯಾಕಂದರೆ ನಾವು ಅನೇಕರಿದ್ದೇವೆ ಅಂದನು.
10 and he was calling on him much, that he may not send them out of the region.ತಮ್ಮನ್ನು ಆ ದೇಶದೊಳಗಿಂದ ಹೊರಗೆ ಕಳುಹಿಸದಂತೆ ಅವನು ಆತನನ್ನು ಬಹಳವಾಗಿ ಬೇಡಿ ಕೊಂಡನು.
11 And there was there, near the mountains, a great herd of swine feeding,ಆಗ ಅಲ್ಲಿ ಬೆಟ್ಟಗಳ ಸವಿಾಪದಲ್ಲಿ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು.
12 and all the demons did call upon him, saying, `Send us to the swine, that into them we may enter;'ಎಲ್ಲಾ ದೆವ್ವಗಳು ಆತನಿಗೆ--ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸು ಎಂದು ಬೇಡಿಕೊಂಡವು.
13 and immediately Jesus gave them leave, and having come forth, the unclean spirits did enter into the swine, and the herd did rush down the steep place to the sea -- and they were about two thousand -- and they were choked in the sea.ಕೂಡಲೆ ಯೇಸು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಅಶುದ್ಧಾತ್ಮಗಳು ಹೊರಗೆ ಹೋಗಿ ಆ ಹಂದಿಗಳೊಳಗೆ ಸೇರಿಕೊಂಡವು; ಮತ್ತು ಆ ಗುಂಪು ಉಗ್ರತೆಯಿಂದ ಓಡಿ ಇಳಿಜಾರಿನಿಂದ ಸಮುದ್ರದೊಳಗೆ ಬಿದ್ದು ಉಸುರುಗಟ್ಟಿ ಸತ್ತವು. (ಅವು ಸುಮಾರು ಎರಡು ಸಾವಿರ ಇದ್ದವು.)
14 And those feeding the swine did flee, and told in the city, and in the fields, and they came forth to see what it is that hath been done;ಆಗ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ತಿಳಿಸಿ ದರು; ಅವರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟರು.
15 and they come unto Jesus, and see the demoniac, sitting, and clothed, and right-minded -- him having had the legion -- and they were afraid;ಅವರು ಯೇಸುವಿನ ಬಳಿಗೆ ಬಂದು ಆ ದೆವ್ವಗಳ ದಂಡು ಹಿಡಿದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತದಿಂದ ಕೂತು ಕೊಂಡಿರುವದನ್ನು ನೋಡಿ ಭಯಪಟ್ಟರು.
16 and those having seen `it', declared to them how it had come to pass to the demoniac, and about the swine;ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು.
17 and they began to call upon him to go away from their borders.ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು.
18 And he having gone into the boat, the demoniac was calling on him that he may be with him,ಆತನು ದೋಣಿಯೊಳಗೆ ಬಂದಾಗ ಆ ದೆವ್ವ ಹಿಡಿದಿದ್ದವನು ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡನು.
19 and Jesus did not suffer him, but saith to him, `Go away to thy house, unto thine own `friends', and tell them how great things the Lord did to thee, and dealt kindly with thee;ಆದಾಗ್ಯೂ ಯೇಸು ಅವನನ್ನು ಇರಗೊಡದೆ ಅವನಿಗೆ--ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು.
20 and he went away, and began to proclaim in the Decapolis how great things Jesus did to him, and all were wondering.ಅವನು ಹೊರಟು ಹೋಗಿ ಯೇಸು ತನಗೆ ಎಂಥೆಂಥಾ ಮಹತ್ಕಾರ್ಯಗಳನ್ನು ಮಾಡಿದನೆಂಬದನ್ನು ದೆಕಪೊಲಿ ಯದಲ್ಲಿ ಪ್ರಕಟಿಸಲಾರಂಭಿಸಿದನು. ಆಗ ಎಲ್ಲರೂ ಆಶ್ಚರ್ಯಪಟ್ಟರು.
21 And Jesus having passed over in the boat again to the other side, there was gathered a great multitude to him, and he was near the sea,ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು.
22 and lo, there doth come one of the chiefs of the synagogue, by name Jairus, and having seen him, he doth fall at his feet,ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು--
23 and he was calling upon him much, saying -- `My little daughter is at the last extremity -- that having come, thou mayest lay on her `thy' hands, so that she may be saved, and she shall live;'ನನ್ನ ಚಿಕ್ಕಮಗಳು ಸಾಯುವ ಸ್ಥಿತಿಯಲ್ಲಿ ಮಲಗಿದ್ದಾಳೆ, ಅವಳು ಸ್ವಸ್ಥಳಾಗುವಂತೆ ನೀನು ಬಂದು ನಿನ್ನ ಕೈಗಳನ್ನು ಅವಳ ಮೇಲೆ ಇಡು; ಆಗ ಅವಳು ಬದುಕುವಳು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು.
24 and he went away with him. And there was following him a great multitude, and they were thronging him,ಆಗ ಯೇಸು ಅವನ ಸಂಗಡ ಹೋದನು; ಮತ್ತು ಬಹಳ ಜನರು ನೂಕಾಡುತ್ತಾ ಆತನ ಹಿಂದೆ ಹೋದರು.
25 and a certain woman, having an issue of blood twelve years,ಆಗ ಹನ್ನೆರಡು ವರುಷಗಳಿಂದ ರಕ್ತಸ್ರಾವವಿದ್ದ ಒಬ್ಬ ಸ್ತ್ರೀಯು
26 and many things having suffered under many physicians, and having spent all that she had, and having profited nothing, but rather having come to the worse,ಅನೇಕ ವೈದ್ಯರಿಂದ ಬಹು ಕಷ್ಟಗಳನ್ನು ಅನುಭವಿಸಿ ತನಗಿದ್ದದ್ದನ್ನೆಲ್ಲಾ ವೆಚ್ಚ ಮಾಡಿದ್ದಾಗ್ಯೂ ರೋಗವು ಹೆಚ್ಚಾಯಿತೇ ಹೊರತು ಗುಣವಾಗಲಿಲ್ಲ.
27 having heard about Jesus, having come in the multitude behind, she touched his garment,ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು.
28 for she said -- `If even his garments I may touch, I shall be saved;'ಯಾಕಂದರೆ ಆಕೆಯು--ನಾನು ಆತನ ಉಡುಪುಗಳನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಅಂದುಕೊಂಡಿದ್ದಳು.
29 and immediately was the fountain of her blood dried up, and she knew in the body that she hath been healed of the plague.ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.
30 And immediately Jesus having known in himself that out of him power had gone forth, having turned about in the multitude, said, `Who did touch my garments?'ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ--ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು
31 and his disciples said to him, `Thou seest the multitude thronging thee, and thou sayest, `Who did touch me!'ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು.
32 And he was looking round to see her who did this,ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು.
33 and the woman, having been afraid, and trembling, knowing what was done on her, came, and fell down before him, and told him all the truth,ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.
34 and he said to her, `Daughter, thy faith hath saved thee; go away in peace, and be whole from thy plague.'ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು.
35 As he is yet speaking, there come from the chief of the synagogue's `house, certain', saying -- `Thy daughter did die, why still dost thou harass the Teacher?'ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು.
36 And Jesus immediately, having heard the word that is spoken, saith to the chief of the synagogue, `Be not afraid, only believe.'ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು.
37 And he did not suffer any one to follow with him, except Peter, and James, and John the brother of James;ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ.
38 and he cometh to the house of the chief of the synagogue, and seeth a tumult, much weeping and wailing;ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು.
39 and having gone in he saith to them, `Why do ye make a tumult, and weep? the child did not die, but doth sleep;ಆತನು ಒಳಕ್ಕೆ ಬಂದಾಗ ಅವರಿಗೆ--ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು.
40 and they were laughing at him. And he, having put all forth, doth take the father of the child, and the mother, and those with him, and goeth in where the child is lying,ಆಗ ಅವರು ಆತನಿಗೆ ಹಾಸ್ಯಮಾಡಿ ನಕ್ಕರು. ಆದರೆ ಆತನು ಅವರೆಲ್ಲರನ್ನು ಹೊರಗೆ ಹಾಕಿ ಹುಡುಗಿಯ ತಂದೆ ತಾಯಿಗಳನ್ನು ಮತ್ತು ತನ್ನ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಒಳಕ್ಕೆ ಹುಡುಗಿಯು ಮಲಗಿದ್ದಲ್ಲಿಗೆ ಹೋದನು.
41 and, having taken the hand of the child, he saith to her, `Talitha cumi;' which is, being interpreted, `Damsel (I say to thee), arise.'ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ --ತಲಿಥಾ ಕೂಮ್ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ.
42 And immediately the damsel arose, and was walking, for she was twelve years `old'; and they were amazed with a great amazement,ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು.
43 and he charged them much, that no one may know this thing, and he said that there be given to her to eat.ಇದು ಯಾವ ಮನುಷ್ಯ ನಿಗೂ ತಿಳಿಯಬಾರದೆಂದು ಆತನು ಅವರಿಗೆ ಖಂಡಿತ ವಾಗಿ ಹೇಳಿ ಅವಳಿಗೆ ತಿನ್ನುವದಕ್ಕೆ ಏನಾದರೂ ಕೊಡಬೇಕೆಂದು ಅಪ್ಪಣೆಕೊಟ್ಟನು.
Kannada Bible