Mark 2 - BBE (Kannada)

1 And when he came into Capernaum again after some days, the news went about that he was in the house.1 ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು.

2 And a great number had come together, so that there was no longer room for them, no, not even about the door: and he gave them teaching.ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ; ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು;

3 And four men came to him with one on a bed who had no power of moving.ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು.

4 And when they were unable to get near him because of all the people, they got the roof uncovered where he was: and when it was broken up, they let down the bed on which the man was.ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು.

5 And Jesus, seeing their faith, said to him, Son, you have forgiveness for your sins.ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು.

6 But there were certain of the scribes seated there, and reasoning in their hearts,ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು--

7 Why does this man say such things? he has no respect for God: from whom does forgiveness come but from God only?ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು.

8 And Jesus, having knowledge in his spirit of their thoughts, said to them, Why are you reasoning about these things in your hearts?ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ

9 Which is the simpler, to say to a man who is ill, You have forgiveness for your sins, or, Get up, take up your bed, and go?ಪಾರ್ಶ್ವವಾಯು ರೋಗಿಗೆ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? ಯಾವದು ಸುಲಭ?

10 But so that you may see that the Son of man has authority for the forgiveness of sins on earth, (he said to the man,)ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ (ಪಾರ್ಶ್ವವಾಯು ರೋಗಿಗೆ)--

11 I say to you, Get up, take up your bed, and go to your house.ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.

12 And he got up, and straight away took up the bed and went out before them all, so that they were all full of wonder, and gave glory to God, saying, We have never seen anything like this.ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.

13 And he went out again by the seaside; and all the people came to him, and he gave them teaching.ಆತನು ತಿರಿಗಿ ಸಮುದ್ರದ ಕಡೆಗೆ ಹೊರಟು ಹೋದನು; ಆಗ ಜನಸಮೂಹವೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಬೋಧಿಸಿದನು.

14 And when he went by, he saw Levi, the son of Alphaeus, seated at the place where taxes were taken, and he said to him, Come with me. And he got up, and went with him.ಆತನು ಹಾದುಹೋಗುತ್ತಿದ್ದಾಗ ಸುಂಕದ ಕಟ್ಟೆಯಲ್ಲಿ ಕೂತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡು ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು. ಆಗ ಅವನು ಎದ್ದು ಆತನನ್ನು ಹಿಂಬಾಲಿಸಿದನು.

15 And it came about that he was seated at meat in his house, and a number of tax-farmers and sinners were at table with Jesus and his disciples: for there were a great number of them, and they came after him.ಇದಾದ ಮೇಲೆ ಯೇಸು ಅವನ ಮನೆಯಲ್ಲಿ ಊಟಕ್ಕೆ ಕೂತಿದ್ದಾಗ ಅನೇಕ ಸುಂಕದವರೂ ಪಾಪಿಗಳೂ ಯೇಸುವಿನ ಮತ್ತು ಆತನ ಶಿಷ್ಯರ ಸಂಗಡ ಕೂತುಕೊಂಡರು; ಯಾಕಂದರೆ ಅಲ್ಲಿದ್ದ ಅನೇಕರು ಆತನನ್ನು ಹಿಂಬಾಲಿಸುತ್ತಿದ್ದರು.

16 And the scribes of the Pharisees, when they saw that he was taking food with the tax-farmers and sinners, said to his disciples, Why does he take food and drink with such men?ಆತನು ಸುಂಕದವರ ಮತ್ತು ಪಾಪಿಗಳ ಜೊತೆಯಲ್ಲಿ ಊಟ ಮಾಡುತ್ತಿರು ವದನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ--ಈತನು ಸುಂಕದವರ ಮತ್ತು ಪಾಪಿಗಳ ಸಂಗಡ ತಿನ್ನುವದು ಮತ್ತು ಕುಡಿಯುವದು ಹೇಗೆ ಅಂದರು.

17 And Jesus, hearing it, said to them, Those who are well have no need of a medical man, but those who are ill: I have come not to get the upright but sinners.ಯೇಸು ಅದನ್ನು ಕೇಳಿ--ಕ್ಷೇಮದಿಂದಿರುವವರಿಗೆ ಅಲ್ಲ, ಕ್ಷೇಮವಿಲ್ಲದವರಿಗೆ ವೈದ್ಯನುಬೇಕು; ನಾನು ನೀತಿವಂತರನ್ನಲ್ಲ, ಆದರೆ ಪಾಪಿಗಳನ್ನು ಮಾನಸಾಂತರಕ್ಕಾಗಿ ಕರೆಯುವದಕ್ಕೆ ಬಂದೆನು ಎಂದು ಅವರಿಗೆ ಹೇಳಿದನು.

18 And John's disciples and the Pharisees were taking no food: and they came and said to him, Why do John's disciples and the disciples of the Pharisees go without food, but your disciples do not?ಪದ್ಧತಿಯ ಪ್ರಕಾರ ಉಪವಾಸ ಮಾಡುತ್ತಿದ್ದ ಯೋಹಾನನ ಮತ್ತು ಫರಿಸಾಯರ ಶಿಷ್ಯರು ಆತನ ಬಳಿಗೆ ಬಂದು ಆತನಿಗೆ--ಯೋಹಾನನ ಮತ್ತು ಫರಿಸಾಯರ ಶಿಷ್ಯರು ಉಪವಾಸಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಯಾಕೆ ಉಪವಾಸ ಮಾಡುವದಿಲ್ಲ ಎಂದು ಕೇಳಿದರು.

19 And Jesus said to them, Will the friends of a newly-married man go without food while he is with them? as long as they have him with them they will not go without food.ಅದಕ್ಕೆ ಯೇಸು ಅವರಿಗೆ--ಮದಲಿಂಗನು ಅವರ ಸಂಗಡ ಇರುವಾಗ ಮದಲಗಿ ತ್ತಿಯ ಮನೇಮಕ್ಕಳು ಉಪವಾಸ ಮಾಡುವರೋ? ಮದಲಿಂಗನು ಅವರ ಸಂಗಡ ಇರುವ ತನಕ ಅವರು ಉಪವಾಸ ಮಾಡುವದಿಲ್ಲ.

20 But the days will come when the husband will be taken away from them, and then they will go without food.ಆದರೆ ಮದಲಿಂಗನು ಅವರ ಬಳಿಯಿಂದ ತೆಗೆಯಲ್ಪಡುವ ದಿವಸಗಳು ಬರುತ್ತವೆ; ಆಗ ಅವರು ಆ ದಿವಸಗಳಲ್ಲಿ ಉಪವಾಸ ಮಾಡುವರು.

21 No man puts a bit of new cloth on an old coat: or the new, by pulling away from the old, makes a worse hole.ಇದಲ್ಲದೆ ಹೊಸಬಟ್ಟೆಯ ತುಂಡನ್ನು ಹಳೆಯ ಉಡುಪಿಗೆ ಯಾರೂ ಹಚ್ಚುವದಿಲ್ಲ;ಹಚ್ಚಿದರೆ ಹೊಸ ತುಂಡು ಹಳೆಯ ಉಡುಪನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು.

22 And no man puts new wine into old wine-skins: or the skins will be burst by the wine, and the wine and the skins will be wasted: but new wine has to be put into new wine-skins.ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕುವದಿಲ್ಲ; ಹಾಕಿದರೆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ಹಾಕುವದರಿಂದ ದ್ರಾಕ್ಷಾರಸವು ಚೆಲ್ಲಿಹೋಗುವದು ಮತ್ತು ಬುದ್ದಲಿಗಳು ಕೆಟ್ಟುಹೋಗು ವವು. ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿಯೇ ಹಾಕಿಡತಕ್ಕದ

23 And it came about that on the Sabbath day he was going through the grain-fields; and while they were walking, his disciples took the heads of grain.ಇದಾದ ಮೇಲೆ ಆತನು ಸಬ್ಬತ್‌ ದಿನದಲ್ಲಿ ಪೈರಿನ ಹೊಲಗಳನ್ನು ಹಾದುಹೋಗುತ್ತಿದ್ದಾಗ ಆತನ ಶಿಷ್ಯರು ಕಾಳಿನ ತೆನೆಗಳನ್ನು ಕೀಳಲಾರಂಭಿಸಿದರು.

24 And the Pharisees said to him, Why are they doing what it is not right to do on the Sabbath?ಅದಕ್ಕೆ ಫರಿಸಾಯರು ಆತನಿಗೆ--ಇಗೋ, ಅವರು ಸಬ್ಬತ್‌ ದಿನದಲ್ಲಿ ಮಾಡಬಾರದ್ದನ್ನು ಯಾಕೆ ಮಾಡು ತ್ತಾರೆ ಎಂದು ಕೇಳಿದರು.

25 And he said to them, Have you no knowledge of what David did, when he had need and was without food, he, and those who were with him?ಆತನು ಅವರಿಗೆ--ದಾವೀದನು ಕೊರತೆಯುಳ್ಳವನಾಗಿ ಹಸಿದಾಗ ಅವನೂ ಅವನ ಸಂಗಡ ಇದ್ದವರೂ ಏನು ಮಾಡಿ ದರು?

26 How he went into the house of God when Abiathar was high priest, and took for food the holy bread, which only the priests may take, and gave it to those who were with him?ಮಹಾಯಾಜಕನಾದ ಅಬಿಯಾತರನ ದಿವಸಗಳಲ್ಲಿ ಅವನು ದೇವರ ಮನೆಯೊಳಕ್ಕೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖದ ರೊಟ್ಟಿಯನ್ನು ಹೇಗೆ ತಿಂದು ತನ್ನ ಜೊತೆಯಲ್ಲಿ ಇದ್ದವರಿಗೂ ಕೊಟ್ಟನೆಂಬದನ್ನು ನೀವು ಎಂದಾದರೂ ಓದಲಿಲ್ಲವೋ ಎಂದು ಹೇಳಿ ದನು.

27 And he said to them, The Sabbath was made for man, and not man for the Sabbath;ಆತನು ಅವರಿಗೆ--ಸಬ್ಬತ್ತು ಮನುಷ್ಯರಿ ಗೋಸ್ಕರ ಮಾಡಲ್ಪಟ್ಟಿತು; ಆದರೆ ಮನುಷ್ಯನು ಸಬ್ಬತ್ತಿಗೋಸ್ಕರ ಅಲ್ಲ;

28 So that the Son of man is lord even of the Sabbath.ಆದದರಿಂದ ಮನುಷ್ಯಕುಮಾ ರನು ಸಬ್ಬತ್ತಿಗೆ ಸಹ ಒಡೆಯನಾಗಿದ್ದಾನೆ ಅಂದನು.

Kannada Bible