Mark 13 - DBY (Kannada)
1 And as he was going out of the temple, one of his disciples says to him, Teacher, see what stones and what buildings!ಆತನು ದೇವಾಲಯದೊಳಗಿಂದ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ--ಬೋಧಕನೇ, ಇಲ್ಲಿ ಎಂಥಾ ತರವಾದ ಕಲ್ಲುಗಳು ಮತ್ತು ಎಂಥಾ ಕಟ್ಟಡಗಳು ಇವೆ ನೋಡು ಅಂದನು.
2 And Jesus answering said to him, Seest thou these great buildings? not a stone shall be left upon a stone, which shall not be thrown down.ಯೇಸು ಅವನಿಗೆ ಪ್ರತ್ಯುತ್ತರವಾಗಿ-- ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಕೆಳಗೆ ಕೆಡವಲ್ಪಡದೆ ಒಂದರ ಮೇಲೊಂದು ಕಲ್ಲು ಇಲ್ಲಿ ಬಿಡಲ್ಪಡುವದಿಲ್ಲ ಅಂದನು.
3 And as he sat on the mount of Olives opposite the temple, Peter and James and John and Andrew asked him privately,ಆತನು ಎಣ್ಣೇ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತುಕೊಂಡಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯ ಇವರು ಪ್ರತ್ಯೇಕ ವಾಗಿ ಆತನಿಗೆ--
4 Tell us, when shall these things be, and what is the sign when all these things are going to be fulfilled?ಇವೆಲ್ಲಾ ಯಾವಾಗ ಆಗುವವು? ಮತ್ತು ಇವೆಲ್ಲವುಗಳು ನೆರವೇರುವದಕ್ಕೆ ಯಾವ ಸೂಚನೆ ಇರುವದು? ನಮಗೆ ಹೇಳು ಎಂದು ಕೇಳಿ ದರು.
5 And Jesus answering them began to say, Take heed lest any one mislead you.ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಲಾ ರಂಭಿಸಿ-- ಯಾವನಾದರೂ ನಿಮ್ಮನ್ನು ಮೋಸಗೊಳಿಸ ದಂತೆ ಎಚ್ಚರಿಕೆ ತೆಗೆದು ಕೊಳ್ಳಿರಿ;
6 For many shall come in my name, saying, It is *I*, and shall mislead many.ಯಾಕಂದರೆ ಅನೇ ಕರು ನನ್ನ ಹೆಸರಿನಲ್ಲಿ ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
7 But when ye shall hear of wars and rumours of wars, be not disturbed, for [this] must happen, but the end is not yet.ಇದಲ್ಲದೆ ಯುದ್ಧಗಳ ವಿಷಯವಾಗಿಯೂ ಯುದ್ಧಗಳ ಸುದ್ಧಿಯ ವಿಷಯವಾಗಿಯೂ ನೀವು ಕೇಳುವಾಗ ಕಳವಳಪಡ ಬೇಡಿರಿ; ಯಾಕಂದರೆ ಅವುಗಳು ಆಗುವದು ಅಗತ್ಯ; ಆದರೆ ಇನ್ನೂ ಅದು ಅಂತ್ಯವಲ್ಲ.
8 For nation shall rise up against nation, and kingdom against kingdom; and there shall be earthquakes in [different] places, and there shall be famines and troubles: these things [are the] beginnings of throes.ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಇದಲ್ಲದೆ ಬರ ಗಾಲಗಳು ಕಳವಳಗಳು ಉಂಟಾಗುವವು; ಇವು ಸಂಕಟಗಳ ಪ್ರಾರಂಭವಾಗಿವೆ.
9 But *ye*, take heed to yourselves, for they shall deliver you up to sanhedrims and to synagogues: ye shall be beaten and brought before rulers and kings for my sake, for a testimony to them;ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ಅವರಿಗೆ ವಿರೋಧವಾಗಿ ನನ್ನ ನಿಮಿತ್ತ ಅಧಿಕಾರಿಗಳ ಮತ್ತು ಅರಸುಗಳ ಮುಂದೆ ನೀವು ತರಲ್ಪಡುವಿರಿ.
10 and the gospel must first be preached to all the nations.ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರಲ್ಪಡುವದು ಅಗತ್ಯವಾಗಿದೆ.
11 But when they shall lead you away to deliver you up, be not careful beforehand as to what ye shall say, [nor prepare your discourse]: but whatsoever shall be given you in that hour, that speak; for *ye* are not the speakers, but the Holy Spirit.ಆದರೆ ಅವರು ನಿಮ್ಮನ್ನು ಒಪ್ಪಿಸುವದಕ್ಕಾಗಿ ತಕ್ಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬದನ್ನು ಮುಂಚಿತವಾಗಿ ಚಿಂತಿಸಬೇಡಿರಿ, ಆಲೋಚಿಸಲೂ ಬೇಡಿರಿ; ಆದರೆ ಆ ಗಳಿಗೆಯಲ್ಲಿ ನಿಮಗೆ ಯಾವದು ಕೊಡಲ್ಪಡುವದೋ ಅದನ್ನೇ ಮಾತನಾಡಿರಿ; ಯಾಕಂ ದರೆ ಮಾತನಾಡುವವರು ನೀವಲ್ಲ, ಆದರೆ ಪರಿಶು
12 But brother shall deliver up brother to death, and father child; and children shall rise up against parents, and cause them to be put to death.ಆಗ ಸಹೋದರನು ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವ ರನ್ನು ಕೊಲ್ಲಿಸುವದಕ್ಕೆ ಕಾರಣರಾಗುವರು.
13 And ye will be hated of all on account of my name; but he that has endured to the end, *he* shall be saved.ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು.
14 But when ye shall see the abomination of desolation standing where it should not, (he that reads let him consider [it],) then let those in Judaea flee to the mountains;ಇದಲ್ಲದೆ ಪ್ರವಾದಿಯಾದ ದಾನಿಯೇಲನು ಹೇಳಿದಂತೆ ಹಾಳುಮಾಡುವ ಅಸಹ್ಯವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದು ವವನು ತಿಳುಕೊಳ್ಳಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
15 and him that is upon the housetop not come down into the house, nor enter [into it] to take away anything out of his house;ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ.
16 and him that is in the field not return back to take his garment.ಹೊಲ ದಲ್ಲಿರುವವನು ಮತ್ತೆ ತನ್ನ ಉಡುಪನ್ನು ತಕ್ಕೊಳ್ಳುವದಕ್ಕೆ ಹಿಂದಿರುಗದಿರಲಿ.
17 But woe to those that are with child and to those that give suck in those days!ಆದರೆ ಆ ದಿವಸಗಳಲ್ಲಿ ಗರ್ಭಿಣಿ ಯರಿಗೂ ಮೊಲೆಕುಡಿಸುವವರಿಗೂ ಅಯ್ಯೋ!
18 And pray that it may not be in winter time;ನಿಮ್ಮ ಪಲಾಯನವು ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
19 for those days shall be distress such as there has not been the like since [the] beginning of creation which God created, until now, and never shall be;ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ.
20 and if [the] Lord had not cut short those days, no flesh should have been saved; but on account of the elect whom he has chosen, he has cut short those days.ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾವನೂ ರಕ್ಷಣೆ ಹೊಂದುವ ದಿಲ್ಲ. ಆದರೆ ಆಯಲ್ಪಟ್ಟವರಿಗಾಗಿ ಅಂದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿ ದ್ದಾನೆ.
21 And then if any one say to you, Lo, here [is] the Christ, or Lo, there, believe [it] not.ಆಗ ಯಾವನಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ; ಇಲ್ಲವೆ ಅಗೋ, ಆತನು ಅಲ್ಲಿ ದ್ದಾನೆ ಎಂದು ಹೇಳಿದರೆ ಅವನನ್ನು ನಂಬಬೇಡಿರಿ;
22 For false Christs and false prophets will arise, and give signs and wonders to deceive, if possible, even the elect.ಯಾಕಂದರೆ ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ಆರಿಸಿಕೊಂಡವರನ್ನೂ ಮೋಸ ಗೊಳಿಸುವದಕ್ಕೊಸ್ಕರ ಸೂಚಕಕಾರ್ಯಗಳನ್ನು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವರು.
23 But do *ye* take heed: behold, I have told you all things beforehand.ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ.
24 But in those days, after that distress, the sun shall be darkened and the moon shall not give its light;ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
25 and the stars of heaven shall be falling down, and the powers which are in the heavens shall be shaken;ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು.
26 and then shall they see the Son of man coming in clouds with great power and glory;ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘ ಗಳಲ್ಲಿ ಬರುವದನ್ನು ಅವರು ನೋಡುವರು.
27 and then shall he send his angels and shall gather together his elect from the four winds, from end of earth to end of heaven.ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ತಾನು ಆರಿಸಿಕೊಂಡ ವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವನು.
28 But learn the parable from the fig-tree: when its branch already becomes tender and puts forth the leaves, ye know that the summer is near.ಇದಲ್ಲದೆ ಅಂಜೂರ ಮರದ ಸಾಮ್ಯವನ್ನು ಕಲಿ ತುಕೊಳ್ಳಿರಿ; ಅದರ ಕೊಂಬೆ ಇನ್ನೂ ಎಳೇದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿ ತೆಂದು ನೀವು ತಿಳುಕೊಳ್ಳುತ್ತೀರಿ;
29 Thus also *ye*, when ye see these things happening, know that it is near, at the doors.ಅದೇ ಪ್ರಕಾರ ಇವುಗಳು ಆಗುವದನ್ನು ನೀವು ನೋಡುವಾಗ ಅದು ಹತ್ತಿರದಲ್ಲಿ ಅಂದರೆ ಬಾಗಲುಗಳಲ್ಲಿಯೇ ಅದೆ ಎಂದು ತಿಳುಕೊಳ್ಳಿರಿ.
30 Verily I say unto you, This generation shall in no wise pass away, till all these things take place.ಇವೆಲ್ಲವುಗಳು ನೆರವೇರುವವರೆಗೆ ಈ ಸಂತತಿಯು ಅಳಿದು ಹೋಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
31 The heaven and the earth shall pass away, but my words shall in no wise pass away.ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.
32 But of that day or of that hour no one knows, neither the angels who are in heaven, nor the Son, but the Father.ಆದರೆ ಆ ದಿನದ ಮತ್ತು ಆ ಗಳಿಗೆಯ ವಿಷಯ ವಾಗಿ ತಂದೆಗೇ ಹೊರತು ಯಾವ ಮನುಷ್ಯನಿಗೂ ಪರಲೋಕದಲ್ಲಿರುವ ದೂತರಿಗೂ ಮಗನಿಗೂ ತಿಳಿ ಯದು.
33 Take heed, watch and pray, for ye do not know when the time is:ನೀವು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ, ಪ್ರಾರ್ಥಿಸಿರಿ. ಯಾಕಂದರೆ ಸಮಯವು ಯಾವಾಗ ಎಂದು ನಿಮಗೆ ತಿಳಿಯದು.
34 [it is] as a man gone out of the country, having left his house and given to his bondmen the authority, and to each one his work, and commanded the doorkeeper that he should watch.ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ.
35 Watch therefore, for ye do not know when the master of the house comes: evening, or midnight, or cock-crow, or morning;ಆದದರಿಂದ ಜಾಗರೂಕರಾಗಿರ್ರಿ. ಯಾಕಂದರೆ ಮನೇ ಯಜಮಾನನು ಸಂಜೆಯಲ್ಲಿಯೋ ಸರಿಹೊತ್ತಿನಲ್ಲಿಯೋ ಇಲ್ಲವೆ ಹುಂಜ ಕೂಗುವಾ ಗಲೋ ಇಲ್ಲವೆ ಮುಂಜಾನೆಯಲ್ಲಿಯೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ.
36 lest coming suddenly he find you sleeping.ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವದನ್ನು ಕಂಡಾನು.
37 But what I say to you, I say to all, Watch.ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.
Kannada Bible