Luke 1 - WEB (Kannada)

1 Since many have undertaken to set in order a narrative concerning those matters which have been fulfilled among us,ನಮ್ಮಲ್ಲಿ ಬಹು ನಿಶ್ಚಯವಾಗಿ ನಂಬಿ ಕೊಂಡಿರುವ ವಿಷಯಗಳ ಪ್ರಕಟನೆಯನ್ನು ಕ್ರಮವಾಗಿ ಬರೆಯುವದಕ್ಕೆ ಅನೇಕರು ಕೈಕೊಂಡು

2 even as those who from the beginning were eyewitnesses and ministers of the word delivered them to us,ಮೊದಲಿನಿಂದಲೂ ಕಣ್ಣಾರೆ ಕಂಡ ಸಾಕ್ಷಿಗಳು ಮತ್ತು ವಾಕ್ಯಪರಿಚಾರಕರು ಅವುಗಳನ್ನು ನಮಗೆ ಒಪ್ಪಿಸಿಕೊ ಟ್ಟದ್ದರಿಂದ

3 it seemed good to me also, having traced the course of all things accurately from the first, to write to you in order, most excellent Theophilus;ಅತ್ಯುತ್ತಮನಾದ ಥೆಯೊಫಿಲನೇ, ಮೊದಲಿ ನಿಂದಲೂ ಎಲ್ಲವುಗಳನ್ನು ಪೂರ್ಣವಾಗಿ ತಿಳಿದುಕೊಂಡಿ ರುವ ನಾನು ಸಹ ಅವುಗಳನ್ನು ಕ್ರಮವಾಗಿ ನಿನಗೆ ಬರೆಯುವದು ಒಳ್ಳೇದೆಂದು ನನಗೆ ತೋಚಿತು;

4 that you might know the certainty concerning the things in which you were instructed.ಹೀಗೆ ನಿನಗೆ ಬೋಧಿಸಲ್ಪಟ್ಟವುಗಳು ಸ್ಥಿರವಾದವುಗಳೆಂದು ಇದರಿಂದ ನೀನು ತಿಳಿಯಬಹುದು.

5 There was in the days of Herod, the king of Judea, a certain priest named Zacharias, of the priestly division of Abijah. He had a wife of the daughters of Aaron, and her name was Elizabeth.ಯೂದಾಯದ ಅರಸನಾದ ಹೆರೋದನ ದಿನ ಗಳಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರಿಯನೆಂದು ಹೆಸರಿದ್ದ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ಕುಮಾರ್ತೆಯರಿಗೆ ಸಂಬಂಧಪಟ್ಟವಳು. ಆಕೆಯ ಹೆಸರು ಎಲಿಸಬೇತ್‌.

6 They were both righteous before God, walking blamelessly in all the commandments and ordinances of the Lord.ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನ್ಯಾಯವಿಧಿಗಳನ್ನು ತಪ್ಪಿಲ್ಲದೆ ಕೈಕೊಂಡು ದೇವರ ಮುಂದೆ ನೀತಿವಂತರಾಗಿದ್ದರು.

7 But they had no child, because Elizabeth was barren, and they both were well advanced in years.ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕ ಳಿರಲಿಲ್ಲ; ಅವರಿಬ್ಬರೂ ಬಹಳ ಪ್ರಾಯಹೋದವರಾ ಗಿದ್ದರು.

8 Now it happened, while he executed the priest's office before God in the order of his division,ಹೀಗಿರಲಾಗಿ ಅವನು ತನ್ನ ವರ್ಗದ ಸರತಿಯ ಮೇರೆಗೆ ದೇವರ ಮುಂದೆ ಯಾಜಕನ ಉದ್ಯೋಗವನ್ನು ಮಾಡುತ್ತಿದ್ದಾಗ

9 according to the custom of the priest's office, his lot was to enter into the temple of the Lord and burn incense.ಯಾಜಕೋದ್ಯೋಗದ ಪದ್ಧತಿಯ ಪ್ರಕಾರ ಅವನು ಕರ್ತನ ಆಲಯದಲ್ಲಿ ಪ್ರವೇಶಿಸಿ ಧೂಪವನ್ನು ಸುಡುವದು ಅವನ ಪಾಲಿಗೆ ಬಂತು.

10 The whole multitude of the people were praying outside at the hour of incense.ಧೂಪಾರ್ಪಣೆಯ ಸಮಯದಲ್ಲಿ ಜನ ಸಮೂಹ ವೆಲ್ಲಾ ಹೊರಗೆ ಪ್ರಾರ್ಥಿಸುತ್ತಿದ್ದರು.

11 An angel of the Lord appeared to him, standing on the right side of the altar of incense.ಆಗ ಧೂಪ ವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.

12 Zacharias was troubled when he saw him, and fear fell upon him.ಜಕರೀ ಯನು ಅವನನ್ನು ನೋಡಿ ಕಳವಳದಿಂದ ಭಯಹಿಡಿ ದವನಾದನು.

13 But the angel said to him, "Don't be afraid, Zacharias, because your request has been heard, and your wife, Elizabeth, will bear you a son, and you shall call his name John.ಆದರೆ ಆ ದೂತನು ಅವನಿಗೆ--ಜಕರೀಯನೇ, ಭಯಪಡಬೇಡ; ಯಾಕಂದರೆ ನಿನ್ನ ಪ್ರಾರ್ಥನೆಯು ಕೇಳಲ್ಪಟ್ಟಿದೆ; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನನ್ನು ಯೋಹಾನನೆಂದು ಕರೆಯಬೇಕು.

14 You will have joy and gladness; and many will rejoice at his birth.ನಿನಗೆ ಆನಂದವೂ ಉಲ್ಲಾಸವೂ ಆಗುವದು; ಅನೇಕರು ಅವನ ಜನನದಲ್ಲಿ ಆನಂದಿಸುವರು.

15 For he will be great in the sight of the Lord, and he will drink no wine nor strong drink. He will be filled with the Holy Spirit, even from his mother's womb.ಯಾಕಂದರೆ ಅವನು ಕರ್ತನ ದೃಷ್ಟಿಯಲ್ಲಿ ದೊಡ್ಡವ ನಾಗಿದ್ದು ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿ ಯುವದೇ ಇಲ್ಲ; ಅವನು ತಾಯಿಯ ಗರ್ಭದಿಂದಲೇ ಪರಿಶುದ್ಧಾತ್ಮಭರಿತನಾಗಿರುವನು.

16 He will turn many of the children of Israel to the Lord, their God.ಅವನು ಇಸ್ರಾ ಯೇಲಿನ ಮಕ್ಕಳಲ್ಲಿ ಅನೇಕರನ್ನು ಅವರ ದೇವರಾದ ಕರ್ತನ ಕಡೆಗೆ ತಿರುಗಿಸುವನು.

17 He will go before him in the spirit and power of Elijah, 'to turn the hearts of the fathers to the children,' and the disobedient to the wisdom of the just; to make ready a people prepared for the Lord."ಅವನು ತಂದೆಗಳ ಹೃದಯಗಳನ್ನು ಮಕ್ಕಳಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನಕ್ಕೂ ತಿರುಗಿಸಿ ಕರ್ತನಿಗೋಸ್ಕರ ಜನರನ್ನು ಸಿದ್ಧಮಾಡುವದಕ್ಕೆ ಎಲೀಯನ ಆತ್ಮದಲ್ಲಿ ಯೂ ಬಲದಲ್ಲಿಯೂ ಆತನ ಮುಂದೆ ಹೋಗುವನು ಎಂದು ಹೇಳಿದನು.

18 Zacharias said to the angel, "How can I be sure of this? For I am an old man, and my wife is well advanced in years."ಆಗ ಜಕರೀಯನು ಆ ದೂತನಿಗೆ--ಇದನ್ನು ನಾನು ಯಾವದರಿಂದ ತಿಳು ಕೊಳ್ಳಲಿ? ಯಾಕಂದರೆ ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯಗತಿಸಿದವಳು ಅಂದನು.

19 The angel answered him, "I am Gabriel, who stands in the presence of God. I was sent to speak to you, and to bring you this good news.ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ--ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು, ಈಗ ನಿನ್ನ ಸಂಗಡ ಮಾತನಾಡುವದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವದಕ್ಕೂ ಕಳುಹಿಸ ಲ್ಪಟ್ಟಿದ್ದೇನೆ.

20 Behold, you will be silent and not able to speak, until the day that these things will happen, because you didn't believe my words, which will be fulfilled in their proper time."ಇಗೋ, ತಕ್ಕ ಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದದರಿಂದ ಈ ಸಂಗತಿಗಳು ಈಡೇರುವ ದಿನದ ವರೆಗೆ ನೀನು ಮೂಕನಾಗಿದ್ದು ಮಾತನಾಡಲಾರದೆ ಇರುವಿ ಅಂದನು.

21 The people were waiting for Zacharias, and they marveled that he delayed in the temple.ಆಗ ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದಲ್ಲಿ ಬಹಳ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.

22 When he came out, he could not speak to them, and they perceived that he had seen a vision in the temple. He continued making signs to them, and remained mute.ಅವನು ಹೊರಗೆ ಬಂದಾಗ ಅವರೊಂದಿಗೆ ಮಾತನಾಡಲಾರದೆ ಇದ್ದನು; ಅದಕ್ಕ ವರು ಅವನು ದೇವಾಲಯದಲ್ಲಿ ಒಂದು ದರ್ಶನವನ್ನು ಕಂಡನೆಂದು ಗ್ರಹಿಸಿದರು; ಯಾಕಂದರೆ ಅವನು ಅವರಿಗೆ ಸನ್ನೆ ಮಾಡುತ್ತಾ ಮಾತಿಲ್ಲದವನಾಗಿದ್ದನು.

23 It happened, when the days of his service were fulfilled, he departed to his house.ಇದಾದ ಮೇಲೆ ತನ್ನ ಸೇವೆಯ ದಿನಗಳು ಮುಗಿದ ಕೂಡಲೆ ಅವನು ತನ್ನ ಸ್ವಂತ ಮನೆಗೆ ಹೊರಟು ಹೋದನು.

24 After these days Elizabeth, his wife, conceived, and she hid herself five months, saying,ಆ ದಿವಸಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಗರ್ಭಿಣಿಯಾಗಿ ಐದು ತಿಂಗಳು ತನ್ನನ್ನು ಮರೆಮಾಡಿಕೊಂಡು--

25 "Thus has the Lord done to me in the days in which he looked at me, to take away my reproach among men."ಜನರಲ್ಲಿ ನನಗಿದ್ದ ಅವ ಮಾನವನ್ನು ತೆಗೆದುಹಾಕುವದಕ್ಕಾಗಿ ಕರ್ತನು ನನ್ನ ಮೇಲೆ ದೃಷ್ಟಿಯಿಟ್ಟ ದಿನಗಳಲ್ಲಿ ನನಗೆ ಹೀಗೆ ಮಾಡಿದನು ಎಂದು ಹೇಳಿದಳು.

26 Now in the sixth month, the angel Gabriel was sent from God to a city of Galilee, named Nazareth,ಆರನೆಯ ತಿಂಗಳಿನಲ್ಲಿ ಗಲಿಲಾಯ ಪಟ್ಟಣದ ನಜರೇತೆಂಬ ಊರಿಗೆ ದೇವರಿಂದ ಗಬ್ರಿಯೇಲನೆಂಬ ದೂತನು

27 to a virgin pledged to be married to a man whose name was Joseph, of the house of David. The virgin's name was Mary.ದಾವೀದನ ಮನೆತನದವನಾದ ಯೋಸೇ ಫನಿಗೆ ನಿಶ್ಚಯಮಾಡಲ್ಪಟ್ಟ ಮರಿಯಳೆಂಬ ಒಬ್ಬ ಕನ್ಯೆಯ ಬಳಿಗೆ ಕಳುಹಿಸಲ್ಪಟ್ಟನು.

28 Having come in, the angel said to her, "Rejoice, you highly favored one! The Lord is with you. Blessed are you among women!"ಆ ದೂತನು ಆಕೆಗೆ--ಅಪಾರ ದಯೆ ಹೊಂದಿದವಳೇ, ನಿನಗೆ ವಂದನೆ; ಕರ್ತನು ನಿನ್ನೊಂದಿಗಿದ್ದಾನೆ; ಸ್ತ್ರೀಯರಲ್ಲಿ ನೀನು ಧನ್ಯಳೇ ಎಂದು ಹೇಳಿದನು.

29 But when she saw him, she was greatly troubled at the saying, and considered what kind of salutation this might be.ಆಕೆಯು ಅವನನ್ನು ನೋಡಿ ಅವನ ಮಾತಿಗೆ ಕಳವಳಗೊಂಡು ಇದು ಎಂಥಾತರವಾದ ವಂದನೆ ಎಂದು ತನ್ನ ಮನದಲ್ಲಿ ಯೋಚಿಸುತ್ತಿರುವಾಗ

30 The angel said to her, "Don't be afraid, Mary, for you have found favor with God.ಆ ದೂತನು ಆಕೆಗೆ-- ಮರಿಯಳೇ, ಹೆದರಬೇಡ; ಯಾಕಂದರೆ ನೀನು ದೇವರ ದಯೆಯನ್ನು ಹೊಂದಿದ್ದೀ;

31 Behold, you will conceive in your womb, and bring forth a son, and will call his name 'Jesus.'ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು.

32 He will be great, and will be called the Son of the Most High. The Lord God will give him the throne of his father, David,ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು.

33 and he will reign over the house of Jacob forever. There will be no end to his Kingdom."ಆತನು ಯಾಕೋಬನ ಮನೆತನವನ್ನು ಸದಾ ಕಾಲವೂ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.

34 Mary said to the angel, "How can this be, seeing I am a virgin?"ಆಗ ಮರಿಯಳು ಆ ದೂತ ನಿಗೆ--ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ ಅಂದಳು.

35 The angel answered her, "The Holy Spirit will come on you, and the power of the Most High will overshadow you. Therefore also the holy one who is born from you will be called the Son of God.ಅದಕ್ಕೆ ಆ ದೂತನು ಪ್ರತ್ಯುತ್ತರವಾಗಿ ಆಕೆಗೆ--ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸಿ ಕೊಳ್ಳುವದು; ಆದದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರವಾದ ಶಿಶುವು ದೇವರ ಮಗನೆಂದು ಕರೆಯ ಲ್ಪಡುವನು.

36 Behold, Elizabeth, your relative, also has conceived a son in her old age; and this is the sixth month with her who was called barren.ಇಗೋ, ಬಂಜೆಯೆಂದು ಕರೆಯಲ್ಪಟ್ಟ ನಿನ್ನ ಬಂಧುವಾದ ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಮಗನನ್ನು ಗರ್ಭಧರಿಸಿದ್ದಾಳೆ. ಆಕೆಗೆ ಇದು ಆರನೆಯ ತಿಂಗಳು.

37 For everything spoken by God is possible."ಯಾಕಂದರೆ ದೇವರಿಗೆ ಅಸಾಧ್ಯವಾದದ್ದು ಯಾವದೂ ಇಲ್ಲ ಎಂದು ಹೇಳಿ ದನು.

38 Mary said, "Behold, the handmaid of the Lord; be it to me according to your word." The angel departed from her.ಆಗ ಮರಿಯಳು--ನೋಡು, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗೆ ಆಗಲಿ ಅಂದಳು; ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.

39 Mary arose in those days and went into the hill country with haste, into a city of Judah,ಆ ದಿವಸಗಳಲ್ಲಿ ಮರಿಯಳು ಎದ್ದು ಬೆಟ್ಟದ ಸೀಮೆಯ ಯೆಹೂದದ ಪಟ್ಟಣಕ್ಕೆ ಅವಸರದಿಂದ ಹೋಗಿ

40 and entered into the house of Zacharias and greeted Elizabeth.ಜಕರೀಯನ ಮನೆಯನ್ನು ಪ್ರವೇಶಿಸಿ ಎಲಿಸಬೇತಳನ್ನು ವಂದಿಸಿದಳು.

41 It happened, when Elizabeth heard Mary's greeting, that the baby leaped in her womb, and Elizabeth was filled with the Holy Spirit.ಎಲಿಸಬೇತಳು ಮರಿಯಳ ವಂದನೆಯನ್ನು ಕೇಳಿದಾಗ ಅವಳ ಗರ್ಭ ದಲ್ಲಿದ್ದ ಕೂಸು ಹಾರಾಡಿತು; ಎಲಿಸಬೇತಳು ಪರಿಶುದ್ಧಾ ತ್ಮಭರಿತಳಾಗಿ

42 She called out with a loud voice, and said, "Blessed are you among women, and blessed is the fruit of your womb!ಗಟ್ಟಿಯಾದ ಧ್ವನಿಯಿಂದ ಮಾತ ನಾಡಿ--ಸ್ತ್ರೀಯರಲ್ಲಿ ನೀನು ಧನ್ಯಳೇ; ನಿನ್ನ ಗರ್ಭಫಲವು ಆಶೀರ್ವದಿಸಲ್ಪಟ್ಟದ್ದೇ.

43 Why am I so favored, that the mother of my Lord should come to me?ನನ್ನ ಕರ್ತನ ತಾಯಿಯು ನನ್ನ ಬಳಿಗೆ ಬರುವದು ನನಗೆಲ್ಲಿಂದಾಯಿತು?

44 For behold, when the voice of your greeting came into my ears, the baby leaped in my womb for joy!ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿ ಗಳಲ್ಲಿ ಬಿದ್ದ ಕೂಡಲೆ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು.

45 Blessed is she who believed, for there will be a fulfillment of the things which have been spoken to her from the Lord!"ಕರ್ತನಿಂದ ತನಗೆ ಹೇಳಲ್ಪಟ್ಟವುಗಳು ನೆರವೇರುವವೆಂದು ನಂಬಿದವಳು ಧನ್ಯಳು ಎಂದು ಹೇಳಿದಳು.

46 Mary said, "My soul magnifies the Lord.ಆಗ ಮರಿಯಳು--ನನ್ನ ಪ್ರಾಣವು ಕರ್ತನನ್ನು ಘನಪಡಿಸುತ್ತದೆ;

47 My spirit has rejoiced in God my Savior,ನನ್ನ ಆತ್ಮವು ನನ್ನ ರಕ್ಷಕನಾದ ದೇವರಲ್ಲಿ ಉಲ್ಲಾಸಗೊಂಡಿದೆ;

48 For he has looked at the humble state of his handmaid. For behold, from now on, all generations will call me blessed.ಆತನು ತನ್ನ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾನೆ. ಇಗೋ, ಇಂದಿನಿಂದ ತಲತಲಾಂತರಗಳವರು ನನ್ನನ್ನು ಧನ್ಯಳೆಂದು ಕರೆಯುವರು.

49 For he who is mighty has done great things for me. Holy is his name.ಪರಾಕ್ರಮಿಯಾದಾತನು ನನಗೆ ಮಹತ್ತಾದವುಗಳನ್ನು ಮಾಡಿದ್ದಾನೆ; ಆತನ ಹೆಸರು ಪರಿಶುದ್ಧವಾದದ್ದು.

50 His mercy is for generations of generations on those who fear him.ಆತನಿಗೆ ಭಯಪಡು ವವರ ಮೇಲೆ ಆತನ ಕರುಣೆಯು ತಲತಲಾಂತರ ಗಳಿಗೂ ಇರುವದು.

51 He has shown strength with his arm. He has scattered the proud in the imagination of their heart.ಆತನು ತನ್ನ ಬಾಹುಬಲವನ್ನು ತೋರಿಸಿ ಗರ್ವಿಷ್ಠರನ್ನು ಅವರ ಹೃದಯದ ಕಲ್ಪನೆಗಳ ನಿಮಿತ್ತವಾಗಿ ಅವರನ್ನು ಚದರಿಸಿಬಿಟ್ಟಿದ್ದಾನೆ;

52 He has put down princes from their thrones. And has exalted the lowly.ಬಲಿಷ್ಠ ರನ್ನು ಅವರ ಸ್ಥಾನಗಳಿಂದ ಕೆಳಗೆ ದೊಬ್ಬಿ ದೀನರನ್ನು ಮೇಲಕ್ಕೆ ಎತ್ತಿದ್ದಾನೆ.

53 He has filled the hungry with good things. He has sent the rich away empty.ಹಸಿದವರನ್ನು ಒಳ್ಳೆಯವು ಗಳಿಂದ ತೃಪ್ತಿಪಡಿಸಿ ಐಶ್ವರ್ಯವಂತರನ್ನು ಬರಿದಾಗಿ ಕಳುಹಿಸಿಬಿಟ್ಟಿದ್ದಾನೆ.

54 He has given help to Israel, his servant, that he might remember mercy,ತನ್ನ ಕರುಣೆಯ ಜ್ಞಾಪಕಾರ್ಥ ವಾಗಿ ತನ್ನ ಸೇವಕನಾದ ಇಸ್ರಾಯೇಲನಿಗೆ ಸಹಾಯ ಮಾಡಿದ್ದಾನೆ.

55 As he spoke to our fathers, To Abraham and his seed forever."ಇದಲ್ಲದೆ ನಮ್ಮ ಪಿತೃಗಳಿಗೂ ಅಬ್ರ ಹಾಮನಿಗೂ ಅವನ ಸಂತತಿಗೂ ಸದಾಕಾಲಕ್ಕೆ ಆತನು ಹೇಳಿದಂತೆ ಮಾಡಿದ್ದಾನೆ ಅಂದಳು.

56 Mary stayed with her about three months, and then returned to her house.ಮರಿ ಯಳು ಸುಮಾರು ಮೂರು ತಿಂಗಳು ಅವಳ ಜೊತೆ ಯಲ್ಲಿದ್ದು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದಳು.

57 Now the time that Elizabeth should give birth was fulfilled, and she brought forth a son.ಇದಲ್ಲದೆ ಎಲಿಸಬೇತಳಿಗೆ ಹೆರಿಗೆಯ ಸಮಯವು ಪೂರ್ಣವಾದಾಗ ಆಕೆಯು ಒಬ್ಬ ಮಗನನ್ನು ಹೆತ್ತಳು.

58 Her neighbors and her relatives heard that the Lord had magnified his mercy towards her, and they rejoiced with her.ಆಗ ಕರ್ತನು ತನ್ನ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಹೊರೆಯವರೂ ಬಂಧುಗಳೂ ಕೇಳಿ ಆಕೆಯ ಕೂಡ ಸಂತೋಷಪಟ್ಟರು.

59 It happened on the eighth day, that they came to circumcise the child; and they would have called him Zacharias, after the name of the father.ತರುವಾಯ ಅವರು ಎಂಟನೇ ದಿನದಲ್ಲಿ ಆ ಮಗುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಬಂದು ಅವನ ತಂದೆಯ ಹೆಸರಿನಂತೆ ಅವನನ್ನು ಜಕರೀಯನೆಂದು ಕರೆದರು.

60 His mother answered, "Not so; but he will be called John."ಅದಕ್ಕೆ ಅವನ ತಾಯಿಯು ಪ್ರತ್ಯುತ್ತರ ವಾಗಿ--ಹಾಗಲ್ಲ. ಅವನು ಯೋಹಾನನೆಂದು ಕರೆಯ ಲ್ಪಡಬೇಕು ಅಂದಳು.

61 They said to her, "There is no one among your relatives who is called by this name."ಅದಕ್ಕವರು ಆಕೆಗೆ--ನಿನ್ನ ಬಂಧುಗಳಲ್ಲಿ ಈ ಹೆಸರಿನಿಂದ ಕರೆಯಲ್ಪಟ್ಟವರು ಒಬ್ಬರೂ ಇಲ್ಲ ಅಂದರು.

62 They made signs to his father, what he would have him called.ಅವನು ಯಾವ ಹೆಸರಿ ನಿಂದ ಕರೆಯಲ್ಪಡಬೇಕೆಂದು ಅವನ ತಂದೆಗೆ ಅವರು ಸನ್ನೆ ಮಾಡಿದರು.

63 He asked for a writing tablet, and wrote, "His name is John." They all marveled.ಆಗ ಅವನು ಒಂದು ಬರೆಯುವ ಹಲಗೆಯನ್ನು ಕೇಳಿ ಅವನ ಹೆಸರು ಯೋಹಾನನು ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.

64 His mouth was opened immediately, and his tongue freed, and he spoke, blessing God.ಕೂಡಲೆ ಅವನ ಬಾಯಿ ತೆರೆಯಲ್ಪಟ್ಟು ಅವನ ನಾಲಿಗೆಯು ಸಡಿಲವಾಯಿತು ಮತ್ತು ಅವನು ಮಾತ ನಾಡಿ ದೇವರನ್ನು ಕೊಂಡಾಡಿದನು.

65 Fear came on all who lived around them, and all these sayings were talked about throughout all the hill country of Judea.ಆಗ ಅವರ ಸುತ್ತಲೂ ಮತ್ತು ಎಲ್ಲಾ ಯೂದಾಯದ ಬೆಟ್ಟದ ಸೀಮೆಯಲ್ಲಿಯೂ ಈ ಸಂಗತಿಗಳೆಲ್ಲಾ ಹರಡಿದವು.

66 All who heard them laid them up in their heart, saying, "What then will this child be?" The hand of the Lord was with him.ಕೇಳಿದವರೆಲ್ಲರೂ ಅವುಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು--ಈ ಕೂಸೂ ಎಂಥದ್ದಾಗುವನೊ ಎಂದು ಅಂದುಕೊಂಡರು. ಕರ್ತನ ಹಸ್ತವು ಅವನ ಸಂಗಡ ಇತ್ತು.

67 His father, Zacharias, was filled with the Holy Spirit, and prophesied, saying,ಅವನ ತಂದೆಯಾದ ಜಕರೀಯನು ಪವಿತ್ರಾತ್ಮ ಭರಿತನಾಗಿ ಪ್ರವಾದಿಸುತ್ತಾ--

68 "Blessed be the Lord, the God of Israel, For he has visited and worked redemption for his people;ಇಸ್ರಾಯೇಲಿನ ದೇವರಾದ ಕರ್ತನು ಸ್ತುತಿ ಹೊಂದಲಿ, ಯಾಕಂದರೆ ಆತನು ತನ್ನ ಜನರನ್ನು ಸಂಧಿಸಿ ಅವರನ್ನು ವಿಮೋಚಿ ಸಿದ್ದಾನೆ.

69 And has raised up a horn of salvation for us in the house of his servant Davidಆತನು ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗಾಗಿ ರಕ್ಷಣೆಯ ಕೊಂಬನ್ನು ಎತ್ತಿ ದ್ದಾನೆ.

70 (As he spoke by the mouth of his holy prophets who have been from of old),ಲೋಕಾದಿಯಿಂದ ಆತನು ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ

71 Salvation from our enemies, and from the hand of all who hate us;ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ಹಗೆ ಮಾಡುವವರ ಕೈಯಿಂದಲೂ ರಕ್ಷಿಸಲ್ಪಡುವಂತೆ

72 To show mercy towards our fathers, To remember his holy covenant,ನಮ್ಮ ಪಿತೃಗಳಿಗೆ ವಾಗ್ದಾನ ಮಾಡಿದ ಕರುಣೆಯನು ನೆರವೇರಿಸಲು ತನ್ನ ಪರಿಶುದ್ಧ ಒಡಂಬಡಿಕೆಯನ್ನು ನೆನಪಿಗೆ ತಂದು

73 The oath which he spoke to Abraham, our father,ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆ

74 To grant to us that we, being delivered out of the hand of our enemies, should serve him without fear,ನಾವು ನಮ್ಮ ಶತ್ರುಗಳ ಕೈಯಿಂದ ಬಿಡಿಸಲ್ಪಟ್ಟು ಭಯವಿಲ್ಲದವರಾಗಿ

75 In holiness and righteousness before him all the days of our life.ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ಆತನ ಮುಂದೆ ಪರಿಶುದ್ಧತೆಯಿಂದಲೂ ನೀತಿಯಿಂದಲೂ ಆತನನ್ನು ಸೇವಿಸುವವರಾಗುವದಕ್ಕೆ ಆತನು ಅನುಗ್ರಹಿ ಸುವನು.

76 And you, child, will be called a prophet of the Most High, For you will go before the face of the Lord to make ready his ways,ಇದಲ್ಲದೆ ಮಗುವೇ, ನೀನಾದರೋ ಮಹೋನ್ನತನ ಪ್ರವಾದಿ ಎಂದು ಕರೆಯಲ್ಪಡುವಿ; ಯಾಕಂದರೆ ಕರ್ತನ ಮಾರ್ಗಗಳನ್ನು ಸಿದ್ಧಮಾಡು ವದಕ್ಕೆ ಆತನ ಮುಂದೆ ಹೋಗುವಿ.

77 To give knowledge of salvation to his people by the remission of their sins,ಹೇಗೆಂದರೆ ಆತನು ತನ್ನ ಜನರಿಗೆ ಪಾಪಗಳ ಪರಿಹಾರದಿಂದ ರಕ್ಷಣೆಯ ತಿಳುವಳಿಕೆಯನ್ನು ಕೊಡುವನು.

78 Because of the tender mercy of our God, Whereby the dawn from on high will visit us,ನಮ್ಮ ದೇವರ ಮಮತೆಯ ಕರುಣೆಯಿಂದ ಅದು ಆಗುವದ ಲ್ಲದೆ ಮೇಲಣದಿಂದ ಅರುಣೋದಯವು ಉಂಟಾಗಿ ನಮ್ಮನ್ನು ಸಂಧಿಸಿ

79 To shine on those who sit in darkness and the shadow of death; To guide our feet into the way of peace."ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.

80 The child was growing, and becoming strong in spirit, and was in the desert until the day of his public appearance to Israel.ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.

Kannada Bible