Jonah 4 - WEB (Kannada)

1 But it displeased Jonah exceedingly, and he was angry.ಆದರೆ ಅದು ಯೋನನಿಗೆ ತುಂಬಾಕರೆಕರೆಯಾಗಿ ಅವನಿಗೆ ಬಹು ಕೋಪ ಬಂತು.

2 He prayed to Yahweh, and said, "Please, Yahweh, wasn't this what I said when I was still in my own country? Therefore I hurried to flee to Tarshish, for I knew that you are a gracious God, and merciful, slow to anger, and abundant in loving kindness, and you repent of the evil.ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ಹೇಳಿದ್ದೇನಂದರೆ--ಓ ಕರ್ತನೇ, ನಾನು ನನ್ನ ದೇಶದಲ್ಲಿದ್ದಾಗಲೇ ಇದನ್ನೇ ನಾನು ಹೇಳಲಿಲ್ಲವೋ? ಆದಕಾರಣ ನಾನು ಮೊದಲು ತಾರ್ಷೀಷಿಗೆ ಓಡಿ ಹೋದೆನು; ನೀನು ಕರುಣೆಯೂ ಕನಿಕರವೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳದೇವರೆಂದೂ ಕೇಡಿನ ವಿಷಯವಾಗಿ ಪಶ್ಚಾತ್ತಾಪ ಪಡುವಾತನೆಂದೂ ನನಗೆ ತಿಳಿದಿತ್ತು.

3 Therefore now, Yahweh, take, I beg you, my life from me; for it is better for me to die than to live."ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.

4 Yahweh said, "Is it right for you to be angry?"ಆಗ ಕರ್ತನು -- ನೀನು ಕೋಪಮಾಡಿಕೊಳ್ಳುವದು ಒಳ್ಳೇದೋ ಎಂದು ಅವನಿಗೆ ಹೇಳಿದನು.

5 Then Jonah went out of the city, and sat on the east side of the city, and there made himself a booth, and sat under it in the shade, until he might see what would become of the city.ಆಗ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣ ಕಡೆಯಲ್ಲಿ ಕೂತುಕೊಂಡು ಗುಡಿಸಲನ್ನು ಮಾಡಿಕೊಂಡು ಪಟ್ಟಣದಲ್ಲಿ ಏನಾಗುವದೆಂದು ನೋಡುವ ವರೆಗೆ ಅದರ ನೆರಳಿನಲ್ಲಿ ಕೂತುಕೊಂಡನು.

6 Yahweh God prepared a vine, and made it to come up over Jonah, that it might be a shade over his head, to deliver him from his discomfort. So Jonah was exceedingly glad because of the vine.ದೇವರಾದ ಕರ್ತನು ಒಂದು ಸೋರೇ ಗಿಡವನ್ನು ಎಬ್ಬಿಸಿ, ಅದು ಯೋನನ ಮೇಲೆ ಹಬ್ಬಿ ಬಂದು ಅವನ ತಲೆಯ ಮೇಲೆ ನೆರಳುಕೊಟ್ಟು ಅವನ ದುಃಖದಿಂದ ಅವನನ್ನು ಬಿಡಿಸುವಂತೆ ಮಾಡಿದನು: ಯೋನನು ಆ ಸೋರೇ ಗಿಡದ ವಿಷಯವಾಗಿ ಬಹಳ ಸಂತೋಷಪಟ್ಟನು.

7 But God prepared a worm at dawn the next day, and it chewed on the vine, so that it withered.ಆದರೆ ಮಾರನೇ ದಿನದಲ್ಲಿ ಉದಯವಾದಾಗ ದೇವರು ಒಂದು ಹುಳವನ್ನು ಸಿದ್ಧಮಾಡಿದನು; ಅದು ಸೋರೇ ಗಿಡವನ್ನು ಒಣಗುವ ಹಾಗೆ ಹೊಡೆಯಿತು.

8 It happened, when the sun arose, that God prepared a sultry east wind; and the sun beat on Jonah's head, so that he fainted, and requested for himself that he might die, and said, "It is better for me to die than to live."ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.

9 God said to Jonah, "Is it right for you to be angry about the vine?" He said, "I am right to be angry, even to death."ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.

10 Yahweh said, "You have been concerned for the vine, for which you have not labored, neither made it grow; which came up in a night, and perished in a night.ಆಗ ಕರ್ತನು ಹೇಳಿದ್ದೇನಂದರೆ--ನೀನು ಕಷ್ಟಪಡದಂಥ, ಬೆಳೆಸದಂಥ, ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶನವಾದಂಥ,

11 Shouldn't I be concerned for Nineveh, that great city, in which are more than one hundred twenty thousand persons who can't discern between their right hand and their left hand; and also much cattle?"ಆ ಸೋರೇಗಿಡದ ಮೇಲೆ ಕನಿಕರ ಪಟ್ಟಿಯಲ್ಲಾ, ಹಾಗಾ ದರೆ ಎಡ ಬಲ ಕೈಗಳನ್ನು ತಿಳಿಯದವರಾದ ಲಕ್ಷ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾದ ಜನರು, ಬಹಳ ದನ ಗಳು ಸಹ ಇರುವ ಆ ದೊಡ್ಡ ಪಟ್ಟಣವಾದ ನಿನೆವೆ ಯನ್ನು ನಾನು ಕನಿಕರಿಸಬಾರದೋ ಅಂದನು.

Kannada Bible