John 5 - BBE (Kannada)

1 After these things there was a feast of the Jews, and Jesus went up to Jerusalem.ಇದಾದ ಮೇಲೆ ಯೆಹೂದ್ಯರದೊಂದು ಹಬ್ಬ ಇದ್ದದರಿಂದ ಯೇಸು ಯೆರೂ ಸಲೇಮಿಗೆ ಹೋದನು.

2 Now in Jerusalem near the sheep-market there is a public bath which in Hebrew is named Beth-zatha. It has five doorways.ಯೆರೂಸಲೇಮಿನಲ್ಲಿ ಕುರಿ ಮಾರುವ ಸ್ಥಳದ ಹತ್ತಿರದಲ್ಲಿ ಒಂದು ಕೊಳವಿದೆ; ಇದು ಇಬ್ರಿಯ ಭಾಷೆಯಲ್ಲಿ ಬೇತ್ಸಥಾ ಎಂದು ಕರೆಯ ಲ್ಪಡುತ್ತದೆ. ಅದಕ್ಕೆ ಐದು ದ್ವಾರಾಂಗಳಗಳಿವೆ.

3 In these doorways there were a great number of people with different diseases: some unable to see, some without the power of walking, some with wasted bodies.ಇವು ಗಳಲ್ಲಿ ಬಲಹೀನರೂ ಕುರುಡರೂ ಕುಂಟರೂ ಮೈ ಒಣಗಿದವರೂ ಆಗಿದ್ದ ದೊಡ್ಡ ಸಮೂಹವು ಬಿದ್ದು ಕೊಂಡಿದ್ದು ನೀರಿನ ಕದಲಿಸುವಿಕೆಗಾಗಿ ಕಾದುಕೊಂಡಿ ದ್ದರು.

4 []ಆಯಾ ಕಾಲದಲ್ಲಿ ಒಬ್ಬ ದೂತನು ಕೊಳ ದೊಳಗೆ ಇಳಿದುಹೋಗಿ ನೀರನ್ನು ಕದಲಿಸುತ್ತಿದ್ದನು; ನೀರು ಕದಲಿಸಲ್ಪಟ್ಟ ಮೇಲೆ ಮೊದಲು ಯಾರು ನೀರಿನೊಳಗೆ ಹೆಜ್ಜೆಯಿಡುತ್ತಿದ್ದರೋ ಅವರಿಗೆ ಯಾವ ರೋಗವಿದ್ದರೂ ಸ್ವಸ್ಥವಾಗುತ್ತಿತ್ತು.

5 One man was there who had been ill for thirty-eight years.ಆಗ ಮೂವತ್ತೆಂಟು ವರುಷದಿಂದ ರೋಗಿಯಾಗಿದ್ದ ಒಬ್ಬಾನೊಬ್ಬ ಮನು ಷ್ಯನು ಅಲ್ಲಿ ಇದ್ದನು.

6 When Jesus saw him there on the floor it was clear to him that he had been now a long time in that condition, and so he said to the man, Is it your desire to get well?ಅವನು ಬಿದ್ದುಕೊಂಡಿರುವದನ್ನು ಯೇಸು ನೋಡಿ ಅವನು ಬಹುಕಾಲದಿಂದ ಆ ಸ್ಥಿತಿ ಯಲ್ಲಿ ಇದ್ದಾನೆಂದು ತಿಳಿದು ಅವನಿಗೆ--ನಿನಗೆ ಸ್ವಸ್ಥವಾ ಗುವದಕ್ಕೆ ಮನಸ್ಸುಂಟೋ ಎಂದು ಕೇಳಿದನು.

7 The ill man said in answer, Sir, I have nobody to put me into the bath when the water is moving; and while I am on the way down some other person gets in before me.ಅದಕ್ಕೆ ಆ ರೋಗಿಯು ಪ್ರತ್ಯುತ್ತರವಾಗಿ ಆತನಿಗೆ--ಅಯ್ಯಾ, ನೀರು ಕದಲಿಸಲ್ಪಡುವಾಗ ನನ್ನನ್ನು ಕೊಳದೊಳಗೆ ಇಳಿಸುವದಕ್ಕೆ ನನಗೆ ಯಾರು ಇಲ್ಲ; ಆದರೆ ನಾನು ಬರುತ್ತಿರುವಾಗಲೇ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ ಅಂದನು.

8 Jesus said to him, Get up, take your bed and go.ಯೇಸು ಅವನಿಗೆ-- ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅಂದನು.

9 And the man became well straight away, and took up his bed and went. Now that day was the Sabbath.ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.

10 So the Jews said to the man who had been made well, It is the Sabbath; and it is against the law for you to take up your bed.ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ--ಇದು ಸಬ್ಬತ್‌ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.

11 He said to them, But he who made me well, said to me, Take up your bed and go.ಅವನು ಪ್ರತ್ಯುತ್ತರವಾಗಿ ಅವರಿಗೆ--ನನ್ನನ್ನು ಸ್ವಸ್ಥ ಮಾಡಿದಾತನೇ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನನಗೆ ಹೇಳಿದ್ದಾನೆ ಅಂದನು.

12 Then they put to him the question: Who is the man who said to you, Take it up and go?ಅದಕ್ಕೆ ಅವರು ಅವನಿಗೆ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು ಎಂದು ಕೇಳಿದರು.

13 Now he who had been made well had no knowledge who it was, Jesus having gone away because of the number of people who were in that place.ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ; ಯಾಕಂದರೆ ಆ ಸ್ಥಳ ದಲ್ಲಿ ಜನಸಮೂಹವು ಇದ್ದದರಿಂದ ಯೇಸು ಅಲ್ಲಿಂದ ಸರಕೊಂಡು ಹೋಗಿದ್ದನು.

14 After a time Jesus came across him in the Temple and said to him, See, you are well and strong; do no more sin for fear a worse thing comes to you.ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು ಅವ ನಿಗೆ--ಇಗೋ, ನಿನಗೆ ಸ್ವಸ್ಥವಾಯಿತಲ್ಲಾ; ನಿನ್ನ ಮೇಲೆ ಹೆಚ್ಚಿನ ಕೇಡು ಬಾರದಂತೆ ಇನ್ನು ಪಾಪಮಾಡಬೇಡ ಅಂದನು.

15 The man went away and said to the Jews that it was Jesus who had made him well.ಆಗ ಅವನು ಹೊರಟು ಹೋಗಿ ತನ್ನನ್ನು ಸ್ವಸ್ಥಪಡಿಸಿದಾತನು ಯೇಸುವೇ ಎಂದು ಯೆಹೂದ್ಯ ರಿಗೆ ತಿಳಿಸಿದನು.

16 And for this reason the Jews were turned against Jesus, because he was doing these things on the Sabbath.ಆತನು ಇವುಗಳನ್ನು ಸಬ್ಬತ್‌ ದಿನದಲ್ಲಿ ಮಾಡಿದ ಕಾರಣ ಯೆಹೂದ್ಯರು ಯೇಸು ವನ್ನು ಹಿಂಸಿಸಿ ಆತನನ್ನು ಕೊಲ್ಲುವದಕ್ಕೆ ನೋಡಿದರು.

17 But his answer was: My Father is still working even now, and so I am working.ಆದರೆ ಯೇಸು ಅವರಿಗೆ--ನನ್ನ ತಂದೆಯು ಈ ವರೆಗೂ ಕೆಲಸ ಮಾಡುತ್ತಾನೆ ಮತ್ತು ನಾನೂ ಕೆಲಸ ಮಾಡುತ್ತೇನೆ ಅಂದನು.

18 For this cause the Jews had an even greater desire to put Jesus to death, because not only did he not keep the Sabbath but he said God was his Father, so making himself equal with God.ಆದದರಿಂದ ಆತನು ಸಬ್ಬತ್ತನ್ನು ವಿಾರಿದ್ದು ಮಾತ್ರವಲ್ಲದೆ ದೇವರನ್ನು ತನ್ನ ಸ್ವಂತ ತಂದೆ ಎಂದು ಕರೆದು ತನ್ನನ್ನು ದೇವರಿಗೆ ಸಮಾನ ಮಾಡಿಕೊಂಡ ಕಾರಣ ಯೆಹೂದ್ಯರು ಆತನನ್ನು ಕೊಲ್ಲುವದಕ್ಕೆ ಇನ್ನಷ್ಟು ಪ್ರಯತ್ನ ಮಾಡಿದರು.

19 So Jesus made answer and said, Truly I say to you, The Son is not able to do anything himself; he is able to do only what he sees the Father doing; whatever the Father does the Son does it in the same way.ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ-- ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡದ್ದನ್ನಲ್ಲದೆ ಮಗನು ತನ್ನಷ್ಟಕ್ಕೆ ತಾನೇ ಯಾವದನ್ನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುವನು.

20 For the Father has love for the Son and lets him see everything which he does: and he will let him see greater works than these so that you may be full of wonder.ಯಾಕಂದರೆ ತಂದೆಯು ಮಗನನ್ನು ಪ್ರೀತಿಸಿ ತಾನು ಸ್ವತಃ ಮಾಡುವವುಗಳನ್ನೆಲ್ಲಾ ಮಗನಿಗೆ ತೋರಿಸುತ್ತಾನೆ; ನೀವು ಆಶ್ಚರ್ಯಪಡುವ ಹಾಗೆ ಇವುಗಳಿಗಿಂತ ಮಹತ್ತಾದ ಕೆಲಸಗಳನ್ನು ಆತನಿಗೆ ತೋರಿಸುವನು.

21 In the same way, as the Father gives life to the dead, even so the Son gives life to those to whom he is pleased to give it.ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನೂ ತನಗೆ ಇಷ್ಟವಿರು ವವರನ್ನು ಬದುಕಿಸುತ್ತಾನೆ.

22 The Father is not the judge of men, but he has given all decisions into the hands of the Son;ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವದಿಲ್ಲ;

23 So that all men may give honour to the Son even as they give honour to the Father. He who gives no honour to the Son gives no honour to the Father who sent him.ಆದರೆ ಎಲ್ಲರೂ ತಂದೆಗೆ ಮಾನಕೊಡುವ ಪ್ರಕಾರವೇ ಮಗನಿಗೂ ಮಾನ ಕೊಡಬೇಕೆಂದು ತೀರ್ಪು ಮಾಡು ವದನ್ನೆಲ್ಲಾ ಮಗನಿಗೆ ಒಪ್ಪಿಸಿದ್ದಾನೆ. ಮಗನಿಗೆ ಮಾನ ಕೊಡದವನು ಆತನನ್ನು ಕಳುಹಿಸಿದ ತಂದೆಗೂ ಮಾನ ಕೊಡದವನಾಗಿದ್ದಾನೆ.

24 Truly I say to you, The man whose ears are open to my word and who has faith in him who sent me, has eternal life; he will not be judged, but has come from death into life.ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿ ದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿ ದ್ದಾನೆ. ಅವನು ತೀರ್ಪಿಗೆ ಗುರಿಯಾಗುವದಿಲ್ಲ; ಆದರೆ ಮರಣದಿಂದ ಜೀವಕ್ಕೆ ದಾಟಿದ್ದಾನೆ.

25 Truly I say to you, The time is coming, it has even now come, when the voice of the Son of God will come to the ears of the dead, and those hearing it will have life.ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು.

26 For even as the Father has life in himself, so he has given to the Son to have life in himself.ತಂದೆಯು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಆತನು ಅನುಗ್ರಹಿಸಿದ್ದಾನೆ.

27 And he has given him authority to be judge because he is the Son of man.ಆತನು ಮನುಷ್ಯಕುಮಾರ ನಾಗಿರುವದರಿಂದ ನ್ಯಾಯತೀರಿಸುವ ಅಧಿಕಾರವನ್ನು ಸಹ ಆತನಿಗೆ ಕೊಟ್ಟಿದ್ದಾನೆ.

28 Do not be surprised at this: for the time is coming when his voice will come to all who are in the place of the dead,ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು,

29 And they will come out; those who have done good, into the new life; and those who have done evil, to be judged.ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.

30 Of myself I am unable to do anything: as the voice comes to me so I give a decision: and my decision is right because I have no desire to do what is pleasing to myself, but only what is pleasing to him who sent me.ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ನಾನು ಕೇಳುವಂತೆಯೇ ತೀರ್ಪು ಮಾಡುತ್ತೇನೆ ಮತ್ತು ನನ್ನ ತೀರ್ಪು ನ್ಯಾಯ ವಾದದ್ದು; ಯಾಕಂದರೆ ನಾನು ನನ್ನ ಸ್ವಂತಚಿತ್ತವನ್ನಲ್ಲ, ಆದರೆ ನನ್ನನ್ನು ಕಳುಹಿಸಿದ ತಂದೆಯ ಚಿತ್ತವು ನೆರವೇರ ಬೇಕೆಂದು ಅಪೆಕ್ಷಿಸುತ್ತೇನೆ.

31 If I gave witness about myself, my witness would not be true.ನನ್ನನ್ನು ಕುರಿತು ನಾನೇ ಸಾಕ್ಷಿ ಹೇಳುವದಾದರೆ ನನ್ನ ಸಾಕ್ಷಿಯು ನಿಜವಾದದ್ದಲ್ಲ.

32 There is another who gives witness about me and I am certain that the witness he gives about me is true.ನನ್ನನ್ನು ಕುರಿತು ಸಾಕ್ಷಿಕೊಡುವಾತನು ಬೇರೊಬ್ಬನಿ ದ್ದಾನೆ; ಆತನು ನನ್ನ ವಿಷಯದಲ್ಲಿ ಕೊಡುವ ಸಾಕ್ಷಿಯು ನಿಜವೆಂದು ನಾನು ಬಲ್ಲೆನು.

33 You sent to John and he gave true witness.ನೀವು ಯೋಹಾನನ ಬಳಿಗೆ ಕಳುಹಿಸಿದಿರಿ; ಅವನು ಸತ್ಯಕ್ಕೆ ಸಾಕ್ಷಿಕೊಟ್ಟನು.

34 But I have no need of a man's witness: I only say these things so that you may have salvation.ನಾನು ಮನುಷ್ಯನಿಂದ ಸಾಕ್ಷಿ ಅಂಗೀಕರಿಸುವದಿಲ್ಲ; ಆದರೆ ನೀವು ರಕ್ಷಣೆ ಹೊಂದುವಂತೆ ನಾನು ಇವು ಗಳನ್ನು ಹೇಳುತ್ತೇನೆ.

35 He was a burning and shining light, and for a time you were ready to be happy in his light.ಅವನು ಉರಿದು ಪ್ರಕಾಶಿಸುವ ದೀಪವಾಗಿದ್ದನು; ನೀವು ಸ್ವಲ್ಪಕಾಲ ಅವನ ಬೆಳಕಿನಲ್ಲಿ ಸಂತೋಷಿಸುವದಕ್ಕೆ ಮನಸ್ಸುಳ್ಳವರಾಗಿದ್ದೀರಿ;

36 But the witness which I have is greater than that of John: the work which the Father has given me to do, the very work which I am now doing, is a witness that the Father has sent me.ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.

37 And the Father himself who sent me has given witness about me. Not one of you has ever given ear to his voice; his form you have not seen.ನನ್ನನ್ನು ಕಳುಹಿಸಿದ ತಂದೆಯು ತಾನೇ ನನ್ನ ವಿಷಯದಲ್ಲಿ ಸಾಕ್ಷಿ ಹೇಳಿದ್ದಾನೆ; ನೀವು ಎಂದಾದರೂ ಆತನ ಧ್ವನಿಯನ್ನು ಕೇಳಲಿಲ್ಲ ಇಲ್ಲವೆ ಆತನ ರೂಪವನ್ನು ನೋಡಲಿಲ್ಲ.

38 And you have not kept his word in your hearts, because you have not faith in him whom he has sent.ಆತನ ವಾಕ್ಯವು ನಿಮ್ಮಲ್ಲಿ ನೆಲೆಯಾಗಿರುವದಿಲ್ಲ; ಯಾಕಂದರೆ ಆತನು ಕಳುಹಿಸಿದಾತನನ್ನು ನೀವು ನಂಬು ವದಿಲ್ಲ.

39 You make search in the holy Writings, in the belief that through them you get eternal life; and it is those Writings which give witness about me.ಬರಹಗಳನ್ನು ಪರಿಶೋಧಿಸಿರಿ; ಅವುಗಳಲ್ಲಿ ನಿಮಗೆ ನಿತ್ಯಜೀವ ಉಂಟೆಂದು ನೀವು ನೆನಸುತ್ತೀರಲ್ಲಾ; ಅವುಗಳೇ ನನ್ನ ವಿಷಯವಾಗಿ ಸಾಕ್ಷಿಕೊಡುವವುಗಳಾ ಗಿವೆ.

40 And still you have no desire to come to me so that you may have life.ಆದರೆ ನೀವು ಜೀವವನ್ನು ಹೊಂದುವಂತೆ ನನ್ನ ಬಳಿಗೆ ಬರುವದಿಲ್ಲ.

41 I do not take honour from men;ನಾನು ಮನುಷ್ಯರಿಂದ ಮಾನವನ್ನು ಅಂಗೀಕರಿ ಸುವದಿಲ್ಲ.

42 But I have knowledge of you that you have no love for God in your hearts.ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ.

43 I have come in my Father's name, and your hearts are not open to me. If another comes with no other authority but himself, you will give him your approval.ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ.

44 How is it possible for you to have faith while you take honour one from another and have no desire for the honour which comes from the only God?ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?

45 Put out of your minds the thought that I will say things against you to the Father: the one who says things against you is Moses, on whom you put your hopes.ತಂದೆಯ ಮುಂದೆ ನಿಮ್ಮ ಮೇಲೆ ನಾನು ತಪ್ಪು ಹೊರಿಸುವೆನೆಂದು ನೀವು ನೆನಸಬೇಡಿರಿ; ಆದರೆ ನೀವು ನಂಬಿರುವ ಮೋಶೆಯೇ ನಿಮ್ಮ ಮೇಲೆ ತಪ್ಪು ಹೊರಿಸುತ್ತಾನೆ.

46 If you had belief in Moses you would have belief in me; for his writings are about me.ನೀವು ಮೋಶೆಯನ್ನು ನಂಬಿದ್ದರೆ ನನ್ನನ್ನೂ ನಂಬುತ್ತಿದ್ದಿರಿ; ಯಾಕಂದರೆ ಅವನು ನನ್ನ ವಿಷಯವಾಗಿ ಬರೆದನು.

47 If you have no belief in his writings, how will you have belief in my words?ಅವನು ಬರೆದದ್ದನ್ನು ನೀವು ನಂಬದಿದ್ದರೆ ನನ್ನ ಮಾತುಗಳನ್ನು ಹೇಗೆ ನಂಬಿರಿ ಅಂದನು.

Kannada Bible