John 4 - BBE (Kannada)

1 Now when it was clear to the Lord that word had come to the ears of the Pharisees that Jesus was making more disciples than John and was giving them baptismಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಬಾಪ್ತಿಸ್ಮ ಮಾಡಿಸುತ್ತಿದ್ದದ್ದು ಫರಿಸಾಯರು ಕೇಳಿದ್ದಾರೆಂದು ಕರ್ತ ನಿಗೆ ಗೊತ್ತಾಯಿತು.

2 (Though, in fact, it was his disciples who gave baptism, not Jesus himself),(ಆದಾಗ್ಯೂ ಬಾಪ್ತಿಸ್ಮ ಮಾಡಿಸು ತ್ತಿದ್ದಾತನು ಯೇಸು ತಾನೇ ಅಲ್ಲ, ಆದರೆ ಆತನ ಶಿಷ್ಯರು ಮಾಡಿಸುತ್ತಿದ್ದರು).

3 He went out of Judaea into Galilee again.ಆಗ ಆತನು ಯೂದಾಯ ವನ್ನು ಬಿಟ್ಟು ಗಲಿಲಾಯಕ್ಕೆ ತಿರಿಗಿ ಹೊರಟು ಹೋದನು.

4 And it was necessary for him to go through Samaria.ಆತನು ಸಮಾರ್ಯದ ಮಾರ್ಗವಾಗಿ ಹೋಗಬೇಕಾದದ್ದು ಅವಶ್ಯವಾಗಿತ್ತು.

5 So he came to a town of Samaria which was named Sychar, near to the bit of land which Jacob gave to his son Joseph:ಆಗ ಯಾಕೋ ಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸವಿಾಪದಲ್ಲಿರುವ ಸುಖರ್‌ ಎಂಬ ಸಮಾರ್ಯದ ಪಟ್ಟಣಕ್ಕೆ ಆತನು ಬಂದನು.

6 Now Jacob's fountain was there. Jesus, being tired after his journey, was resting by the fountain. It was about the sixth hour.ಅಲ್ಲಿ ಯಾಕೋಬನ ಬಾವಿ ಇತ್ತು; ಯೇಸು ಪ್ರಯಾಣದಿಂದ ಆಯಾಸಗೊಂಡಿರಲಾಗಿ ಆ ಬಾವಿಯ ಬಳಿಯಲ್ಲಿ ಹಾಗೆಯೇ ಕೂತುಕೊಂಡನು. ಆಗ ಸುಮಾರು ಆರನೇ ತಾಸಾಗಿತ್ತು. (ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಾ ಗಿತ್ತು).

7 A woman of Samaria came to get water, and Jesus said to her, Give me some water.ಆಗ ಸಮಾರ್ಯದ ಒಬ್ಬ ಸ್ತ್ರೀಯು ನೀರು ಸೇದುವದಕ್ಕಾಗಿ ಬಂದಳು; ಯೇಸು ಆಕೆಗೆ--ನನಗೆ ಕುಡಿಯುವದಕ್ಕೆ ಕೊಡು ಅಂದನು.

8 For his disciples had gone to the town to get food.(ಯಾಕಂದರೆ ಆತನ ಶಿಷ್ಯರು ಆಹಾರವನ್ನು ಕೊಂಡುಕೊಳ್ಳುವದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು).

9 The woman of Samaria said to him, Why do you, a Jew, make a request for water to me, a woman of Samaria? She said this because Jews have nothing to do with the people of Samaria.ಅದಕ್ಕೆ ಆ ಸಮಾ ರ್ಯದ ಸ್ತ್ರೀಯು ಆತನಿಗೆ--ನೀನು ಯೆಹೂದ್ಯನಾಗಿದ್ದು ಕುಡಿಯುವದಕ್ಕೆ ಕೊಡು ಎಂದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕೇಳುವದು ಹೇಗೆ? ಯಾಕಂದರೆ ಯೆಹೂದ್ಯರು ಸಮಾರ್ಯದವರೊಂದಿಗೆ ಹೊಕ್ಕು ಬಳಿಕೆ ಮಾಡುವದಿಲ್ಲವಲ್ಲಾ ಅಂದಳು.

10 In answer Jesus said, If you had knowledge of what God gives freely and who it is who says to you, Give me water, you would make your prayer to him, and he would give you living water.ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು.

11 The woman said to him, Sir, you have no vessel and the fountain is deep; from where will you get the living water?ಆ ಸ್ತ್ರೀಯು ಆತನಿಗೆ--ಅಯ್ಯಾ, ಸೇದುವದಕ್ಕೆ ನಿನಗೆ ಏನೂ ಇಲ್ಲ ಮತ್ತು ಬಾವಿ ಅಳವಾಗಿದೆ; ಹೀಗಿರುವಲ್ಲಿ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು?

12 Are you greater than our father Jacob who gave us the fountain and took the water of it himself, with his children and his cattle?ತಾನೂ ತನ್ನ ಮಕ್ಕಳೂ ತನ್ನ ದನಗಳೂ ಈ ಬಾವಿ ಯಿಂದ ಕುಡಿದು ನಮಗೆ ಅದನ್ನು ಕೊಟ್ಟ ನಮ್ಮ ತಂದೆಯಾದ ಯಾಕೋಬನಿಗಿಂತ ನೀನು ದೊಡ್ಡ ವನೋ? ಅಂದಳು.

13 Jesus said to her, Everyone who takes this water will be in need of it again:ಯೇಸು ಪ್ರತ್ಯುತ್ತರವಾಗಿ ಆಕೆಗೆ--ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೆ ತಿರಿಗಿ ನೀರಡಿಕೆಯಾಗುವದು;

14 But whoever takes the water I give him will never be in need of drink again; for the water I give him will become in him a fountain of eternal life.ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.

15 The woman said to him, Sir, give me this water, so that I may not be in need again of drink and will not have to come all this way for it.ಆ ಸ್ತ್ರೀಯು ಆತನಿಗೆ--ಅಯ್ಯಾ, ನನಗೆ ನೀರಡಿಕೆಯಾಗದಂತೆಯೂ ನೀರು ಸೇದುವದಕ್ಕೆ ನಾನು ಇಲ್ಲಿಗೆ ಬಾರದಂತೆಯೂ ನನಗೆ ಈ ನೀರನ್ನು ಕೊಡು ಅಂದಳು.

16 Jesus said to her, Go, get your husband and come back here with him.ಯೇಸು ಆಕೆಗೆ--ಹೋಗಿ ನಿನ್ನ ಗಂಡನನ್ನು ಕರಕೊಂಡು ಇಲ್ಲಿಗೆ ಬಾ ಅಂದನು.

17 In answer, the woman said, I have no husband. Jesus said to her, You have said rightly, I have no husband:ಆಗ ಆ ಸ್ತ್ರೀಯು ಪ್ರತ್ಯುತ್ತರ ವಾಗಿ--ನನಗೆ ಗಂಡನಿಲ್ಲ ಅಂದಳು, ಯೇಸು ಆಕೆಗೆ--ನನಗೆ ಗಂಡನಿಲ್ಲ ಎಂದು ನೀನು ಹೇಳಿದ್ದು ಸರಿಯೇ;

18 You have had five husbands, and the man you have now is not your husband: that was truly said.ಯಾಕಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು; ಈಗ ನಿನಗಿರುವವನು ನಿನ್ನ ಗಂಡ ನಲ್ಲ; ಆ ವಿಷಯದಲ್ಲಿ ನೀನು ಹೇಳಿದ್ದು ಸತ್ಯವಾದದ್ದು ಅಂದನು.

19 The woman said to him, Sir, I see that you are a prophet.ಆಗ ಆ ಸ್ತ್ರೀಯು ಆತನಿಗೆ--ಅಯ್ಯಾ, ನೀನು ಒಬ್ಬ ಪ್ರವಾದಿಯೆಂದು ನಾನು ಗ್ರಹಿಸುತ್ತೇನೆ;

20 Our fathers gave worship on this mountain, but you Jews say that the right place for worship is in Jerusalem.ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು.

21 Jesus said to her, Woman, take my word for this; the time is coming when you will not give worship to the Father on this mountain or in Jerusalem.ಯೇಸು ಆಕೆಗೆ--ಸ್ತ್ರೀಯೇ, ನನ್ನನ್ನು ನಂಬು; ಈ ಬೆಟ್ಟದಲ್ಲಿಯಾಗಲೀ ಯೆರೂಸಲೇಮಿನಲ್ಲಿಯಾಗಲೀ ನೀವು ತಂದೆಯನ್ನು ಆರಾಧಿಸದೆ ಇರುವ ಗಳಿಗೆ ಬರುತ್ತದೆ.

22 You give worship, but without knowledge of what you are worshipping: we give worship to what we have knowledge of: for salvation comes from the Jews.ನೀವು ಅರಿಯದೆ ಇರುವದನ್ನು ಆರಾಧಿ ಸುತ್ತೀರಿ; ನಾವು ಅರಿತಿರುವದನ್ನೇ ಆರಾಧಿಸುತ್ತೇವೆ; ಯಾಕಂದರೆ ರಕ್ಷಣೆಯು ಯೆಹೂದ್ಯರಿಂದಲೇ.

23 But the time is coming, and is even now here, when the true worshippers will give worship to the Father in the true way of the spirit, for these are the worshippers desired by the Father.ನಿಜ ವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯ ದಿಂದಲೂ ಆರಾಧಿಸುವ ಗಳಿಗೆಯು ಬರುತ್ತದೆ, ಅದು ಈಗಲೇ ಬಂದಿದೆ; ಯಾಕಂದರೆ ತನ್ನನ್ನು ಆರಾಧಿಸು ವದಕ್ಕೆ ತಂದೆಯು ಅಂಥವರನ್ನು ಹುಡುಕುತ್ತಾನೆ.

24 God is Spirit: then let his worshippers give him worship in the true way of the spirit.ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು.

25 The woman said to him, I am certain that the Messiah, who is named Christ, is coming; when he comes he will make all things clear to us.ಆ ಸ್ತ್ರೀಯು ಆತನಿಗೆ--ಕ್ರಿಸ್ತನೆಂದು ಕರೆಯಲ್ಪಟ್ಟ ಮೆಸ್ಸೀಯನು ಬರುತ್ತಾನೆಂದು ನಾನು ಬಲ್ಲೆನು; ಆತನು ಬಂದಾಗ ನಮಗೆ ಎಲ್ಲವುಗಳನ್ನು ತಿಳಿಯಪಡಿಸುವನು ಅಂದಳು.

26 Jesus said to her, I, who am talking to you, am he.ಯೇಸು ಆಕೆಗೆ--ನಿನ್ನೊಂದಿಗೆ ಮಾತನಾಡುವ ನಾನೇ ಆತನು ಅಂದನು.

27 At that point the disciples came back, and they were surprised to see him talking to a woman; but not one of them said to him, What is your purpose? or, Why are you talking to her?ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿದ್ದನೆಂದು ಆಶ್ಚರ್ಯ ಪಟ್ಟರು; ಆದಾಗ್ಯೂ--ನಿನಗೆ ಏನು ಬೇಕು? ಇಲ್ಲವೆ ಆಕೆಯೊಂದಿಗೆ ಯಾಕೆ ಮಾತನಾಡುತ್ತೀ ಎಂದು ಒಬ್ಬ ನಾದರೂ ಕೇಳಲಿಲ್ಲ.

28 Then the woman put down her water-pot and went into the town, and said to the people,ಆಗ ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ--

29 Come and see a man who has been talking to me of everything I ever did! Is it possible that this is the Christ?ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ಮನುಷ್ಯನನ್ನು ನೋಡಿರಿ; ಈತನು ಆ ಕ್ರಿಸ್ತನಲ್ಲವೇ ಅಂದಳು.

30 So they went out of the town and came to him.ಆಗ ಅವರು ಪಟ್ಟಣದಿಂದ ಆತನ ಬಳಿಗೆ ಹೊರಟು ಬಂದರು.

31 While this was taking place, the disciples were saying to Jesus, Master, take some food.ಆ ಸಮಯದಲ್ಲಿ ಆತನ ಶಿಷ್ಯರು ಆತನಿಗೆ--ಬೋಧಕನೇ, ಊಟ ಮಾಡು ಎಂದು ಬೇಡಿ ಕೊಂಡರು.

32 But he said to them, I have food of which you have no knowledge.ಆದರೆ ಆತನು ಅವರಿಗೆ--ನಿಮಗೆ ತಿಳಯದಿರುವ ಆಹಾರವು ನನಗೆ ಊಟಕ್ಕೆ ಇದೆ ಅಂದನು.

33 So the disciples said one to another, Did anyone give him food?ಆದದರಿಂದ ಶಿಷ್ಯರು--ಊಟ ಮಾಡು ವದಕ್ಕೆ ಯಾರಾದರೂ ಆತನಿಗೆ ಏನಾದರೂ ತಂದು ಕೊಟ್ಟರೋ ಎಂದು ಒಬ್ಬರಿಗೊಬ್ಬರು ಮಾತನಾಡಿ ಕೊಂಡರು.

34 Jesus said, My food is to do the pleasure of him who sent me and to make his work complete.ಆದರೆ ಯೇಸು ಅವರಿಗೆ--ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು.

35 You would say, Four months from now is the time of the grain-cutting. Take a look, I say to you, at the fields; they are even now white for cutting.ನೀವು--ಸುಗ್ಗಿಯು ಬರುವದಕ್ಕೆ ಇನ್ನೂ ನಾಲ್ಕು ತಿಂಗಳುಗಳು ಇವೆಯೆಂದು ಹೇಳುತ್ತೀರಲ್ಲವೋ? ಮತ್ತು--ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ, ಯಾಕಂದರೆ ಅವು ಈಗಾ ಗಲೇ ಬೆಳ್ಳಗಾಗಿ ಕೊಯ್ಲಿಗೆ ಬಂದವೆ ಎಂದು ನಾನು ನಿಮಗೆ ಹೇಳುತ್ತೇನೆ.

36 He who does the cutting now has his reward; he is getting together fruit for eternal life, so that he who did the planting and he who gets in the grain may have joy together.ಕೊಯ್ಯುವವನು ಕೂಲಿಯನ್ನು ಹೊಂದಿ ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳು ತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಾಗಿ ಸಂತೋಷಿಸುವರು.

37 In this the saying is a true one, One does the planting, and another gets in the grain.ಬಿತ್ತುವವನೊಬ್ಬನು, ಕೊಯ್ಯು ವವನು ಮತ್ತೊಬ್ಬನು ಎಂದು ಹೇಳುವ ಮಾತು ಇದ ರಲ್ಲಿ ಸತ್ಯವಾಗಿದೆ.

38 I sent you to get in grain which you had no hand in planting: other men did that work, and you take the reward.ನೀವು ಕಷ್ಟಪಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಬೇರೊಬ್ಬರು ಕಷ್ಟ ಪಟ್ಟರು ನೀವು ಅವರ ಕಷ್ಟದಲ್ಲಿ ಸೇರಿಕೊಂಡಿದ್ದೀರಿ ಅಂದನು.

39 Now a number of the people of that town had faith in him because of the woman's witness: He has been talking to me of everything I ever did.ಆಗ--ನಾನು ಮಾಡಿ ದೆಲ್ಲವನ್ನು ನನಗೆ ತಿಳಿಸಿದನೆಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿಗೋಸ್ಕರ ಆ ಪಟ್ಟಣದ ಅನೇಕ ಸಮಾರ್ಯದವರು ಆತನ ಮೇಲೆ ನಂಬಿಕೆ ಇಟ್ಟರು.

40 So when the people came to him they made request to him to be among them for a time, and he was there two days.ಹೀಗೆ ಆ ಸಮಾರ್ಯ ದವರು ಆತನ ಬಳಿಗೆ ಬಂದಾಗ ಆತನು ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅಲ್ಲಿ ಇಳುಕೊಂಡನು.

41 And a great number more of them came to have faith in him because of what he himself said.ಇನ್ನೂ ಹೆಚ್ಚು ಜನರು ಆತನ ಸ್ವಂತ ಮಾತಿಗೋಸ್ಕರ ಆತನನ್ನು ನಂಬಿದರು.

42 And they said to the woman, Now we have faith, but not because of your story: we ourselves have given ear to his words, and we are certain that he is truly the Saviour of the world.ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು.

43 And after the two days he went on from there into Galilee.ಎರಡು ದಿವಸಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು.

44 For Jesus himself said that a prophet has no honour in the country of his birth.ಯಾಕಂದರೆ ಪ್ರವಾದಿಗೆ ತನ್ನ ಸ್ವದೇಶದಲ್ಲಿ ಸನ್ಮಾನವಿಲ್ಲವೆಂದು ಯೇಸು ತಾನೇ ಸಾಕ್ಷಿ ಹೇಳಿದನು.

45 So when he came into Galilee, the Galilaeans took him to their hearts because of the things which they had seen him do in Jerusalem at the feast--they themselves having been there at the feast.ಗಲಿಲಾಯ ದವರು ಯೆರೂಸಲೇಮಿನ ಹಬ್ಬಕ್ಕೆ ಹೋದಾಗ ಆತನು ಅಲ್ಲಿ ಮಾಡಿದವುಗಳನ್ನೆಲ್ಲಾ ಅವರು ನೋಡಿ ದ್ದರಿಂದ ಆತನು ಗಲಿಲಾಯಕ್ಕೆ ಬಂದಾಗ ಆತನನ್ನು ಸ್ವೀಕರಿಸಿದರು.

46 So he came to Cana in Galilee, where he had made the water wine. And there was a certain man of high position whose son was ill at Capernaum.ಹೀಗೆ ಯೇಸು ತಾನು ನೀರನ್ನು ದ್ರಾಕ್ಷಾರಸ ವನ್ನಾಗಿ ಮಾಡಿದ ಗಲಿಲಾಯದ ಕಾನಾನಿಗೆ ತಿರಿಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಪ್ರಧಾನನ ಮಗನು ಅಸ್ವಸ್ಥನಾಗಿದ್ದನು.

47 When it came to his ears that Jesus had come from Judaea into Galilee, he went to him and made a request that he would come down to his son, who was near to death, and make him well.ಯೇಸು ಯೂದಾಯ ದಿಂದ ಗಲಿಲಾಯಕ್ಕೆ ಬಂದನೆಂದು ಅವನು ಕೇಳಿದಾಗ ಆತನ ಬಳಿಗೆ ಹೋಗಿ ತಾನು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಆತನನ್ನು ಬೇಡಿಕೊಂಡನು; ಯಾಕಂದರೆ ಅವನು ಸಾಯುವ ಹಾಗಿದ್ದನು.

48 Then Jesus said to him, You will not have faith if you do not see signs and wonders.ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು.

49 The man said, Sir, come down before my boy is dead.ಆಗ ಆ ಪ್ರಧಾನನು ಆತನಿಗೆ--ಅಯ್ಯಾ, ನನ್ನ ಮಗನು ಸಾಯುವದಕ್ಕೆ ಮೊದಲು ಬರಬೇಕು ಅಂದನು.

50 And Jesus said, Go in peace; your son is living. The man had faith in the word which Jesus said to him and went away.ಯೇಸು ಅವನಿಗೆ--ನೀನು ಹೋಗು, ನಿನ್ನ ಮಗನು ಬದುಕಿರುತ್ತಾನೆ ಅಂದನು. ಮತ್ತು ಆ ಮನುಷ್ಯನು ಯೇಸು ಹೇಳಿದ ಮಾತನ್ನು ನಂಬಿ ಹೊರಟುಹೋದನು.

51 And while he was going down, his servants came to him and said, Your boy is living.ಹೀಗೆ ಅವನು ಹೋಗುತ್ತಿರುವಾಗ ಅವನ ಸೇವಕರು ಅವ ನನ್ನು ಸಂಧಿಸಿ--ನಿನ್ನ ಮಗನು ಬದುಕಿದನು ಎಂದು ಅವನಿಗೆ ಹೇಳಿದರು.

52 So he put a question to them as to the hour when he became better; and they said to him, The disease went from him yesterday at the seventh hour.ಆಗ ಅವನು--ಯಾವ ಗಳಿಗೆಯಲ್ಲಿ ಅವನಿಗೆ ಗುಣವಾಗತೊಡಗಿತು ಎಂದು ಅವರನ್ನು ವಿಚಾರಿಸಿದಾಗ ಅವರು ನಿನ್ನೆ ಏಳನೇ ತಾಸಿನಲ್ಲಿ ಜ್ವರವು ಅವನನ್ನು ಬಿಟ್ಟಿತು ಎಂದು ಅವನಿಗೆ ಹೇಳಿದರು.

53 It was clear then to the father that this was the very time at which Jesus said to him, Your son is living. And he had faith in Jesus, he and all his family.ಹೀಗೆ--ನಿನ್ನ ಮಗನು ಬದುಕುತ್ತಾನೆ ಎಂದು ಯೇಸು ತನಗೆ ಹೇಳಿದ ಗಳಿಗೆಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು ತಾನೂ ತನ್ನ ಮನೆಯವರೆಲ್ಲರೂ ನಂಬಿದರು.

54 Now this is the second sign which Jesus did after he had come out of Judaea into Galilee.ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಮೇಲೆ ತಿರಿಗಿ ಮಾಡಿದ ಎರಡನೆಯ ಅದ್ಭುತಕಾರ್ಯವು ಇದಾಗಿದೆ.

Kannada Bible