John 21 - DBY (Kannada)
1 After these things Jesus manifested himself again to the disciples at the sea of Tiberias. And he manifested [himself] thus.ಇವುಗಳಾದ ಮೇಲೆ ಯೇಸು ತಿಬೇರಿಯ ಸಮುದ್ರದ ಬಳಿಯಲ್ಲಿ ಶಿಷ್ಯರಿಗೆ ತನ್ನನ್ನು ತಿರಿಗಿ ತೋರಿಸಿಕೊಂಡನು. ಆತನು ತನ್ನನ್ನು ತೋರಿಸಿ ಕೊಂಡ ರೀತಿ ಹೇಗಂದರೆ--
2 There were together Simon Peter, and Thomas called Didymus, and Nathanael who was of Cana of Galilee, and the [sons] of Zebedee, and two others of his disciples.ಸೀಮೋನ ಪೇತ್ರನೂ ದಿದುಮನೆಂಬ ತೋಮನೂ ಗಲಿಲಾಯದ ಕಾನಾ ಊರಿನ ನತಾನಯೇಲನೂ ಜೆಬೆದಾಯನ ಮಕ್ಕಳೂ ಆತನ ಶಿಷ್ಯರಲ್ಲಿ ಇನ್ನಿಬ್ಬರೂ ಒಟ್ಟಾಗಿ ಕೂಡಿದ್ದರು.
3 Simon Peter says to them, I go to fish. They say to him, We also come with thee. They went forth, and went on board, and that night took nothing.ಆಗ ಸೀಮೋನ ಪೇತ್ರನು ಅವರಿಗೆ--ನಾನು ವಿಾನು ಹಿಡಿಯುವದಕ್ಕೆ ಹೋಗುತ್ತೇನೆ ಅನ್ನಲು ಅವರು ಅವನಿಗೆ--ನಾವು ಸಹ ನಿನ್ನ ಸಂಗಡ ಬರುತ್ತೇವೆ ಅಂದರು. ಅವರು ಹೊರಟುಹೋಗಿ ಕೂಡಲೆ ದೋಣಿಯನ್ನು ಹತ್ತಿದರು. ಆದರೆ ಆ ರಾತ್ರಿಯಲ್ಲಿ ಏನೂ ಹಿಡಿಯಲಿಲ್ಲ.
4 And early morn already breaking, Jesus stood on the shore; the disciples however did not know that it was Jesus.ಬೆಳಗಾದಾಗ ಯೇಸು ದಡದಲ್ಲಿ ನಿಂತಿದ್ದನು. ಆದರೆ ಆತನು ಯೇಸು ಎಂದು ಶಿಷ್ಯರು ತಿಳಿಯಲಿಲ್ಲ.
5 Jesus therefore says to them, Children, have ye anything to eat? They answered him, No.ಆಗ ಯೇಸು ಅವರಿಗೆ--ಮಕ್ಕಳಿರಾ, ನಿಮಗೆ ಊಟಕ್ಕೆ ಏನಾದರೂ ಇದೆಯೋ ಅನ್ನಲು ಅವರು ಆತನಿಗೆ--ಇಲ್ಲವೆಂದು ಉತ್ತರ ಕೊಟ್ಟರು.
6 And he said to them, Cast the net at the right side of the ship and ye will find. They cast therefore, and they could no longer draw it, from the multitude of fishes.ಆತನು ಅವರಿಗೆ--ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ಸಿಕ್ಕುವದು ಅಂದನು. ಅವರು ಬೀಸಿದಾಗ ವಿಾನುಗಳ ರಾಶಿಯ ದೆಸೆಯಿಂದ ಅದನ್ನು ಎಳೆಯಲಾರದೆ ಇದ್ದರು.
7 That disciple therefore whom Jesus loved says to Peter, It is the Lord. Simon Peter therefore, having heard that it was the Lord, girded his overcoat [on him] (for he was naked), and cast himself into the sea;ಆದದರಿಂದ ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ--ಆತನು ಕರ್ತನು ಅಂದನು. ಆತನು ಕರ್ತನೆಂದು ಸೀಮೋನ ಪೇತ್ರನು ಕೇಳಿ ತನ್ನ ಬೆಸ್ತರ ಅಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ದುಮುಕಿ ದನು (ಯಾಕಂದರೆ ಅವನು ಬೆತ್ತಲೆಯಾಗಿದ್ದನು).
8 and the other disciples came in the small boat, for they were not far from the land, but somewhere about two hundred cubits, dragging the net of fishes.ಉಳಿದ ಶಿಷ್ಯರು ವಿಾನುಗಳಿದ್ದ ಬಲೆಯನ್ನು ಎಳೆಯುತ್ತಾ ಒಂದು ಚಿಕ್ಕ ದೋಣಿಯಲ್ಲಿ ಬಂದರು; (ಯಾಕಂದರೆ ಅವರು ದಡದಿಂದ ದೂರವಿರಲಿಲ್ಲ; ಆದರೆ ಅದು ಇನ್ನೂರು ಮೊಳ ದಷ್ಟಿತ್ತು).
9 When therefore they went out on the land, they see a fire of coals there, and fish laid on it, and bread.ಅವರು ದಡಕ್ಕೆ ಬಂದ ಕೂಡಲೆ ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ವಿಾನುಗಳನ್ನೂ ರೊಟ್ಟಿಯನ್ನೂ ಕಂಡರು.
10 Jesus says to them, Bring of the fishes which ye have now taken.ಯೇಸು ಅವರಿಗೆ--ನೀವು ಈಗ ಹಿಡಿದ ವಿಾನುಗಳಲ್ಲಿ ಕೆಲ ವನ್ನು ತನ್ನಿರಿ ಅಂದನು.
11 Simon Peter went up and drew the net to the land full of great fishes, a hundred and fifty-three; and though there were so many, the net was not rent.ಸೀಮೋನ ಪೇತ್ರನು ಹೋಗಿ ನೂರೈವತ್ತು ಮೂರು ದೊಡ್ಡ ವಿಾನುಗಳಿಂದ ತುಂಬಿದ ಬಲೆಯನ್ನು ದಡಕ್ಕೆ ಎಳೆದನು. ಅಷ್ಟು ವಿಾನು ಗಳಿದ್ದರೂ ಬಲೆಯು ಹರಿದಿರಲಿಲ್ಲ.
12 Jesus says to them, Come [and] dine. But none of the disciples dared inquire of him, Who art thou? knowing that it was the Lord.ಯೇಸು ಅವ ರಿಗೆ--ಬಂದು ಊಟಮಾಡಿರಿ ಅಂದನು; ಆತನು ಕರ್ತನೆಂದು ತಿಳಿದಿದ್ದರಿಂದ--ನೀನು ಯಾರು ಎಂದು ಆತನನ್ನು ಕೇಳಲು ಶಿಷ್ಯರಲ್ಲಿ ಯಾರಿಗೂ ಧೈರ್ಯ ವಿರಲಿಲ್ಲ.
13 Jesus comes and takes the bread and gives it to them, and the fish in like manner.ಆಗ ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಕೊಟ್ಟನು; ಹಾಗೆಯೇ ವಿಾನನ್ನೂ ಕೊಟ್ಟನು.
14 This is already the third time that Jesus had been manifested to the disciples, being risen from among [the] dead.ಯೇಸು ಸತ್ತವರೊಳಗಿಂದ ಎದ್ದ ಮೇಲೆ ತನ್ನ ಶಿಷ್ಯರಿಗೆ ತನ್ನನ್ನು ತೋರಿಸಿಕೊಂಡದ್ದು ಇದು ಮೂರನೆಯ ಸಾರಿ.
15 When therefore they had dined, Jesus says to Simon Peter, Simon, [son] of Jonas, lovest thou me more than these? He says to him, Yea, Lord; thou knowest that I am attached to thee. He says to him, Feed my lambs.ಅವರು ಊಟಮಾಡಿದ ಮೇಲೆ ಯೇಸು ಸೀಮೋನ ಪೇತ್ರನಿಗೆ--ಯೋನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತ ನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇ ನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ
16 He says to him again a second time, Simon, [son] of Jonas, lovest thou me? He says to him, Yea, Lord; thou knowest that I am attached to thee. He says to him, Shepherd my sheep.ಆತನು ತಿರಿಗಿ ಎರಡನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಲು ಅವನು ಆತನಿಗೆ--ಹೌದು, ಕರ್ತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆಂಬದನ್ನು ನೀನೇ ಬಲ್ಲೆ ಅಂದನು. ಅದಕ್ಕೆ ಆತನು ಅವನಿಗೆ--ನನ್ನ ಕುರಿಗಳನ್ನು ಮೇಯಿಸು ಎಂದು
17 He says to him the third time, Simon, [son] of Jonas, art thou attached to me? Peter was grieved because he said to him the third time, Art thou attached to me? and said to him, Lord, thou knowest all things; thou knowest that I am attached to thee. Jesus says to him, Feed my sheep.ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ
18 Verily, verily, I say to thee, When thou wast young, thou girdedst thyself, and walkedst where thou desiredst; but when thou shalt be old, thou shalt stretch forth thy hands, and another shall gird thee, and bring thee where thou dost not desire.ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ--ನೀನು ಯೌವನಸ್ಥನಾಗಿದ್ದಾಗ ನೀನೇ ನಿನ್ನ ನಡುಕಟ್ಟಿಕೊಂಡು ಇಷ್ಟಬಂದ ಕಡೆಗೆ ತಿರುಗಾ ಡುತ್ತಿದ್ದಿ; ಆದರೆ ನೀನು ಮುದುಕನಾದಾಗ ನಿನ್ನ ಕೈಗಳನ್ನು ಚಾಚುವಿ, ಆಗ ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದುಕೊಂ
19 But he said this signifying by what death he should glorify God. And having said this, he says to him, Follow me.ಅವನು ಎಂಥ ಮರಣ ದಿಂದ ದೇವರನ್ನು ಮಹಿಮೆಪಡಿಸಬೇಕಾಗಿದೆ ಎಂದು ಸೂಚಿಸಿ ಆತನು ಇದನ್ನು ಹೇಳಿದನು. ಆತನು ಇದನ್ನು ಹೇಳಿದ ಮೇಲೆ ಅವನಿಗೆ--ನನ್ನನ್ನು ಹಿಂಬಾಲಿಸು ಅಂದನು.
20 Peter, turning round, sees the disciple whom Jesus loved following, who also leaned at supper on his breast, and said, Lord, who is it that delivers thee up?ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ
21 Peter, seeing him, says to Jesus, Lord, and what [of] this [man]?ಯೇಸುವಿಗೆ--ಕರ್ತನೇ, ಈ ಮನುಷ್ಯನ ವಿಷಯವೇನು ಅಂದನು.
22 Jesus says to him, If I will that he abide until I come, what [is that] to thee? Follow thou me.ಯೇಸು ಅವನಿಗೆ--ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು? ನೀನು ನನ್ನನ್ನು ಹಿಂಬಾ ಲಿಸು ಅಂದನು.
23 This word therefore went out among the brethren, That disciple does not die. And Jesus did not say to him, He does not die; but, If I will that he abide until I come, what [is that] to thee?ಆಗ ಆ ಶಿಷ್ಯನು ಸಾಯುವದಿ ಲ್ಲವೆಂಬ ಮಾತು ಸಹೋದರರಲ್ಲಿ ಹರಡಿತು. ಆದರೂ--ಅವನು ಸಾಯುವದಿಲ್ಲವೆಂದು ಯೇಸು ಅವನಿಗೆ ಹೇಳಲಿಲ್ಲ; ಆದರೆ--ನಾನು ಬರುವ ತನಕ ಅವನು ಇರುವದು ನನಗೆ ಮನಸ್ಸಿದ್ದರೆ ಅದು ನಿನಗೇನು ಎಂತಲೇ ಹೇಳಿದನು.
24 This is the disciple who bears witness concerning these things, and who has written these things; and we know that his witness is true.ಇವುಗಳ ವಿಷಯವಾಗಿ ಸಾಕ್ಷಿ ಹೇಳಿ ಇವುಗಳನ್ನು ಬರೆದ ಶಿಷ್ಯನು ಇವನೇ; ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.
25 And there are also many other things which Jesus did, the which if they were written one by one, I suppose that not even the world itself would contain the books written.ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್.
Kannada Bible