Isaiah 52 - WEB (Kannada)
1 Awake, awake, put on your strength, Zion; put on your beautiful garments, Jerusalem, the holy city: for henceforth there shall no more come into you the uncircumcised and the unclean.ಓ ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಹೊಂದಿಕೋ, ಓ ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ಸೌಂದರ್ಯವಾದ ಉಡುಪುಗಳನ್ನು ಧರಿಸಿಕೋ; ಯಾಕಂದರೆ ಇಂದಿನಿಂದ ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನೊಳಗೆ ಬರುವದಿಲ್ಲ.
2 Shake yourself from the dust; arise, sit [on your throne], Jerusalem: loose yourself from the bonds of your neck, captive daughter of Zion.ಓ ಯೆರೂಸ ಲೇಮೇ, ಧೂಳನ್ನು ಝಾಡಿಸಿಕೋ; ಎದ್ದು ಕೂತು ಕೋ, ಓ ಸೆರೆಯಾದ ಚೀಯೋನ್ ಕುಮಾರಿಯೇ, ನಿನ್ನ ಕುತ್ತಿಗೆಯ ಪಾಶಗಳನ್ನು ಬಿಚ್ಚಿಕೋ.
3 For thus says Yahweh, You were sold for nothing; and you shall be redeemed without money.ಕರ್ತನು ಹೀಗನ್ನುತ್ತಾನೆ--ನಿಮ್ಮನ್ನು ನೀವೇ ನಿಷ್ಫಲವಾಗಿ ಮಾಡಿಕೊಂಡಿರಿ; ಹಣವಿಲ್ಲದೇ ನೀವು ವಿಮೋಚಿಸಲ್ಪಡುವಿರಿ.
4 For thus says the Lord Yahweh, My people went down at the first into Egypt to sojourn there: and the Assyrian has oppressed them without cause.ಕರ್ತನಾದ ದೇವರು ಹೀಗ ನ್ನುತ್ತಾನೆ, ನನ್ನ ಜನರು ಪೂರ್ವದಲ್ಲಿ ಇಳುಕೊಳ್ಳುವ ದಕ್ಕೆ ಐಗುಪ್ತಕ್ಕೆ ಹೋದರು; ಅಶ್ಶೂರಿನವರು ಕಾರಣ ವಿಲ್ಲದೆ ಅವರನ್ನು ಹಿಂಸಿಸಿದರು.
5 Now therefore, what do I here, says Yahweh, seeing that my people is taken away for nothing? those who rule over them do howl, says Yahweh, and my name continually all the day is blasphemed.ಹಾಗಾದರೆ ಈಗ ಕರ್ತನು ಹೇಳುವದೇನಂದರೆ ನನಗೆ ಇಲ್ಲಿ ಏನಿದೆ? ನನ್ನ ಜನರು ಏನೂ ಇಲ್ಲದೆ ಒಯ್ಯಲ್ಪಟ್ಟಿದ್ದಾರಲ್ಲಾ; ಆಳುವವರು ಅವರನ್ನು ಗೋಳಾಡಿಸುತ್ತಾರಲ್ಲಾ ಮತ್ತು ನನ್ನ ಹೆಸರು ಪ್ರತಿದಿನವೂ ಎಡೆಬಿಡದೇ ದೂಷಣೆಗೆ ಗುರಿಯಾಗಿದೆ ಎಂದು ಕರ್ತನು ಹೇಳುತ್ತಾನೆ.
6 Therefore my people shall know my name: therefore [they shall know] in that day that I am he who does speak; behold, it is I.ಆದದರಿಂದ ನನ್ನ ಜನರು ನನ್ನ ಹೆಸರನ್ನು ತಿಳಿದುಕೊಳ್ಳುವರು; ಹೀಗೆ ಆ ದಿನದಲ್ಲಿ ಮಾತನಾಡಿದಾತನು ನಾನೇ, ಇಗೋ, ಅದು ನಾನೇ ಎಂದು ಅವರು ಗ್ರಹಿಸುವರು.
7 How beautiful on the mountains are the feet of him who brings good news, who publishes peace, who brings good news of good, who publishes salvation, who says to Zion, Your God reigns!ಒಳ್ಳೆಯ ಶುಭಸಮಾಚಾರವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ, ಚೀಯೋನಿಗೆ ನಿನ್ನ ದೇವರು ದೊರೆತನ ಮಾಡುತ್ತಾನೆ ಎಂದು ಹೇಳಿ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಪ್ರಕಟಿಸಿ ಹೇಳುವಾತನ ಪಾದಗಳು ಪರ್ವತಗಳ ಮೇಲೆ ಎಷ್ಟೋ ಅಂದವಾಗಿವೆ!
8 The voice of your watchmen! they lift up the voice, together do they sing; for they shall see eye to eye, when Yahweh returns to Zion.ನಿನ್ನ ಕಾವಲುಗಾರರು ಸ್ವರವನ್ನೆತ್ತುವರು; ಆ ಸ್ವರದೊಂದಿಗೆ ಒಟ್ಟಾಗಿ ಅವರು ಹಾಡುವರು; ಕರ್ತನು ಚೀಯೋನನ್ನು ತಿರಿಗಿ ತರು ವಾಗ ಅವರು ಕಣ್ಣಲ್ಲಿ ಕಣ್ಣು ಇಟ್ಟು ನೋಡುವರು.
9 Break forth into joy, sing together, you waste places of Jerusalem; for Yahweh has comforted his people, he has redeemed Jerusalem.ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
10 Yahweh has made bare his holy arm in the eyes of all the nations; and all the ends of the earth have seen the salvation of our God.ಕರ್ತನು ತನ್ನ ಪರಿ ಶುದ್ಧವಾದ ಬಾಹುವನ್ನು ಸಕಲ ಜನಾಂಗಗಳ ಕಣ್ಣು ಗಳಿಗೆ ತೋರಮಾಡಿದ್ದಾನೆ. ಭೂಮಿಯ ಅಂತ್ಯದವ ರೆಲ್ಲಾ ನಮ್ಮ ದೇವರ ರಕ್ಷಣೆಯನ್ನು ನೋಡುವರು.
11 Depart you, depart you, go you out from there, touch no unclean thing; go you out of the midst of her; cleanse yourselves, you who bear the vessels of Yahweh.ಹೊರಡಿರಿ, ಹೊರಡಿರಿ, ಅಲ್ಲಿಂದ ಹೊರಗೆ ಹೋಗಿರಿ, ಅಶುದ್ಧವಾದದ್ದನ್ನು ಮುಟ್ಟಬೇಡಿರಿ; ಅವಳ ಮಧ್ಯದಿಂದ ಹೊರಗೆ ಹೋಗಿರಿ; ಕರ್ತನ ಪಾತ್ರೆಗ ಳನ್ನು ಹೊರುವವರೇ, ನೀವು ಶುದ್ಧರಾಗಿರ್ರಿ.
12 For you shall not go out in haste, neither shall you go by flight: for Yahweh will go before you; and the God of Israel will be your rearward.ನೀವು ತ್ವರೆಯಾಗಿ ಹೋಗುವದಿಲ್ಲ; ಇಲ್ಲವೆ ಹಾರುವದ ರಿಂದಲೂ ಹೋಗುವದಿಲ್ಲ; ಯಾಕಂದರೆ ಕರ್ತನೇ ನಿಮ್ಮ ಮುಂದೆ ಹೋಗುವನು; ಇಸ್ರಾಯೇಲಿನ ದೇವರು ನಿಮ್ಮ ಬಹುಮಾನವಾಗಿರುವನು.
13 Behold, my servant shall deal wisely, he shall be exalted and lifted up, and shall be very high.ಇಗೋ, ನನ್ನ ಸೇವಕನು ವಿವೇಕಿಯಾಗಿಕಾರ್ಯ ವನ್ನು ಸಾಧಿಸಿ ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತನಾಗಿರುವನು.
14 Like as many were astonished at you (his visage was so marred more than any man, and his form more than the sons of men),ಅವನ ಮುಖವು ಮನುಷ್ಯರಿಗಿಂತಲೂ ಅವನ ಆಕಾರವು ನರಪುತ್ರರಿ ಗಿಂತಲೂ ಕುರೂಪವಾಗಿರುವದನ್ನು ನೋಡಿ ಹೇಗೆ ಆಶ್ಚರ್ಯಪಟ್ಟರೋ
15 so shall he sprinkle many nations; kings shall shut their mouths at him: for that which had not been told them shall they see; and that which they had not heard shall they understand.ಹಾಗೆಯೇ ಅನೇಕ ಜನಾಂಗ ಗಳನ್ನು ಆತನು ಚಮಕಿತ ಮಾಡುವನು; ಅರಸರು ಆತನ ನಿಮಿತ್ತ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳು ವರು; ಯಾಕಂದರೆ ಅವರಿಗೆ ತಿಳಿಸಲ್ಪಡದೇ ಇರುವ ದನ್ನು ಅವರು ನೋಡುವರು; ಕೇಳದೇ ಇರುವದನ್ನು ಗ್ರಹಿಸುವರು.
Kannada Bible