Genesis 49 - WEB (Kannada)
1 Jacob called to his sons, and said: "Gather yourselves together, that I may tell you that which will happen to you in the days to come.ಆಗ ಯಾಕೋಬನು ತನ್ನ ಕುಮಾರರನ್ನು ಕರೆಯಿಸಿ ಅವರಿಗೆ ನೀವೆಲ್ಲರೂ ಕೂಡಿ ಕೊಳ್ಳಿರಿ, ಅಂತ್ಯದಿನಗಳಲ್ಲಿ ಸಂಭವಿಸುವದನ್ನು ನಿಮಗೆ ತಿಳಿಸುತ್ತೇನೆ.
2 Assemble yourselves, and hear, you sons of Jacob; Listen to Israel, your father.ಯಾಕೋಬನ ಕುಮಾರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ; ನಿಮ್ಮ ತಂದೆಯಾದ ಇಸ್ರಾ ಯೇಲನಿಗೆ ಕಿವಿಗೊಡಿರಿ.
3 "Reuben, you are my firstborn, my might, and the beginning of my strength; The pre-eminence of dignity, and the pre-eminence of power.ರೂಬೇನನೇ, ನೀನು ನನ್ನ ಚೊಚ್ಚಲ ಮಗನು, ನನ್ನ ಶಕ್ತಿಯೂ ನನ್ನ ಬಲದ ಆರಂಭವೂ ಔನ್ಯತ್ಯಾತಿ ಶಯವೂ ಬಲಾತಿಶಯವೂ ನೀನೇ.
4 Boiling over as water, you shall not have the pre-eminence; Because you went up to your father's bed; Then defiled it. He went up to my couch.ನೀರಿ ನಂತೆ ಚಂಚಲನಾಗಿದ್ದು ನೀನು ಶ್ರೇಷ್ಠನಾಗುವದಿಲ್ಲ. ಯಾಕಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆ ಮಾಡಿದಿ; ನನ್ನ ಹಾಸಿಗೆಯನ್ನು ಏರಿದಿ;
5 "Simeon and Levi are brothers; Weapons of violence are their swords.ಸಿಮೆಯೋ ನನೂ ಲೇವಿಯೂ ಸಹೋದರರು; ಕ್ರೂರತ್ವದ ಆಯುಧಗಳು ಅವರ ನಿವಾಸಗಳಲ್ಲಿ ಇವೆ.
6 My soul, don't come into their council; My glory, don't be united to their assembly; For in their anger they killed a man, In their self-will they hamstrung an ox.ನನ್ನ ಪ್ರಾಣವೇ, ಅವರ ರಹಸ್ಯವಾದ ಸಭೆಯಲ್ಲಿ ಸೇರಬೇಡ.ನನ್ನ ಘನವೇ, ಅವರೊಂದಿಗೆ ಬೆರಿಕೆಯಾಗಬೇಡ; ಅವರು ತಮ್ಮ ಕೋಪದಲ್ಲಿ ಮನುಷ್ಯನನ್ನು ಕೊಂದರು. ಅವರು ಸ್ವಇಚ್ಛೆಯಿಂದ ಗೋಡೆಯನ್ನು ಕೆಡವಿಹಾಕಿ ದರು.
7 Cursed be their anger, for it was fierce; And their wrath, for it was cruel. I will divide them in Jacob, Scatter them in Israel.ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅವು ಶಪಿಸಲ್ಪಡುವವು. ಯಾಕೋಬಿನಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು.
8 "Judah, your brothers will praise you: Your hand will be on the neck of your enemies; Your father's sons will bow down before you.ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳು ವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು, ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡ ಬೀಳುವರು.
9 Judah is a lion's cub. From the prey, my son, you have gone up. He stooped down, he crouched as a lion, As a lioness. Who will rouse him up?ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು?
10 The scepter will not depart from Judah, Nor the ruler's staff from between his feet, Until he comes to whom it belongs. To him will the obedience of the peoples be.ಶಿಲೋಹವು ಬರುವ ವರೆಗೆ ರಾಜದಂಡವು ಯೆಹೂದನಿಂದಲೂ ಮುದ್ರೆಯ ಕೋಲು ಅವನ ಪಾದಗಳ ಬಳಿಯಿಂದಲೂ ಕದಲು ವದಿಲ್ಲ. ಜನರು ಅವನ ಬಳಿಗೆ ಕೂಡಿಕೊಳ್ಳುವರು.
11 Binding his foal to the vine, His donkey's colt to the choice vine; He has washed his garments in wine, His robes in the blood of grapes:ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಯನ್ನೂ ಶ್ರೇಷ್ಠ ದ್ರಾಕ್ಷೇಗಿಡಕ್ಕೆ ತನ್ನ ಕತ್ತೆಮರಿಯನ್ನೂ ಕಟ್ಟುತ್ತಾನೆ. ದ್ರಾಕ್ಷಾರಸದಲ್ಲಿ ತನ್ನ ವಸ್ತ್ರಗಳನ್ನೂ ದ್ರಾಕ್ಷೇ ಹಣ್ಣುಗಳ ರಕ್ತದಲ್ಲಿ ತನ್ನ ಬಟ್ಟೆಗಳನ್ನೂ ತೊಳೆಯುತ್ತಾನೆ.
12 His eyes will be red with wine, His teeth white with milk.ದ್ರಾಕ್ಷಾರಸ ದಿಂದ ಅವನ ಕಣ್ಣುಗಳು ಕೆಂಪಾಗಿರುವವವು; ಹಾಲಿ ನಿಂದ ಅವನ ಹಲ್ಲುಗಳು ಬಿಳುಪಾಗಿರುವವು.
13 "Zebulun will dwell at the haven of the sea. He will be for a haven of ships. His border will be on Sidon.ಜೆಬೂಲೂನನು ಸಮುದ್ರದ ರೇವಿನಲ್ಲಿ ವಾಸಿಸು ವನು; ಅವನು ಹಡಗುಗಳ ರೇವೂ ಆಗಿರುವನು. ಅವನ ಮೇರೆಯು ಚೀದೋನಿಗೆ ಮುಟ್ಟುವದು.
14 "Issachar is a strong donkey, Lying down between the saddlebags.ಇಸ್ಸಾಕಾರನು ಎರಡು ಭಾರಗಳ ನಡುವೆ ಮಲಗಿ ಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ.
15 He saw a resting-place, that it was good, The land, that it was pleasant; He bows his shoulder to the burden, And becomes a servant doing forced labor.ವಿಶ್ರಾಂತಿಯು ಒಳ್ಳೇದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆಹೊರುವದಕ್ಕೆ ತನ್ನ ಹೆಗಲನ್ನು ಬೊಗ್ಗಿಸಿ ಬಿಟ್ಟಿಯ ಸೇವೆಮಾಡುವನು.
16 "Dan will judge his people, As one of the tribes of Israel.ದಾನನು ಇಸ್ರಾಯೇ ಲನ ಗೋತ್ರಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು.
17 Dan will be a serpent in the way, An adder in the path, That bites the horse's heels, So that his rider falls backward.ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ ಹತ್ತಿದವನು ಬೋರಲು ಬೀಳುವನು.
18 I have waited for your salvation, Yahweh.ಓ ಕರ್ತನೇ, ನಿನ್ನ ರಕ್ಷಣೆಗಾಗಿ ನಾನು ಕಾದಿದ್ದೇನೆ.
19 "Gad, a troop will press on him; But he will press on their heel.ಸೈನ್ಯದ ಗುಂಪು ಗಾದನ ಮೇಲೆ ಬರುವದು, ಆದರೆ ಕೊನೆಗೆ ಅವನು ಜಯಿಸುವನು.
20 Out of Asher his bread will be fat, He will yield royal dainties.ಆಶೇರನಿಂದ ಕೊಬ್ಬಿದ ಆಹಾರವು ಬರುವದು. ಅವನು ಅರಸರ ಸವಿಯೂಟ ವನ್ನು ಕೊಡುವನು.
21 "Naphtali is a doe set free, Who bears beautiful fawns.ನಫ್ತಾಲಿ ಬಿಡಲ್ಪಟ್ಟ ಜಿಂಕೆ, ಅವನು ಮೆಚ್ಚಿಗೆಯ ಮಾತುಗಳನ್ನಾಡುತ್ತಾನೆ.
22 "Joseph is a fruitful vine, A fruitful vine by a spring; His branches run over the wall.ಯೋಸೇಫನು ಫಲಭರಿತವಾದ ಕೊಂಬೆ. ಬಾವಿಯ ಬಳಿಯಲ್ಲಿರುವ ಫಲಭರಿತವಾದ ಕೊಂಬೆ. ಅದರ ಕವಲುಗಳು ಗೋಡೆಯನ್ನು ದಾಟುತ್ತವೆ.
23 The archers have sorely grieved him, Shot at him, and persecute him:ಬಿಲ್ಲುಗಾರರು ಅವನನ್ನು ಬಹಳವಾಗಿ ದುಃಖ ಪಡಿಸಿ ಬಾಣಗಳನ್ನು ಎಸೆದು ಅವನನ್ನು ಹಗೆ ಮಾಡುವರು.
24 But his bow abode in strength, The arms of his hands were made strong, By the hands of the Mighty One of Jacob, (From there is the shepherd, the stone of Israel),ಆದರೆ ಅವನ ಬಿಲ್ಲು ಬಲವಾಗಿ ನೆಲೆಸಿತ್ತು. ಅವನ ಕೈತೋಳುಗಳು ಯಾಕೋಬನ ಪರಾಕ್ರಮಿಯಾದ ದೇವರ ಕೈಗಳಿಂದ,
25 Even by the God of your father, who will help you, By the Almighty, who will bless you, With blessings of heaven above, Blessings of the deep that lies below, Blessings of the breasts, and of the womb.ಅಂದರೆ ನಿನಗೆ ಸಹಾಯಮಾಡುವ ನಿನ್ನ ತಂದೆಯ ದೇವರಿಂದ, ಮೇಲಿರುವ ಪರಲೋಕದ ಆಶೀರ್ವಾದಗಳೊಂದಿಗೂ ಕೆಳಗಿರುವ ಅಗಾಧದ ಆಶೀರ್ವಾದಗಳೊಂದಿಗೂ ಮೊಲೆಗಳ ಮತ್ತು ಗರ್ಭದ ಆಶೀರ್ವಾದಗಳೊಂದಿಗೂ ನಿನ್ನನ್ನು ಆಶೀರ್ವದಿಸುವ ಸರ್ವಶಕ್ತನಿಂದ ಬಲಿಷ್ಠನಾಗಿ ಮಾಡಲ್ಪಟ್ಟಿವೆ. (ಅಲ್ಲಿಂದ ಆತನು ಇಸ್ರಾಯೇಲನ ಕುರುಬನೂ ಬಂಡೆಯೂ ಆಗಿದ್ದಾನೆ.)
26 The blessings of your father Have prevailed above the blessings of the ancient mountains, Above the bounty of the age-old hills. They will be on the head of Joseph, On the crown of the head of him who is separated from his brothers.ನಿನ್ನ ತಂದೆಯ ಆಶೀರ್ವಾದಗಳು ನನ್ನ ಹೆತ್ತವರ ಆಶೀರ್ವಾದಗಳನ್ನು ನಿತ್ಯ ಗುಡ್ಡಗಳ ಮೇರೆಗಿಂತ ವಿಾರಿವೆ. ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕ ಮಾಡಲ್ಪಟ್ಟವನ ತಲೆಯ ಮೇಲೆಯೂ ಅವು ಬರಲಿ.
27 "Benjamin is a ravenous wolf. In the morning he will devour the prey. At evening he will divide the spoil."ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು.
28 All these are the twelve tribes of Israel, and this is what their father spoke to them and blessed them. He blessed everyone according to his blessing.ಇವರೆಲ್ಲಾ ಇಸ್ರಾಯೇಲನ ಹನ್ನೆರಡು ಗೋತ್ರ ಗಳು; ಅವರ ತಂದೆ ಅವರಿಗೆ ಹೇಳಿದ್ದು ಇದೇ. ಅವನು ಒಬ್ಬೊಬ್ಬನನ್ನು ಅವನವನ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.
29 He charged them, and said to them, "I am to be gathered to my people. Bury me with my fathers in the cave that is in the field of Ephron the Hittite,ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ--ನಾನು ನನ್ನ ಜನರೊಂದಿಗೆ ಕೂಡಿಸಲ್ಪ ಡುತ್ತೇನೆ. ನನ್ನ ತಂದೆಗಳ ಸಂಗಡ ಹಿತ್ತಿಯನಾದ ಎಫ್ರೋನಿನ ಹೊಲದಲ್ಲಿರುವ ಗವಿಯಲ್ಲಿ
30 in the cave that is in the field of Machpelah, which is before Mamre, in the land of Canaan, which Abraham bought with the field from Ephron the Hittite as a burial place.ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲ ದಲ್ಲಿರುವಂಥ, ಅಬ್ರಹಾಮನು ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಣಿಡಿರಿ.
31 There they buried Abraham and Sarah, his wife. There they buried Isaac and Rebekah, his wife, and there I buried Leah:ಅಲ್ಲಿ ಅಬ್ರಹಾಮನನ್ನೂ ಅವನ ಹೆಂಡತಿಯಾದ ಸಾರಳನ್ನೂ ಹೂಣಿಟ್ಟರು. ಅಲ್ಲಿ ಇಸಾಕನನ್ನೂ ಅವನ ಹೆಂಡತಿಯಾದ ರೆಬೆಕ್ಕಳನ್ನೂ ಹೂಣಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು.
32 the field and the cave that is therein, which was purchased from the children of Heth."ಆ ಹೊಲವೂ ಅದರಲ್ಲಿರುವ ಗವಿಯೂ ಹೇತನ ಮಕ್ಕಳಿಂದ ಕೊಂಡುಕೊಂಡದ್ದು ಅಂದನು.
33 When Jacob made an end of charging his sons, he gathered up his feet into the bed, and yielded up the spirit, and was gathered to his people.ಯಾಕೋ ಬನು ತನ್ನ ಕುಮಾರರಿಗೆ ಆಜ್ಞಾಪಿಸಿ ಮುಗಿಸಿದ ಮೇಲೆ ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು.
Kannada Bible