Genesis 10 - WEB (Kannada)

1 Now this is the history of the generations of the sons of Noah and of Shem, Ham, and Japheth. Sons were born to them after the flood.ನೋಹನ ಕುಮಾರರಾದ ಶೇಮ್‌ ಹಾಮ್‌ ಯೆಫೆತರ ವಂಶಾವಳಿಗಳು ಇವೇ. ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.

2 The sons of Japheth: Gomer, Magog, Madai, Javan, Tubal, Meshech, and Tiras.ಯೆಫೆತನ ಕುಮಾರರು ಯಾರಂದರೆ, ಗೋಮೆರ್‌ ಮಾಗೋಗ್‌ ಮಾದಯ್‌ ಯಾವಾನ್‌ ತೂಬಲ್‌ ಮೇಷೆಕ್‌ ತೀರಾಸ್‌ ಎಂಬವರು.

3 The sons of Gomer: Ashkenaz, Riphath, and Togarmah.ಗೋಮೆರನ ಕುಮಾರರು ಯಾರಂದರೆ, ಅಷ್ಕೆನಸ್‌ ರೀಫತ್‌ ತೋಗರ್ಮ ಎಂಬವರು.

4 The sons of Javan: Elishah, Tarshish, Kittim, and Dodanim.ಯಾವಾನನ ಕುಮಾರರು ಯಾರಂದರೆ, ಎಲೀಷಾ ತಾರ್ಷೀಷ್‌ ಕಿತ್ತೀಮ್‌ ದೋದಾನಿಮ್‌ ಇವರೇ.

5 Of these were the isles of the nations divided in their lands, everyone after his language, after their families, in their nations.ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು.

6 The sons of Ham: Cush, Mizraim, Put, and Canaan.ಹಾಮನ ಕುಮಾರರು ಯಾರಂದರೆ, ಕೂಷ್‌ ಮಿಚ್ರಯಿಮ್‌ ಪೂತ್‌ ಕಾನಾನ್‌ ಎಂಬವರು.

7 The sons of Cush: Seba, Havilah, Sabtah, Raamah, and Sabteca. The sons of Raamah: Sheba and Dedan.ಕೂಷನ ಕುಮಾರರು ಯಾರಂದರೆ, ಸೆಬಾ ಹವೀಲ ಸಬ್ತಾ ರಗ್ಮ ಸಬ್ತಕಾ ಎಂಬವರು. ರಗ್ಮನ ಕುಮಾರರು ಯಾರಂದರೆ, ಶೆಬಾ ದೆದಾನ್‌ ಎಂಬವರು.

8 Cush became the father of Nimrod: he began to be a mighty one in the earth.ಕೂಷನಿಂದ ನಿಮ್ರೋದನು ಹುಟ್ಟಿದನು. ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು.

9 He was a mighty hunter before Yahweh. Therefore it is said, "Like Nimrod, a mighty hunter before Yahweh."ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು. ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು.

10 The beginning of his kingdom was Babel, Erech, Accad, and Calneh, in the land of Shinar.ಶಿನಾರ್‌ ದೇಶದಲ್ಲಿರುವ ಬಾಬೆಲ್‌ ಯೆರೆಕ್‌ ಅಕ್ಕದ್‌ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು.

11 Out of that land he went forth into Assyria, and built Nineveh, Rehoboth Ir, Calah,ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್‌ ಎಂಬ ಪಟ್ಟಣ, ಕೆಲಹ,

12 and Resen between Nineveh and Calah (the same is the great city).ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್‌ನನ್ನು ಕಟ್ಟಿದನು.

13 Mizraim became the father of Ludim, Anamim, Lehabim, Naphtuhim,ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ

14 Pathrusim, Casluhim (which the Philistines descended from), and Caphtorim.ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು.

15 Canaan became the father of Sidon (his firstborn), Heth,ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ

16 the Jebusite, the Amorite, the Girgashite,ಯೆಬೂಸಿಯನೂ ಅಮೋರಿಯನೂ ಗಿರ್ಗಾಷಿಯನೂ

17 the Hivite, the Arkite, the Sinite,ಹಿವ್ವಿಯನೂ ಅರ್ಕಿಯನೂ ಸೀನಿಯನೂ

18 the Arvadite, the Zemarite, and the Hamathite. Afterward the families of the Canaanites were spread abroad.ಅರ್ವಾದಿಯನೂ ಚೆಮಾರಿಯನೂ ಹಮಾತಿಯನೂ ಹುಟ್ಟಿದರು. ತರುವಾಯ ಕಾನಾನ್‌ ಕುಟುಂಬಗಳು ವಿಸ್ತಾರವಾಗಿ ಹರಡಿದವು.

19 The border of the Canaanites was from Sidon, as you go toward Gerar, to Gaza; as you go toward Sodom, Gomorrah, Admah, and Zeboiim, to Lasha.ಕಾನಾನ್ಯರ ಮೇರೆಯು ಸೀದೋನಿ ನಿಂದ ಗೆರಾರಿನ ಮಾರ್ಗವಾಗಿ ಗಾಜಾದ ವರೆಗೆ ಸೊದೋಮ್‌ ಗೊಮೋರ ಅದ್ಮಾ ಚೆಬೋಯಿಮ್‌ ಮಾರ್ಗವಾಗಿ ಲೆಷಾದ ವರೆಗೂ ಇರುತ್ತದೆ.

20 These are the sons of Ham, after their families, after their languages, in their lands, in their nations.ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು.

21 To Shem, the father of all the children of Eber, the elder brother of Japheth, to him also were children born.ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು.

22 The sons of Shem: Elam, Asshur, Arpachshad, Lud, and Aram.ಶೇಮನ ಮಕ್ಕಳು ಯಾರಂದರೆ, ಏಲಾಮ್‌ ಅಶ್ಶೂರ್‌ ಅರ್ಪಕ್ಷದ್‌ ಲೂದ್‌ ಅರಾಮ್‌.

23 The sons of Aram: Uz, Hul, Gether, and Mash.ಅರಾಮನ ಮಕ್ಕಳು ಯಾರಂದರೆ, ಊಸ್‌ ಹೂಲ್‌ ಗೆತೆರ್‌ ಮಷ್‌ ಇವರೇ.

24 Arpachshad became the father of Shelah. Shelah became the father of Eber.ಅರ್ಪಕ್ಷದನಿಂದ ಶೆಲಹನು ಹುಟ್ಟಿದನು. ಶೆಲಹ ನಿಂದ ಎಬರನು ಹುಟ್ಟಿದನು.

25 To Eber were born two sons. The name of the one was Peleg, for in his days was the earth divided. His brother's name was Joktan.ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನ ಹೆಸರು ಪೆಲೆಗನು, ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು. ಅವನ ಸಹೋದರನ ಹೆಸರು ಯೊಕ್ತಾನ್‌.

26 Joktan became the father of Almodad, Sheleph, Hazarmaveth, Jerah,ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ

27 Hadoram, Uzal, Diklah,ಹದೋರಾಮನೂ ಊಜಾಲನೂ ದಿಕ್ಲಾನನೂ

28 Obal, Abimael, Sheba,ಓಬಾಲನೂ ಅಬೀಮಯೇಲನೂ ಶೆಬನೂ

29 Ophir, Havilah, and Jobab. All these were the sons of Joktan.ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಕುಮಾರರು.

30 Their dwelling was from Mesha, as you go toward Sephar, the mountain of the east.ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು.

31 These are the sons of Shem, after their families, after their languages, in their lands, after their nations.ಇವರೇ ತಮ್ಮ ಕುಟುಂಬಗಳ ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿ ತಮ್ಮ ಜನಾಂಗಗಳ ಪ್ರಕಾರ ಶೇಮನ ಕುಮಾರರು.

32 These are the families of the sons of Noah, after their generations, in their nations. Of these were the nations divided in the earth after the flood.ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ. ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು.

Kannada Bible