Acts 13 - DBY (Kannada)
1 Now there were in Antioch, in the assembly which was [there], prophets and teachers: Barnabas, and Simeon who was called Niger, and Lucius the Cyrenian, and Manaen, foster-brother of Herod the tetrarch, and Saul.ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಕೆಲವರು ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರೆಂದರೆ, ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಚತುರಾಧಿ ಪತಿಯಾದ ಹೆರೋದನೊಂದಿಗೆ ಬೆಳೆದ ಮೆನಹೇನ ಮತ್ತು ಸೌಲ ಇವರೇ.
2 And as they were ministering to the Lord and fasting, the Holy Spirit said, Separate me now Barnabas and Saul for the work to which I have called them.ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿ ತ್ರಾತ್ಮನು--ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕೆ ನನಗಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು.
3 Then, having fasted and prayed, and having laid [their] hands on them, they let [them] go.ಆಗ ಅವರು ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರ ಮೇಲೆ ಕೈಗಳನ್ನಿಟ್ಟು ಅವರನ್ನು ಕಳುಹಿಸಿ ಕೊಟ್ಟರು.
4 They therefore, having been sent forth by the Holy Spirit, went down to Seleucia, and thence sailed away to Cyprus.ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವ ರಾಗಿ ಸೆಲ್ಯೂಕ್ಯಕ್ಕೆ ಹೊರಟುಹೋದರು. ಅಲ್ಲಿಂದ ಸಮುದ್ರ ಪ್ರಯಾಣವಾಗಿ ಕುಪ್ರಕ್ಕೆ ಹೋದರು.
5 And being in Salamis, they announced the word of God in the synagogues of the Jews. And they had John also as [their] attendant.ಅವರು ಸಲವಿಾಸಿನಲ್ಲಿದ್ದಾಗ ಯೆಹೂದ್ಯರ ಸಭಾ ಮಂದಿರಗಳಲ್ಲಿ ದೇವರವಾಕ್ಯವನ್ನು ಸಾರಿದರು. ಯೋಹಾನನು ಸಹ ಪರಿಚಾರಕನಾಗಿ ಅವರ ಸಂಗಡ ಇದ್ದನು.
6 And having passed through the whole island as far as Paphos, they found a certain man a magician, a false prophet, a Jew, whose name was Bar-jesus,ಅವರು ದ್ವೀಪದ ಮಾರ್ಗವಾಗಿ ಪಾಫೋಸಿಗೆ ಬಂದು ಅಲ್ಲಿ ಒಬ್ಬ ಸುಳ್ಳು ಪ್ರವಾದಿಯೂ ಮಂತ್ರವಾದಿಯೂ ಆಗಿದ್ದ ಬಾರ್‌ಯೇಸು ಎಂಬ ಒಬ್ಬ ಯೆಹೂದ್ಯನನ್ನು ಕಂಡರು.
7 who was with the proconsul Sergius Paulus, an intelligent man. *He*, having called Barnabas and Saul to [him], desired to hear the word of God.ಅವನು ಬುದ್ಧಿವಂತನಾಗಿದ್ದ ಸೆರ್ಗ್ಯ ಪೌಲನೆಂಬ ಅಧಿಪತಿಯ ಸಂಗಡ ಇದ್ದನು. ಅಧಿಪತಿಯು ಬಾರ್ನಬ ಸೌಲರನ್ನು ಕರೆಯಿಸಿ ದೇವರ ವಾಕ್ಯವನ್ನು ಕೇಳುವದಕ್ಕೆ ಅಪೇಕ್ಷಿಸಿದನು.
8 But Elymas the magician (for so his name is by interpretation) opposed them, seeking to turn away the proconsul from the faith.ಆದರೆ ಆ ಮಂತ್ರವಾದಿಯಾದ ಎಲುಮನು ಅವರಿಗೆ ಎದುರು ನಿಂತು ಅಧಿಪತಿಯನ್ನು ನಂಬಿಕೆಯಿಂದ ತಿರುಗಿಸು ವದಕ್ಕೆ ಪ್ರಯತ್ನಿಸಿದನು. (ಎಲುಮನೆಂಬ ಹೆಸರಿಗೆ ಮಂತ್ರವಾದಿ ಎಂಬದು ಅರ್ಥ).
9 But Saul, who also [is] Paul, filled with [the] Holy Spirit, fixing his eyes upon him,ಆಗ ಸೌಲನು (ಇವನು ಪೌಲನೆಂಬದಾಗಿಯೂ ಕರೆಯಲ್ಪಟ್ಟವನು) ಪವಿತ್ರಾತ್ಮಭರಿತನಾಗಿ ಅವನನ್ನು ದೃಷ್ಟಿಸಿ ನೋಡಿ--
10 said, O full of all deceit and all craft: son of [the] devil, enemy of all righteousness; wilt thou not cease perverting the right paths of [the] Lord?ಎಲ್ಲಾ ಮೋಸದಿಂದಲೂ ಎಲ್ಲಾ ಕೆಟ್ಟತನ ದಿಂದಲೂ ತುಂಬಿರುವವನೇ, ಸೈತಾನನ ಮಗನೇ, ಎಲ್ಲಾ ನೀತಿಗೂ ವಿರೋಧಿಯೇ, ನೀನು ಕರ್ತನ ನೀಟಾದ ಮಾರ್ಗಗಳನ್ನು ಡೊಂಕು ಮಾಡುವದನ್ನು ಬಿಡುವದಿಲ್ಲವೋ?
11 And now behold, [the] Lord's hand [is] upon thee, and thou shalt be blind, not seeing the sun for a season. And immediately there fell upon him a mist and darkness; and going about he sought persons who should lead him by the hand.ಇಗೋ, ಕರ್ತನು ನಿನ್ನ ಮೇಲೆ ಕೈ ಎತ್ತಿದ್ದಾನೆ; ನೀನು ಕುರುಡನಾಗಿ ಕೆಲವು ಕಾಲ ಸೂರ್ಯನನ್ನು ಕಾಣದೆ ಇರುವಿ ಎಂದು ಹೇಳಿದನು. ಆ ಕ್ಷಣವೇ ಅವನಿಗೆ ಮೊಬ್ಬಾಗಿ ಕತ್ತಲೆ ಉಂಟಾಯಿತು; ಅವನು ಕೈ ಹಿಡಿದು ನಡಿಸುವವರನ್ನು ಹುಡುಕುತ್ತಾ ತಿರುಗಾಡಿದನು.
12 Then the proconsul, seeing what had happened, believed, being amazed at the teaching of the Lord.ಆಗ ಅಧಿಪತಿಯು ನಡೆದದ್ದನ್ನು ನೋಡಿ ಕರ್ತನ ಬೋಧನೆಗೆ ಅತ್ಯಾಶ್ಚರ್ಯಪಟ್ಟು ನಂಬಿದನು.
13 And having sailed from Paphos, Paul and his company came to Perga of Pamphylia; and John separated from them and returned to Jerusalem.ತರುವಾಯ ಪೌಲನೂ ಅವನ ಜೊತೆ ಯಲ್ಲಿದ್ದವರೂ ಪಾಫೋಸನ್ನು ಬಿಟ್ಟು ಪಂಪುಲ್ಯದಲ್ಲಿದ್ದ ಪೆರ್ಗೆಗೆ ಬಂದರು; ಯೋಹಾನನು ಅವರನ್ನು ಬಿಟ್ಟು ಹಿಂತಿರುಗಿ ಯೆರೂಸಲೇಮಿಗೆ ಹೋದನು;
14 But they, passing through from Perga, came to Antioch of Pisidia; and entering into the synagogue on the sabbath day they sat down.ಆಮೇಲೆ ಅವರು ಪೆರ್ಗೆಯಿಂದ ಹೊರಟು ಪಿಸಿದ್ಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್‌ದಿನದಲ್ಲಿ ಅವರು ಸಭಾಮಂದಿರಕ್ಕೆ ಹೋಗಿ ಕೂತುಕೊಂಡರು.
15 And after the reading of the law and the prophets, the rulers of the synagogue sent to them, saying, Brethren, if ye have any word of exhortation to the people, speak.ನ್ಯಾಯಪ್ರಮಾಣ ಮತ್ತು ಪ್ರವಾದಿಗಳಗ್ರಂಥವು ಪಾರಾಯಣವಾದ ಮೇಲೆ ಸಭಾಮಂದಿರದ ಅಧಿಕಾರಿ ಗಳು--ಜನರೇ, ಸಹೋದರರೇ, ಜನರಿಗೆ ಹೇಳತಕ್ಕ ಬುದ್ಧಿಮಾತೇನಾದರೂ ನಿಮಗಿದ್ದರೆ ಹೇಳಿರಿ ಎಂದು ಅವರಿಗೆ ಹೇಳಿ ಕಳುಹಿಸಿದರು.
16 And Paul, rising up and making a sign with the hand, said, Israelites, and ye that fear God, hearken.ಆಗ ಪೌಲನು ಎದ್ದು ಕೈಸನ್ನೆಮಾಡಿ ಹೇಳಿದ್ದೇನಂದರೆ--ಇಸ್ರಾಯೇಲ್ ಜನರೇ, ದೇವರಿಗೆ ಭಯಪಡುವವರೇ, ಕೇಳಿರಿ.
17 The God of this people Israel chose our fathers, and exalted the people in their sojourn in [the] land of Egypt, and with a high arm brought them out of it,ಈ ಇಸ್ರಾಯೇಲ್ ಜನರ ದೇವರು ನಮ್ಮ ಪಿತೃ ಗಳನ್ನು ಆರಿಸಿಕೊಂಡು ಆ ಜನರು ಐಗುಪ್ತದೇಶದಲ್ಲಿ ಪ್ರವಾಸವಾಗಿದ್ದಾಗ ಅವರನ್ನು ವೃದ್ಧಿಗೆ ತಂದು ತನ್ನ ಭುಜಬಲದಿಂದ ಆ ದೇಶದೊಳಗಿಂದ ಬರಮಾಡಿ ದನು.
18 and for a time of about forty years he nursed them in the desert.ಆತನು ಸುಮಾರು ನಾಲ್ವತ್ತು ವರುಷಗಳ ವರೆಗೂ ಅಡವಿಯಲ್ಲಿ ಅವರ ನಡಾವಳಿಯನ್ನು ಸಹಿಸಿ ಕೊಂಡು
19 And having destroyed seven nations in the land of Canaan, he gave them their land as an inheritance.ಕಾನಾನ್ ದೇಶದಲ್ಲಿದ್ದ ಏಳು ಜನಾಂಗ ಗಳನ್ನು ನಿರ್ಮೂಲ ಮಾಡಿದ ಮೇಲೆ ಚೀಟು ಹಾಕಿ ಆ ದೇಶವನ್ನು ಅವರಿಗೆ ಹಂಚಿಕೊಟ್ಟನು.
20 And after these things he gave [them] judges till Samuel the prophet, [to the end of] about four hundred and fifty years.ಇದಾದ ಮೇಲೆ ಪ್ರವಾದಿಯಾದ ಸಮುವೇಲನ ವರೆಗೆ ಸುಮಾರು ನಾನೂರೈವತ್ತು ವರುಷ ಆತನು ಅವರಿಗೆ ನ್ಯಾಯಸ್ಥಾಪಕರನ್ನು ಕೊಟ್ಟನು.
21 And then they asked for a king, and God gave to them Saul, son of Kis, a man of the tribe of Benjamin, during forty years.ತರುವಾಯ ಅವರು ತಮಗೆ ಅರಸನು ಬೇಕೆಂದು ಅಪೇಕ್ಷೆಪಟ್ಟಾಗ ದೇವರು ಅವರಿಗೆ ಬೆನ್ಯಾವಿಾನನ ಗೋತ್ರದ ಕೀಷನ ಮಗನಾದ ಸೌಲನನ್ನು ನಾಲ್ವತ್ತು ವರುಷದ ವರೆಗೆ ಕೊಟ್ಟನು.
22 And having removed him he raised up to them David for king, of whom also bearing witness he said, I have found David, the son of Jesse, a man after my heart, who shall do all my will.ತರುವಾಯ ಆತನು ಅವನನ್ನು ತೆಗೆದು ಹಾಕಿ ದಾವೀದನು ಅವರ ಅರಸನಾಗಿರುವಂತೆ ಎಬ್ಬಿಸಿದನು; ಇದಲ್ಲದೆ ಆತನು ಅವನ ವಿಷಯದಲ್ಲಿ ಸಾಕ್ಷಿ ಕೊಟ್ಟು--ನಾನು ಇಷಯನ ಮಗನಾದ ದಾವೀದನನ್ನು ಕಂಡುಕೊಂಡೆನು, ಅವನು ನನ್ನ ಹೃದಯವು ಒಪ್ಪುವ ಮನುಷ್ಯನು ಮತ್ತು ಅವನು ನನ್ನ ಚಿ
23 Of this man's seed according to promise has God brought to Israel a Saviour, Jesus;ಇವನ ಸಂತಾನದಿಂದ ದೇವರು ತನ್ನ ವಾಗ್ದಾನದ ಪ್ರಕಾರ ಇಸ್ರಾಯೇಲ್ಯರಿಗೆ ಯೇಸು ಎಂಬ ಒಬ್ಬ ರಕ್ಷಕನನ್ನು ಎಬ್ಬಿಸಿದ್ದಾನೆ.
24 John having proclaimed before the face of his entry [among the people] [the] baptism of repentance to all the people of Israel.ಆತನ ಆಗಮನಕ್ಕೆ ಮುಂಚೆ ಯೋಹಾನನು ಮೊದಲು ಇಸ್ರಾಯೇಲ್ ಜನರೆ ಲ್ಲರಿಗೆ ಮಾನಸಾಂತರದ ಬಾಪ್ತಿಸ್ಮವನ್ನು ಸಾರಿದನು.
25 And as John was fulfilling his course he said, Whom do ye suppose that I am? *I* am not [he]. But behold, there comes one after me, the sandal of whose feet I am not worthy to loose.ಯೋಹಾನನು ತನ್ನ ಸೇವೆಯನ್ನು ಪೂರೈಸುತ್ತಿರಿವಾಗ ಜನರಿಗೆ--ನನ್ನನ್ನು ಯಾರೆಂದು ಯೋಚಿಸುತ್ತೀರಿ? ನಾನು ಆತನಲ್ಲ; ಆದರೆ ಇಗೋ, ನನ್ನ ಹಿಂದೆ ಒಬ್ಬಾತನು ಬರುತ್ತಾನೆ, ಆತನ ಪಾದದ ಕೆರಗಳನ್ನು ಬಿಚ್ಚುವದಕ್ಕೆ ನಾನು ಯೋಗ್ಯನಲ್ಲ ಎಂದು ಹೇಳಿದನು.
26 Brethren, sons of Abraham's race, and those who among you fear God, to you has the word of this salvation been sent:ಜನರೇ, ಸಹೋದರರೇ, ಅಬ್ರಹಾಮನ ವಂಶ ಸ್ಥರೇ, ನಿಮ್ಮಲ್ಲಿ ದೇವರಿಗೆ ಭಯಪಡುವವರೇ, ನಿಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಿಯದೆ.
27 for those who dwell in Jerusalem, and their rulers, not having known him, have fulfilled also the voices of the prophets which are read on every sabbath, [by] judging [him].ಯೆರೂ ಸಲೇಮಿನಲ್ಲಿ ವಾಸವಾಗಿರುವವರೂ ಅವರ ಅಧಿಕಾರಿ ಗಳೂ ಆತನನ್ನಾಗಲೀ ಪ್ರತಿ ಸಬ್ಬತ್‌ದಿನದಲ್ಲಿ ಪಾರಾ ಯಣವಾಗುವ ಪ್ರವಾದಿಗಳ ವಾಕ್ಯಗಳನ್ನಾಗಲೀ ಗ್ರಹಿಸದೆ ಆತನನ್ನು ಅಪರಾಧಿಯೆಂದು ತೀರ್ಪುಮಾಡಿ ಆ ವಾಕ್ಯಗಳನ್ನೇ ನೆರವೇರಿಸಿದರು.
28 And having found no cause of death [in him], they begged of Pilate that he might be slain.ಮರಣದಂಡನೆಗೆ ಕಾರಣವೇನೂ ತಮಗೆ ಸಿಕ್ಕದಿದ್ದರೂ ಆತನನ್ನು ಕೊಲ್ಲಿಸಬೇಕೆಂದು ಪಿಲಾತನನ್ನು ಕೇಳಿಕೊಂಡರು.
29 And when they had fulfilled all things written concerning him, they took him down from the cross and put him in a sepulchre;ಆತನ ವಿಷಯವಾಗಿ ಬರೆಯಲ್ಪಟ್ಟದ್ದೆಲ್ಲವನ್ನು ನೆರ ವೇರಿಸಿದ ಮೇಲೆ ಅವರು ಆತನನ್ನು ಮರದಿಂದ ಇಳಿಸಿ ಸಮಾಧಿಯಲ್ಲಿಟ್ಟರು.
30 but God raised him from among [the] dead,ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು.
31 who appeared for many days to those who had come up with him from Galilee to Jerusalem, who are now his witnesses to the people.ಆತನು ಯೆರೂಸಲೇಮಿಗೆ ಗಲಿಲಾಯ ದಿಂದ ತನ್ನ ಜೊತೆಯಲ್ಲಿ ಬಂದವರಿಗೆ ಅನೇಕ ದಿವಸಗಳ ಪರ್ಯಂತರ ಕಾಣಿಸಿಕೊಂಡನು. ಅವರು ಜನರಿಗೆ ಆತನ ಸಾಕ್ಷಿಗಳಾಗಿದ್ದಾರೆ.
32 And *we* declare unto you the glad tidings of the promise made to the fathers,ಪಿತೃಗಳಿಗೆ ವಾಗ್ದಾನ ಮಾಡಿದ್ದು ಹೇಗೆ ಎಂಬ ಶುಭಸಂದೇಶ ವನ್ನು ನಾವು ನಿಮಗೆ ಪ್ರಕಟಿಸುತ್ತೇವೆ.
33 that God has fulfilled this to us their children, having raised up Jesus; as it is also written in the second psalm, *Thou* art my Son: this day have *I* begotten thee.ಏನಂ ದರೆ--ನೀನು ನನ್ನ ಮಗನು, ಈ ದಿನ ನಾನು ನಿನ್ನನ್ನು ಪಡೆದಿದ್ದೇನೆ ಎಂದು ಎರಡನೆಯ ಕೀರ್ತನೆಯಲ್ಲಿ ಸಹ ಬರೆದಿರುವ ಪ್ರಕಾರ ಅವರ ಮಕ್ಕಳಾದ ನಮಗೆ ದೇವರು ಯೇಸುವನ್ನು ತಿರಿಗಿ ಎಬ್ಬಿಸುವದರ ಮೂಲಕ ಅದನ್ನು ನೆರವೇರಿಸಿದ್ದಾನೆ ಎಂಬದೇ.
34 But that he raised him from among [the] dead, no more to return to corruption, he spoke thus: I will give to you the faithful mercies of David.ಇದಲ್ಲದೆ ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ್ದರಿಂದ ಆತನು ಇನ್ನೆಂದಿಗೂ ಕೊಳೆಯುವ ಅವಸ್ಥೆಗೆ ಸೇರ ತಕ್ಕವನಲ್ಲವೆಂಬದರ ವಿಷಯದಲ್ಲಿ ಆತನು ಹೇಳಿರು ವದೇನಂದರೆ--ದಾವೀದನ ಖಂಡಿತವಾದ ಕರುಣೆ ಗಳನ್ನು ನಾನು ನಿಮಗೆ ಕೊಡುತ್ತೇನೆ ಎಂಬದು.
35 Wherefore also he says in another, Thou wilt not suffer thy gracious one to see corruption.ಅದಕ್ಕನುಸಾರವಾಗಿ ಆತನು--ನೀನು ನಿನ್ನ ಪರಿ ಶುದ್ಧನಿಗೆ ಕೊಳೆಯುವ ಅವಸ್ಥೆಯನ್ನು ನೋಡಗೊಡಿ ಸುವದಿಲ್ಲವೆಂದು ಬೇರೊಂದು ಕೀರ್ತನೆಯಲ್ಲಿಯೂ ಹೇಳುತ್ತಾನೆ.
36 For David indeed, having in his own generation ministered to the will of God, fell asleep, and was added to his fathers and saw corruption.ದಾವೀದನು ದೇವರ ಚಿತ್ತಕ್ಕನು ಸಾರವಾಗಿ ತನ್ನ ಸ್ವಂತ ಸಂತತಿಯವರಿಗೆ ಸೇವೆ ಮಾಡಿದ ನಂತರ ಅವನು ನಿದ್ರೆಹೋಗಿ ತನ್ನ ಪಿತೃಗಳ ಬಳಿಯಲಿ ಸೇರಿ ಕೊಳೆಯುವ ಅವಸ್ಥೆಯನ್ನು ನೋಡಿದನು.
37 But he whom God raised up did not see corruption.ಆದರೆ ದೇವರು ಎಬ್ಬಿಸಿದಾತನು ಕೊಳೆಯುವ ಅವಸ್ಥೆಯನ್ನು ನೋಡಲೇ ಇಲ್ಲ.
38 Be it known unto you, therefore, brethren, that through this man remission of sins is preached to you,ಆದದರಿಂದ ಜನರೇ, ಸಹೋದರರೇ, ಈ ಮನುಷ್ಯನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬದು ನಿಮಗೆ ಸಾರೋಣವಾಗು ತ್ತದೆಂದೂ
39 and from all things from which ye could not be justified in the law of Moses, in him every one that believes is justified.ಮೋಶೆಯ ಯಾವ ನ್ಯಾಯಪ್ರಮಾಣ ದಿಂದ ಯಾವವುಗಳಲ್ಲಿ ನೀವು ನೀತಿವಂತರೆಂಬ ನಿರ್ಣಯವನ್ನು ಹೊಂದಲಾರದೆ ಹೋಗಿದ್ದಿರೋ ಅವೆಲ್ಲವುಗಳಿಂದ ನಂಬುವವರೆಲ್ಲರೂ ಆತನ ಮೂಲಕ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದಾರೆಂದು ನಿಮಗೆ ತಿಳಿದಿರಲಿ.
40 See therefore that that which is spoken in the prophets do not come upon [you],ಹೀಗಿರಲಾಗಿ ಪ್ರವಾದಿಗಳ ಗ್ರಂಥದಲ್ಲಿ ಹೇಳಿರುವದು ನಿಮ್ಮ ಮೇಲೆ ಬಾರದಂತೆ ಎಚ್ಚರಿಕೆಯಾಗಿರ್ರಿ.
41 Behold, ye despisers, and wonder and perish; for *I* work a work in your days, a work which ye will in no wise believe if one declare it to you.ಅದೇನಂದರೆ--ಇಗೋ, ತಿರ ಸ್ಕಾರ ಮಾಡುವವರೇ, ಆಶ್ಚರ್ಯಪಡಿರಿ, ನಾಶವಾಗಿ ಹೋಗಿರಿ, ನಿಮ್ಮ ದಿನಗಳಲ್ಲಿ ನಾನು ಒಂದು ಕಾರ್ಯ ವನ್ನು ಮಾಡುವೆನು; ಆ ಕಾರ್ಯವನ್ನು ಒಬ್ಬನು ನಿಮಗೆ ವಿವರಿಸಿದರೂ ನೀವು ಅದನ್ನು ಎಷ್ಟು ಮಾತ್ರಕ್ಕೂ ನಂಬುವದಿಲ್ಲ ಎಂಬದೇ.
42 And as they went out they begged that these words might be spoken to them the ensuing sabbath.ಯೆಹೂದ್ಯರು ಸಭಾಮಂದಿರವನ್ನು ಬಿಟ್ಟು ಹೋಗುತ್ತಿರುವಾಗ ಅನ್ಯಜನರು ಈ ಮಾತುಗಳನ್ನು ಬರುವ ಸಬ್ಬತ್ ದಿನದಲ್ಲಿಯೂ ತಮಗೆ ಸಾರಬೇಕೆಂದು ಕೇಳಿಕೊಂಡರು.
43 And the congregation of the synagogue having broken up, many of the Jews and of the worshipping proselytes followed Paul and Barnabas, who speaking to them, persuaded them to continue in the grace of God.ಸಭೆಯು ಮುಗಿದ ತರುವಾಯ ಯೆಹೂದ್ಯರಲ್ಲಿಯೂ ಯೆಹೂದ್ಯ ಮತಾವಲಂಬಿ ಗಳಲ್ಲಿಯೂ ಅನೇಕರು ಪೌಲ ಬಾರ್ನಬರನ್ನು ಹಿಂಬಾ ಲಿಸಿದರು. ಇವರು ಅವರ ಸಂಗಡ ಮಾತನಾಡಿ ದೇವರ ಕೃಪೆಯಲ್ಲಿ ನೆಲೆಗೊಂಡಿರಬೇಕೆಂದು ಅವರನ್ನು ಪ್ರೋತ್ಸಾಹಪಡಿಸಿದರು.
44 And on the coming sabbath almost all the city was gathered together to hear the word of God.ಮುಂದಿನ ಸಬ್ಬತ್ ದಿನದಲ್ಲಿ ಹೆಚ್ಚು ಕಡಿಮೆ ಪಟ್ಟಣದಲ್ಲಿದ್ದವರೆಲ್ಲಾ ದೇವರ ವಾಕ್ಯವನ್ನು ಕೇಳುವದಕ್ಕೆ ಕೂಡಿಬಂದರು.
45 But the Jews, seeing the crowds, were filled with envy, and contradicted the things said by Paul, [contradicting and] speaking injuriously.ಆದರೆ ಯೆಹೂದ್ಯರು ಜನ ಸಮೂಹಗಳನ್ನು ನೋಡಿ ಹೊಟ್ಟೇಕಿಚ್ಚಿನಿಂದ ತುಂಬಿ ದವರಾಗಿ ಪೌಲನು ಹೇಳಿದವುಗಳನ್ನು ವಿರೋಧಿಸಿ ದೇವದೂಷಣೆ ಮಾಡುತ್ತಾ ಎದುರು ಮಾತನಾಡಿದರು.
46 And Paul and Barnabas spoke boldly and said, It was necessary that the word of God should be first spoken to you; but, since ye thrust it from you, and judge yourselves unworthy of eternal life, lo, we turn to the nations;ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
47 for thus has the Lord enjoined us: I have set thee for a light of the nations, that thou shouldest be for salvation to the end of the earth.ಯಾಕಂ ದರೆ--ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಣೆಗೆ ಕಾರಣವಾಗಿರುವಂತೆ ನಾನು ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ಹೇಳಿದ ಹಾಗೆ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ.
48 And [those of] the nations, hearing it, rejoiced, and glorified the word of the Lord, and believed, as many as were ordained to eternal life.ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು ಕರ್ತನ ವಾಕ್ಯವನ್ನು ಮಹಿಮೆ ಪಡಿಸಿದರು. ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರೂ ನಂಬಿದರು.
49 And the word of the Lord was carried through the whole country.ತರುವಾಯ ಕರ್ತನ ವಾಕ್ಯವು ಆ ಪ್ರಾಂತ್ಯದ ಎಲ್ಲಾ ಕಡೆಯಲ್ಲಿ ಸಾರಲ್ಪಟ್ಟಿತು.
50 But the Jews excited the women of the upper classes who were worshippers, and the first people of the city, and raised a persecution against Paul and Barnabas, and cast them out of their coasts.ಆದರೆ ಭಕ್ತಿಯುಳ್ಳ ಮತ್ತು ಗೌರವವುಳ್ಳ ಸ್ತ್ರೀಯರನ್ನೂ ಪಟ್ಟಣದ ಪ್ರಮುಖರನ್ನೂ ಯೆಹೂದ್ಯರು ಪ್ರೇರಿಸಿ ಪೌಲ ಬಾರ್ನಬರಿಗೆ ವಿರೋಧವಾಗಿ ಹಿಂಸೆ ಯನ್ನೆಬ್ಬಿಸಿ ತಮ್ಮ ಮೇರೆಗಳಿಂದ ಅವರನ್ನು ಅಟ್ಟಿಬಿಟ್ಟರು.
51 But they, having shaken off the dust of their feet against them, came to Iconium.ಇವರು ತಮ್ಮ ಕಾಲಿಗೆ ಹತ್ತಿದ್ದ ಧೂಳನ್ನು ಅವರ ಮೇಲೆ ಝಾಡಿಸಿಬಿಟ್ಟು ಇಕೋನ್ಯಕ್ಕೆ ಬಂದರು.
52 And the disciples were filled with joy and [the] Holy Spirit.ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮ ಭರಿತರೂ ಆದರು.
Kannada Bible