2 Chronicles 27 - WEB (Kannada)

1 Jotham was twenty-five years old when he began to reign; and he reigned sixteen years in Jerusalem: and his mother's name was Jerushah the daughter of Zadok.ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಹದಿನಾರು ವರುಷಗಳು ಆಳಿದನು. ಇವನ ತಾಯಿಯಾದ ಯೆರೂಷಳು ಚಾದೋಕನ ಮಗಳು.

2 He did that which was right in the eyes of Yahweh, according to all that his father Uzziah had done: however he didn't enter into the temple of Yahweh. The people did yet corruptly.ಇವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು. ಆದರೆ ಕರ್ತನ ಮನೆಯಲ್ಲಿ ಪ್ರವೇಶಿಸಲಿಲ್ಲ. ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.

3 He built the upper gate of the house of Yahweh, and on the wall of Ophel he built much.ಇವನು ಕರ್ತನ ಮಂದಿರದ ಎತ್ತರವಾದ ಬಾಗಲನ್ನು ಕಟ್ಟಿಸಿ ಓಫೇಲ್‌ ಎಂಬ ಗೋಡೆಯ ಮೇಲೆ ಬಹಳವಾಗಿ ಕಟ್ಟಿಸಿದನು.

4 Moreover he built cities in the hill-country of Judah, and in the forests he built castles and towers.ಇದಲ್ಲದೆ ಯೆಹೂದ ಪರ್ವತಗಳಲ್ಲಿ ಪಟ್ಟಣಗಳನ್ನೂ ಅರಣ್ಯದಲ್ಲಿ ಕೋಟೆ ಗಳನ್ನೂ ಗಡೀಸ್ಥಾನಗಳನ್ನೂ ಕಟ್ಟಿಸಿದನು.

5 He fought also with the king of the children of Ammon, and prevailed against them. The children of Ammon gave him the same year one hundred talents of silver, and ten thousand measures of wheat, and ten thousand of barley. So much did the children of Ammon render to him, in the second year also, and in the third.ಇವನು ಅಮ್ಮೋನಿಯರ ಅರಸನ ಸಂಗಡ ಯುದ್ಧಮಾಡಿ ಅವ ನನ್ನು ಜಯಿಸಿದನು. ಆದ್ದರಿಂದ ಅಮ್ಮೋನನ ಮಕ್ಕಳು ಅದೇ ವರುಷದಲ್ಲಿ ನೂರು ಬೆಳ್ಳಿ ತಲಾಂತುಗಳನ್ನೂ ಹತ್ತುಸಾವಿರ ಅಳತೆಯ ಗೋಧಿಯನ್ನೂ ಹತ್ತು ಸಾವಿರ ಕೋರ್‌ ಜವೆ ಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನನ ಮಕ್ಕಳು ಎರಡನೇ ವರುಷದಲ್ಲಿಯೂ ಮೂರನೇ ವರುಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.

6 So Jotham became mighty, because he ordered his ways before Yahweh his God.ಹೀಗೆಯೇ ಯೋತಾಮನು ತನ್ನ ದೇವ ರಾದ ಕರ್ತನ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿ ದ್ದರಿಂದ ಇವನು ಬಲಗೊಂಡನು.

7 Now the rest of the acts of Jotham, and all his wars, and his ways, behold, they are written in the book of the kings of Israel and Judah.ಯೋತಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಯುದ್ಧಗಳೂ ಅವನ ಮಾರ್ಗಗಳೂ ಇಗೋ, ಅವು ಇಸ್ರಾಯೇಲ್‌ ಯೆಹೂದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

8 He was five and twenty years old when he began to reign, and reigned sixteen years in Jerusalem.ಇವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು.

9 Jotham slept with his fathers, and they buried him in the city of David: and Ahaz his son reigned in his place.ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾ ಜನು ಅವನಿಗೆ ಬದಲಾಗಿ ಆಳಿದನು.

Kannada Bible