2 Chronicles 16 - WEB (Kannada)

1 In the six and thirtieth year of the reign of Asa, Baasha king of Israel went up against Judah, and built Ramah, that he might not allow anyone to go out or come in to Asa king of Judah.ಆಸನ ಆಳ್ವಿಕೆಯ ಮೂವತ್ತಾರನೇ ವರುಷದಲ್ಲಿ ಇಸ್ರಾಯೇಲಿನ ಅರಸನಾದ ಬಾಷನು ಯೆಹೂದಕ್ಕೆ ವಿರೋಧವಾಗಿ ಬಂದು ಯೆಹೂ ದದ ಅರಸನಾದ ಆಸನ ಬಳಿಗೆ ಯಾರೂ ಹೊರಟು ಹೋಗುವದಕ್ಕೂ ಒಳಗೆ ಬರುವದಕ್ಕೂ ಆಗದ ಹಾಗೆ ರಾಮವನ್ನು ಕಟ್ಟಿಸಿದನು.

2 Then Asa brought out silver and gold out of the treasures of the house of Yahweh and of the king's house, and sent to Ben Hadad king of Syria, who lived at Damascus, saying,ಆಗ ಆಸನು ಕರ್ತನ ಆಲಯದ ಬೊಕ್ಕಸಗಳಿಂದಲೂ ಅರಸನ ಮನೆಯ ಬೊಕ್ಕಸದಿಂದಲೂ ಬೆಳ್ಳಿಬಂಗಾರವನ್ನು ತೆಗೆದುಕೊಂಡು ದಮಸ್ಕದಲ್ಲಿ ವಾಸವಾಗಿರುವ ಅರಾಮಿನ ಅರಸನಾದ ಬೆನ್ಹದದನ ಬಳಿಗೆ ಕಳುಹಿಸಿ ಅವನಿಗೆ--ನನ್ನ ತಂದೆಗೂ ನಿನ್ನ ತಂದೆಗೂ ಇದ್ದ ಹಾಗೆ ನನಗೂ ನಿನಗೂ ಒಡಂಬಡಿಕೆ ಉಂಟು.

3 [There is] a league between me and you, as [there was] between my father and your father: behold, I have sent you silver and gold; go, break your league with Baasha king of Israel, that he may depart from me.ಇಗೋ, ನಾನು ಬೆಳ್ಳಿಬಂಗಾರ ವನ್ನು ನಿನಗೆ ಕಳುಹಿಸಿದ್ದೇನೆ; ಇಸ್ರಾಯೇಲಿನ ಅರಸ ನಾದ ಬಾಷನು ನನ್ನನ್ನು ಬಿಟ್ಟುಹೋಗುವ ಹಾಗೆ ನೀನು ಹೋಗಿ ಅವನ ಸಂಗಡ ಮಾಡಿದ ಒಡಂಬಡಿ ಕೆಯನ್ನು ಮುರಿಯಬೇಕು ಎಂದು ಹೇಳಿದನು.

4 Ben Hadad listened to king Asa, and sent the captains of his armies against the cities of Israel; and they struck Ijon, and Dan, and Abel Maim, and all the store-cities of Naphtali.ಬೆನ್ಹದ ದನು ಅರಸನಾದ ಆಸನ ಮಾತು ಕೇಳಿ ತನ್ನ ಸೈನ್ಯಾಧಿ ಪತಿಗಳನ್ನು ಇಸ್ರಾಯೇಲಿನ ಪಟ್ಟಣಗಳ ಮೇಲೆ ಕಳು ಹಿಸಿದನು. ಅವರು ಇಯ್ಯೋನನ್ನೂ ದಾನನನ್ನೂ ಅಬೇ ಲ್ಮಯಿಮ್‌ವನ್ನೂ ನಫ್ತಾಲಿಯನ್ನು ಸಮಸ್ತ ಉಗ್ರಾಣ ಗಳ ಪಟ್ಟಣಗಳನ್ನೂ ಸಂಹರಿಸಿದರು.

5 It happened, when Baasha heard of it, that he left off building Ramah, and let his work cease.ಬಾಷನು ಇದನ್ನು ಕೇಳಿದಾಗ ರಾಮವನ್ನು ಕಟ್ಟಿಸುವದನ್ನು ಬಿಟ್ಟು ತನ್ನ ಕೆಲಸವನ್ನು ನಿಲ್ಲಿಸಿಬಿಟ್ಟನು.

6 Then Asa the king took all Judah; and they carried away the stones of Ramah, and the timber of it, with which Baasha had built; and he built therewith Geba and Mizpah.ಆಗ ಅರಸನಾದ ಆಸನು ಯೆಹೂದದವರೆಲ್ಲರನ್ನು ಕರಕೊಂಡುಹೋದನು. ಬಾಷನು ಕಟ್ಟಿಸುತ್ತಿದ್ದ ರಾಮದ ಕಲ್ಲುಗಳನ್ನೂ ಅದರ ತೊಲೆಗಳನ್ನೂ ತಕ್ಕೊಂಡು ಹೋದರು; ಅವುಗಳಿಂದ ಗೆಬವನ್ನೂ ಮಿಚ್ಪೆಯನ್ನೂ ಕಟ್ಟಿಸಿದನು.

7 At that time Hanani the seer came to Asa king of Judah, and said to him, Because you have relied on the king of Syria, and have not relied on Yahweh your God, therefore is the host of the king of Syria escaped out of your hand.ಅದೇ ಕಾಲದಲ್ಲಿ ಪ್ರವಾದಿಯಾದ ಹನಾನಿಯು ಯೆಹೂದದ ಅರಸನಾದ ಆಸನ ಬಳಿಗೆ ಬಂದು ಅವನಿಗೆ -- ನೀನು ನಿನ್ನ ದೇವರಾದ ಕರ್ತನ ಮೇಲೆ ಆತುಕೊಳ್ಳದೆ ಅರಾಮಿನ ಅರಸನ ಮೇಲೆ ಆತು ಕೊಂಡದ್ದರಿಂದ ಅರಾಮಿನ ಅರಸನ ಸೈನ್ಯವು ನಿನ್ನ ಕೈಯಿಂದ ತಪ್ಪಿಸಿಕೊಂಡಿತು.

8 Weren't the Ethiopians and the Lubim a huge host, with chariots and horsemen exceeding many? yet, because you did rely on Yahweh, he delivered them into your hand.ಕೂಷಿಯರೂ ಲೂಬ್ಯರೂ ಮಹಾಸೈನ್ಯವಲ್ಲವೋ? ಅವರ ಸಂಗಡ ಅನೇಕ ರಥಗಳೂ ರಾಹುತರೂ ಇದ್ದರಲ್ಲವೇ? ಆಗ ನೀನು ಕರ್ತನ ಮೇಲೆ ಆತುಕೊಂಡದ್ದರಿಂದ ಆತನು ಅವರನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದನು.

9 For the eyes of Yahweh run back and forth throughout the whole earth, to show himself strong in the behalf of them whose heart is perfect toward him. Herein you have done foolishly; for from henceforth you shall have wars.ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು.

10 Then Asa was angry with the seer, and put him in the prison-house; for he was in a rage with him because of this thing. Asa oppressed some of the people at the same time.ಆಗ ಆಸನು ಪ್ರವಾದಿಯ ಮೇಲೆ ಕೋಪಗೊಂಡು ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಅವನ ಮಾತು ಗಳ ನಿಮಿತ್ತ ಅವನ ಮೆಲೆ ರೌದ್ರವುಳ್ಳವನಾಗಿದ್ದನು. ಇದಲ್ಲದೆ ಅದೇ ಕಾಲದಲ್ಲಿ ಆಸನು ಜನರಲ್ಲಿ ಕೆಲವ ರನ್ನು ಬಾಧಿಸಿದನು.

11 Behold, the acts of Asa, first and last, behold, they are written in the book of the kings of Judah and Israel.ಇಗೋ, ಆಸನ ಕಾರ್ಯಗಳು ಮೊದಲನೆಯವುಗಳೂ ಕಡೆಯವುಗಳೂ ಯೆಹೂ ದದ ಇಸ್ರಾಯೇಲಿನ ಅರಸರ ಪುಸ್ತಕದಲ್ಲಿ ಬರೆದಿವೆ.

12 In the thirty-ninth year of his reign Asa was diseased in his feet; his disease was exceeding great: yet in his disease he didn't seek Yahweh, but to the physicians.ಆಸನು ತನ್ನ ಆಳ್ವಿಕೆಯ ಮೂವತ್ತೊಂಭತ್ತನೇ ವರುಷದಲ್ಲಿ ತನ್ನ ಕಾಲುಗಳಲ್ಲಿ ರೋಗವುಳ್ಳವನಾ ಗಿದ್ದನು. ಅವನ ರೋಗವು ಅತಿಘೋರವಾಯಿತು. ಅವನು ತನ್ನ ರೋಗದಲ್ಲಿ ಕರ್ತನನ್ನು ಹುಡುಕದೆ ವೈದ್ಯರನ್ನು ಹುಡುಕಿದನು.

13 Asa slept with his fathers, and died in the one and fortieth year of his reign.ಆಸನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ತನ್ನ ಆಳ್ವಿಕೆಯ ನಾಲ್ವತ್ತೊಂದನೇ ವರುಷದಲ್ಲಿ ಸತ್ತನು.

14 They buried him in his own tombs, which he had hewn out for himself in the city of David, and laid him in the bed which was filled with sweet odors and various kinds [of spices] prepared by the perfumers' are: and they made a very great burning for him.ಅವನು ತನಗೋಸ್ಕರ ದಾವೀ ದನ ಪಟ್ಟಣದಲ್ಲಿ ಅಗಿಸಿದ ಅವನ ಸ್ವಂತ ಸಮಾಧಿಯಲ್ಲಿ ಅವನನ್ನು ಹೂಣಿಟ್ಟರು. ಅವರು ತೈಲಗಾರರ ವಿದ್ಯೆ ಯಿಂದ ಸಿದ್ಧಮಾಡಿದ ಸುಗಂಧಗಳಿಂದಲೂ ನಾನಾ ವಿಧವಾದ ಪದಾರ್ಥಗಳಿಂದಲೂ ತುಂಬಲ್ಪಟ್ಟ ಹಾಸಿ ಗೆಯ ಮೇಲೆ ಅವನನ್ನು ಮಲಗಿಸಿ ಅವನಿಗೋಸ್ಕರ ಬಹಳ ಹೆಚ್ಚಾಗಿ (ಧೂಪವನ್ನು) ಸುಟ್ಟರು.

Kannada Bible