1 Chronicles 19 - WEB (Kannada)

1 It happened after this, that Nahash the king of the children of Ammon died, and his son reigned in his place.ಇದರ ತರುವಾಯ ಏನಾಯಿತಂದರೆ, ಅಮ್ಮೋನಿಯರ ಅರಸನಾದ ನಾಹಾಷನು ಸತ್ತನು; ಅವನ ಮಗನು ಅವನಿಗೆ ಬದಲಾಗಿ ಆಳಿ ದನು.

2 David said, I will show kindness to Hanun the son of Nahash, because his father shown kindness to me. So David sent messengers to comfort him concerning his father. David's servants came into the land of the children of Ammon to Hanun, to comfort him.ಆಗ ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ಕೃಪೆ ತೋರಿಸಿದ್ದರಿಂದ ಅವನ ಮಗನಾದ ಹಾನೂನನಿಗೆ ನಾನು ಕೃಪೆ ತೋರಿಸುವೆನು ಅಂದನು. ದಾವೀದನು ಅವನ ತಂದೆಯನ್ನು ಕುರಿತು ಅವನಿಗೆ ಆದರಣೆ ಕೊಡಲು ಸೇವಕರನ್ನು ಕಳುಹಿ ಸಿದನು. ಹೀಗೆಯೇ ದಾವೀದನ ಸೇವಕರು ಅವನಿಗೆ ಆದರಣೆ ಕೊಡಲು ಅಮ್ಮೋನನ ಮಕ್ಕಳ ದೇಶಕ್ಕೆ ಹಾನೂನನ ಬಳಿಗೆ ಬಂದರು.

3 But the princes of the children of Ammon said to Hanun, Think you that David does honor your father, in that he has sent comforters to you? Aren't his servants come to you to search, and to overthrow, and to spy out the land?ಆದರೆ ಅಮ್ಮೋನಿಯರ ಪ್ರಧಾನರು ಹಾನೂನನಿಗೆ--ದಾವೀದನು ನಿನ್ನ ಬಳಿಗೆ ಆದರಣೆ ಕೊಡುವವರನ್ನು ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನಪಡಿಸುತ್ತಾನೆಂದು ನೀನು ನೆನಸು ತ್ತಿಯೋ? ಅವನ ಸೇವಕರು ಶೋಧಿಸಲೂ ಕೆಡವಿ ಹಾಕಲೂ ದೇಶವನ್ನು ಪಾಳತಿ ನೋಡಲೂ ನಿನ್ನ ಬಳಿಗೆ ಬರಲಿಲ್ಲವೋ ಅಂದರು.

4 So Hanun took David's servants, and shaved them, and cut off their garments in the middle, even to their buttocks, and sent them away.ಆದದರಿಂದ ಹಾನೂ ನನು ದಾವೀದನ ಸೇವಕರನ್ನು ಹಿಡಿದು ಅವರನ್ನು ಬೋಳಿಸಿ ಅವರ ಅಂಗಿಗಳನ್ನು ಮಧ್ಯದಲ್ಲಿ ಸೊಂಟದ ಕೆಳಗಿನ ವರೆಗೂ ಕತ್ತರಿಸಿ ಅವರನ್ನು ಕಳುಹಿಸಿಬಿಟ್ಟನು.

5 Then there went certain persons, and told David how the men were served. He sent to meet them; for the men were greatly ashamed. The king said, Stay at Jericho until your beards be grown, and then return.ಆಗ ಕೆಲವರು ಹೋಗಿ ಈ ಮನುಷ್ಯರನ್ನು ಕುರಿತು ದಾವೀದನಿಗೆ ತಿಳಿಸಿದರು. ಆ ಮನುಷ್ಯರು ಬಹಳವಾಗಿ ನಾಚಿಕೆಪಟ್ಟದ್ದರಿಂದ ಅವರನ್ನು ಎದುರುಗೊಳ್ಳಲು ಸೇವ ಕರನ್ನು ಕಳುಹಿಸಿ ಅರಸನು ಅವರಿಗೆ--ನಿಮ್ಮ ಗಡ್ಡಗಳು ಬೆಳೆಯುವ ವರೆಗೂ ಯೆರಿಕೋವಿನಲ್ಲಿ ಇರ್ರಿ; ಆಮೇಲೆ ತಿರಿಗಿ ಬನ್ನಿರಿ ಎಂದು ಹೇಳಿದನು.

6 When the children of Ammon saw that they had made themselves odious to David, Hanun and the children of Ammon sent one thousand talents of silver to hire them chariots and horsemen out of Mesopotamia, and out of Arammaacah, and out of Zobah.ಅಮ್ಮೋನಿಯರು, ತಾವು ದಾವೀದನಿಗೆ ಅಸಹ್ಯರಾ ದೆವೆಂದು ಕಂಡಾಗ ಹಾನೂನನೂ ಅಮ್ಮೋನಿಯರೂ ಅರಾಮಿನಲ್ಲಿಯೂ ಅರಾಮ್‌ ಮಾಕದಲ್ಲಿಯೂ ಚೋಬಾದಲ್ಲಿಯೂ ರಥಗಳನ್ನೂ ರಾಹುತರನ್ನೂ ಕೂಲಿಗೆ ತೆಗೆದುಕೊಳ್ಳಲು ಸಾವಿರ ಬೆಳ್ಳಿ ತಲಾಂತುಗಳನ್ನು ಕಳುಹಿಸಿದರು.

7 So they hired them thirty-two thousand chariots, and the king of Maacah and his people, who came and encamped before Medeba. The children of Ammon gathered themselves together from their cities, and came to battle.ಹೀಗೆಯೇ ಅವರು ಮೂವತ್ತೆರಡು ಸಾವಿರ ರಥಗಳನ್ನೂ ಮಾಕದ ಅರಸನನ್ನೂ ಅವನ ಜನರನ್ನೂ ಕೂಲಿಗೆ ತೆಗೆದುಕೊಂಡರು. ಇವರು ಬಂದು ಮೇದೆಬ ಬಳಿಯಲ್ಲಿ ದಂಡಿಳಿದರು. ಇದಲ್ಲದೆ ಅಮ್ಮೋ ನಿಯರು ತಮ್ಮ ಪಟ್ಟಣಗಳಿಂದ ಕೂಡಿಕೊಂಡು ಯುದ್ಥಕ್ಕೆ ಬಂದರು.

8 When David heard of it, he sent Joab, and all the host of the mighty men.ದಾವೀದನು ಇದನ್ನು ಕೇಳಿದಾಗ ಅವನು ಯೋವಾ ಬನನ್ನೂ ಸಮಸ್ತ ಪರಾಕ್ರಮಶಾಲಿಗಳ ಸೈನ್ಯವನ್ನೂ ಕಳುಹಿಸಿದನು.

9 The children of Ammon came out, and put the battle in array at the gate of the city: and the kings who had come were by themselves in the field.ಆಗ ಅಮ್ಮೋನಿಯರು ಹೊರಟು ಪಟ್ಟಣದ ಬಾಗಿಲ ದ್ವಾರದ ಹತ್ತಿರ ವ್ಯೂಹಕಟ್ಟಿದರು. ಆದರೆ ಬಂದ ಅರಸುಗಳು ಬೇರೆಯಾಗಿ ಹೊಲದಲ್ಲಿ ನಿಂತಿದ್ದರು.

10 Now when Joab saw that the battle was set against him before and behind, he chose of all the choice men of Israel, and put them in array against the Syrians.ಯುದ್ಧವು ತನಗೆ ವಿರೋಧವಾಗಿ ಹಿಂದೆಯೂ ಮುಂದೆಯೂ ಇರುವದನ್ನು ಯೋವಾ ಬನು ಕಂಡಾಗ ಅವನು ಇಸ್ರಾಯೇಲಿನಲ್ಲಿ ಆಯಲ್ಪಟ್ಟ ಸಮಸ್ತರೊಳಗೆ ಜನರನ್ನು ಆದುಕೊಂಡು ಅವರನ್ನು ಅರಾಮ್ಯರಿಗೆದುರಾಗಿ ವ್ಯೂಹ ಕಟ್ಟಿದನು.

11 The rest of the people he committed into the hand of Abishai his brother; and they put themselves in array against the children of Ammon.ಆದರೆ ಮಿಕ್ಕಾದವರು ಅಮ್ಮೋನಿಯರಿಗೆದುರಾಗಿ ವ್ಯೂಹಕಟ್ಟುವ ಹಾಗೆ ಅವರನ್ನು ತನ್ನ ಸಹೋದರನಾದ ಅಬ್ಷೈನ ಕೈಯಲ್ಲಿ ಒಪ್ಪಿಸಿಕೊಟ್ಟು ಅವನಿಗೆ--

12 He said, If the Syrians be too strong for me, then you shall help me; but if the children of Ammon be too strong for you, then I will help you.ಅರಾಮ್ಯರು ನನಗಿಂತ ಬಲವುಳ್ಳವರಾಗಿದ್ದರೆ ನೀನು ನನಗೆ ಸಹಾಯ ಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳ ವರಾಗಿದ್ದರೆ, ನಾನು ನಿನಗೆ ಸಹಾಯ ಮಾಡುವೆನು,

13 Be of good courage, and let us play the man for our people, and for the cities of our God: and Yahweh do that which seems him good.ಧೈರ್ಯವಾಗಿರು; ನಾವು ನಮ್ಮ ಜನರಿಗೋಸ್ಕ ರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲ ಗೊಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು.

14 So Joab and the people who were with him drew near before the Syrians to the battle; and they fled before him.ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡಲು ಮುಂಗೊಂಡರು.

15 When the children of Ammon saw that the Syrians were fled, they likewise fled before Abishai his brother, and entered into the city. Then Joab came to Jerusalem.ಅವರು ಅವನ ಎದುರಿ ನಿಂದ ಓಡಿಹೋದರು. ಅರಾಮ್ಯರು ಓಡಿಹೋದದ್ದನ್ನು ಅಮ್ಮೋನಿಯರು ನೋಡಿದಾಗ ಅವರು ಹಾಗೆಯೇ ಅವನ ಸಹೋದರನಾದ ಅಬ್ಷೈನ ಎದುರಿನಿಂದ ಓಡಿಹೋಗಿ ಪಟ್ಟಣದೊಳಗೆ ಪ್ರವೇಶಿಸಿದರು. ಆಗ ಯೋವಾಬನು ಯೆರೂಸಲೇಮಿಗೆ ಬಂದನು.

16 When the Syrians saw that they were put to the worse before Israel, they sent messengers, and drew forth the Syrians who were beyond the River, with Shophach the captain of the host of Hadarezer at their head.ಅರಾಮ್ಯರು ತಾವು ಇಸ್ರಾಯೇಲಿನ ಮುಂದೆ ಸೋತುಹೋದದ್ದನ್ನು ಕಂಡಾಗ ಅವರು ದೂತರನ್ನು ಕಳುಹಿಸಿ ನದಿಯ ಆಚೆಯಲ್ಲಿರುವ ಅರಾಮ್ಯ ರನ್ನು ಕರಕೊಂಡರು. ಹದರೆಜರನ ಸೈನ್ಯಾಧಿಪತಿ ಯಾದ ಶೋಫಕನು ಅವರ ಮೇಲೆ ಇದ್ದನು.

17 It was told David; and he gathered all Israel together, and passed over the Jordan, and came on them, and set the battle in array against them. So when David had put the battle in array against the Syrians, they fought with him.ಅದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಸಮಸ್ತ ಇಸ್ರಾಯೇಲ್ಯರನ್ನು ಕೂಡಿಸಿ ಯೊರ್ದನನ್ನು ದಾಟಿ ಅವರಿಗೆದುರಾಗಿ ವ್ಯೂಹಕಟ್ಟಿದನು. ದಾವೀದನು ಅರಾಮ್ಯರಿಗೆದುರಾಗಿ ಸೈನ್ಯವನ್ನು ವ್ಯೂಹಕಟ್ಟಿದ ಮೇಲೆ ಅವರು ಅವನ ಸಂಗಡ ಯುದ್ಧಮಾಡಿದರು.

18 The Syrians fled before Israel; and David killed of the Syrians [the men of] seven thousand chariots, and forty thousand footmen, and killed Shophach the captain of the host.ಆದರೆ ಅರಾಮ್ಯರು ಇಸ್ರಾಯೇಲಿನ ಎದುರಿನಿಂದ ಓಡಿಹೋದರು. ದಾವೀದನು ಅರಾಮ್ಯರಲ್ಲಿ ಏಳು ಸಾವಿರ ರಥವುಳ್ಳವರನ್ನೂ ನಾಲ್ವತ್ತು ಸಾವಿರ ಕಾಲಾಳು ಗಳನ್ನೂ ಸೈನ್ಯಾಧಿಪತಿಯಾದ ಶೋಫಕನನ್ನೂ ಕೊಂದು ಹಾಕಿದನು.

19 When the servants of Hadarezer saw that they were put to the worse before Israel, they made peace with David, and served him: neither would the Syrians help the children of Ammon any more.ಹದರೆಜರನ ಸೇವಕರು ತಾವು ಇಸ್ರಾ ಯೇಲಿನ ಮುಂದೆ ಸೋಲಿಸಲ್ಪಟ್ಟದ್ದನ್ನು ಕಂಡಾಗ ಅವರು ದಾವೀದನ ಸಂಗಡ ಸಮಾಧಾನ ಮಾಡಿ ಕೊಂಡು ಅವನ ಸೇವಕರಾದರು. ತರುವಾಯ ಅರಾ ಮ್ಯರು ಅಮ್ಮೋನಿಯರಿಗೆ ಇನ್ನು ಸಹಾಯ ಮಾಡಲು ಮನಸ್ಸಿಲ್ಲದೆ ಇದ್ದರು.

Kannada Bible